ಬೆಂಗಳೂರು: ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಲೋಕೋಪಯೋಗಿ ಖಾತೆ ಸಚಿವ ಸತೀಶ್ ಜಾರಕಿಹೊಳಿ ಅವರು
ಬಳ್ಳಾರಿಯ ಪ್ರಭಾವಿ ಬಿಜೆಪಿ ನಾಯಕ ಬಿ ಶ್ರೀರಾಮುಲು ಅವರನ್ನು ಕಾಂಗ್ರೆಸ್ ಗೆ ಕರೆತಂದರೆ ತನ್ನನ್ನು ತುಳಿದಂತೆ ಆಗುವುದಿಲ್ಲ,
ಅದೆಲ್ಲ ಊಹಾಪೋಹಗಳು, ಅವರ ಕಾರ್ಯಕ್ಷೇತ್ರ ಬಳ್ಳಾರಿ ಮತ್ತು ತನ್ನದು ಬೆಳಗಾವಿ, ತಮ್ಮ ನಡುವೆ ಕ್ಲ್ಯಾಷ್ ಉಂಟಾಗುವ ಸಂದರ್ಭವೇ ಉಂಟಾಗಲ್ಲ ಎಂದು ಹೇಳಿದರು.
ಅಷ್ಟಕ್ಕೂ ಖುದ್ದು ಶ್ರೀರಾಮುಲು ಅವರೇ ಕಾಂಗ್ರೆಸ್ ಗೆ ಬರಲ್ಲ ಅಂತ ಹೇಳಿದ್ದಾರೆ,
ಮಾಧ್ಯಮದವರಿಗೆ ಇನ್ನೂ ಸಂಶಯವಿದ್ದರೆ ತನ್ನನ್ನು ಯಾರು ತುಳಿಯಬೇಕೆಂದಿದ್ದಾರೋ ಅವರನ್ನೇ ಈ ಪ್ರಶ್ನೆ ಕೇಳಲಿ ಎಂದು ಜಾರಕಿಹೊಳಿ ಹೇಳಿದರು.
Laxmi News 24×7