Breaking News

3 ಕೋಟಿ ಅಂತರದಲ್ಲಿ ವಿನ್ ಆದ ದೋಸ್ತಹನುಮಂತ

Spread the love

ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಹನುಮಂತ ಅವರು ವಿನ್ನರ್ ಎಂದು ಘೋಷಣೆ ಆಗಿದೆ. ಅವರು ದೊಡ್ಮನೆಯಲ್ಲಿ ಕೆಲ ವಾರಗಳ ಬಳಿಕ ಎಂಟ್ರಿ ಕೊಟ್ಟರೂ ಮೆಚ್ಚುಗೆ ಪಡೆದರು. ಈಗ ದೊಡ್ಮನೆಯಲ್ಲಿ ಅವರು ಕಪ್ ಎತ್ತುವ ಮೂಲಕ ಗಮನ ಸೆಳೆದಿದ್ದಾರೆ. ಅವರ ಗೆಲುವಿನ ಬಗ್ಗೆ ಫ್ಯಾನ್ಸ್ ಕೂಡ ಖುಷಿ ವ್ಯಕ್ತಪಡಿಸಿದ್ದಾರೆ. ಅವರು ದೊಡ್ಡ ಅಂತರದಿಂದ ಗೆದ್ದಿದ್ದಾರೆ ಅನ್ನೋ ವಿಚಾರ ರಿವೀಲ್ ಆಗಿದೆ.

ಬಿಗ್ ಬಾಸ್ ಕನ್ನಡ ಸೀಸನ್ 11’ರ ವಿಜೇತನಾಗಿ ಹನುಮಂತ ಅವರು ಹೊರ ಹೊಮ್ಮಿದ್ದಾರೆ. ಅವರಿಗೆ ಎಲ್ಲ ಕಡೆಗಳಿಂದ ಶುಭಾಶಯ ಬರುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಹನುಮಂತ ಅವರು ವಿನ್ನರ್ ಎಂದು ಸಂಭ್ರಮಿಸಲಾಗುತ್ತಿದೆ. ಹಾಗಾದರೆ, ಹನುಮಂತ ಅವರಿಗೆ ಸಿಕ್ಕ ಒಟ್ಟೂ ವೋಟ್ ಎಷ್ಟು? ರನ್ನರ್​ ಅಪ್ ಆದ ತ್ರಿವಿಕ್ರಂ ಅವರಿಗೆ ಸಿಕ್ಕ ಮತಗಳು ಎಷ್ಟು? ಈ ವಿಚಾರವನ್ನು ಸುದೀಪ್ ರಿವೀಲ್ ಮಾಡಿದ್ದಾರೆ. ಸುಮಾರು 3 ಕೋಟಿ ಮತಗಳ ಅಂತರದಿಂದ ಹನುಮಂತ ಅವರು ವಿಜಯ ಸಾಧಿಸಿದ್ದಾರೆ.

ಹನುಮಂತ-ತ್ರಿವಿಕ್ರಂ ವೋಟ್​ಗಳ ಮಧ್ಯೆ ಅಜಗಜಾಂತರ; 3 ಕೋಟಿ ಅಂತರದಲ್ಲಿ ವಿನ್ ಆದ ದೋಸ್ತ

ಕಳೆದ ವರ್ಷಕ್ಕಿಂತ ಈ ವರ್ಷ ವೋಟ್ ಮಾಡುವವರ ಸಂಖ್ಯೆ ಹೆಚ್ಚಿದೆ. ಕಳೆದ ವರ್ಷ ವಿನ್ನರ್​ಗೆ ಬಿದ್ದಷ್ಟು ವೋಟ್ ರನ್ನರ್​ ಅಪ್​ಗೆ ಸಿಕ್ಕಿದೆ ಎಂದು ಸುದೀಪ್ ರಿವೀಲ್ ಮಾಡಿದ್ದಾರೆ. ಜಿಯೋ ಸಿನಿಮಾದಲ್ಲಿ ಪ್ರತಿ ವ್ಯಕ್ತಿಗೆ ಒಂದು ದಿನಕ್ಕೆ 99 ವೋಟ್ ಮಾಡಲು ಅವಕಾಶ ಇತ್ತು. ಇದನ್ನು ಜನರು ಹೆಚ್ಚು ಆಸಕ್ತಿಯಿಂದ ಮಾಡಿದ್ದಾರೆ.

ವಿನ್ನರ್ ಹನುಮಂತ ಅವರಿಗೆ ಬರೋಬ್ಬರಿ 5,23,89,313 ಮತಗಳು ಬಿದ್ದಿವೆ. ಸೆಕೆಂಡರ್ ರನ್ನರ್​ ಅಪ್ ರಜತ್​​ಗೆ 2,53,01,251 ವೋಟ್​ಗಳು ಬಿದ್ದಿವೆ. ಅಂದರೆ ಇಬ್ಬರ ಮಧ್ಯೆ ಸುಮಾರು 2.70 ಕೋಟಿ ಮತಗಳ ಅಂತರ ಇದೆ. ಇಷ್ಟು ದೊಡ್ಡ ಮತಗಳ ಅಂತರದ ಮಧ್ಯೆ ಗೆದ್ದಿರುವುದಕ್ಕೆ ಹನುಮಂತ ಅವರಿಗೆ ಎಲ್ಲರೂ ಅಭಿನಂದನೆ ತಿಳಿಸುತ್ತಾ ಇದ್ದಾರೆ.


Spread the love

About Laxminews 24x7

Check Also

2026ರ ಮೊದಲ ಚಂದ್ರಗ್ರಹಣ: ಈ ರಾಶಿಯವರಿಗೆ ಒಲಿಯಲಿದೆ ರಾಜಯೋಗ ಹೋಳಿ ಹಬ್ಬದಂದೇ ಯಾರಿಗೆ ಅದೃಷ್ಟ? ಯಾರಿಗೆ ಎಚ್ಚರಿಕೆ?

Spread the love2026ರ ವರ್ಷವು ಆಧ್ಯಾತ್ಮಿಕವಾಗಿ ಸಂಚಲನ ಮೂಡಿಸಲು ಸಜ್ಜಾಗಿದೆ. ಈ ಬಾರಿ ಬಣ್ಣಗಳ ಹಬ್ಬ ಹೋಳಿಯ ಸಂಭ್ರಮದ ನಡುವೆಯೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ