ಹುಬ್ಬಳ್ಳಿ: “ವರೂರು ಜೈನ ದಿಗಂಬರ ನವಗ್ರಹ ಕ್ಷೇತ್ರದಲ್ಲಿ ನಡೆದ ತೀರ್ಥಂಕರರ ಪಂಚಕಲ್ಯಾಣ ಮತ್ತು ಮಹಾಮಸ್ತಕಾಭಿಷೇಕ ಕಾರ್ಯಕ್ರಮದಿಂದ ಧಾರವಾಡ ಜಿಲ್ಲೆಗೆ ದೇಶ ಪ್ರಸಿದ್ಧಿ ಪ್ರಾಪ್ತವಾಗಿದೆ” ಎಂದು ರಾಜ್ಯ ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.
ವರೂರು ನವಗ್ರಹ ಕ್ಷೇತ್ರದಲ್ಲಿ ಕಳೆದ 12 ದಿನಗಳಿಂದ ಜರುಗಿದ ತೀರ್ಥಂಕರರ ಪಂಚಕಲ್ಯಾಣ ಮಹೋತ್ಸವ, ಸುಮೇರು ಪರ್ವತ ಲೋಕಾರ್ಪಣೆ ಹಾಗೂ ಮಹಾಮಸ್ತಕಾಭಿಷೇಕ ಕಾರ್ಯಕ್ರಮಗಳ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು “ಈ ಕ್ಷೇತ್ರದಲ್ಲಿ ನಡೆದಿರುವ ಕಾರ್ಯಕ್ರಮಗಳಿಂದ ಬಡಜನರಿಗೆ ಬಹಳ ಅನುಕೂಲವಾಗಿದೆ” ಎಂದರು.
“ಅಹಿಂಸೆಯನ್ನೇ ತನ್ನ ಪರಮ ತತ್ವವನ್ನಾಗಿ ಪಾಲಿಸುವ ಜೈನ ಸಮುದಾಯವು ಬಿಕ್ಕಟ್ಟಿನ ಪರಿಸ್ಥಿತಿಗಳಲ್ಲಿ ಉಳಿದೆಲ್ಲ ಸಮಾಜಗಳನ್ನು ಒಗ್ಗೂಡಿಸಿಕೊಂಡು, ಇಡೀ ಸಮಾಜಕ್ಕೆ ನೆರವು ನೀಡುವ ಸದ್ಗುಣ ಹೊಂದಿದೆ. ಎಲ್ಲಾ ಧರ್ಮಗಳ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಈ ನವಗ್ರಹ ಸಂಸ್ಥೆ ದೇಶದಲ್ಲಿಯೇ ಮೊದಲನೇ ಉದಾಹರಣೆ ಎಂಬುದರಲ್ಲಿ ಅತಿಶಯೋಕ್ತಿ ಇಲ್ಲ ಎಂದು ಶ್ಲಾಘಿಸಿದರು.
Laxmi News 24×7