Breaking News

ಸಾಲ ಮರು ಪಾವತಿ ಮಾಡದ ಹಿನ್ನೆಲೆಯಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಯೊಂದು ಮನೆ ಜಪ್ತಿ ಮಾಡಿ, ಏಳು ತಿಂಗಳ ಗರ್ಭಿಣಿ ಸೇರಿದಂತೆ ಕುಟುಂಬಸ್ಥರನ್ನು ಮನೆಯಿಂದ ಹೊರಹಾಕಿರುವ ಆರೋಪ ಕೇಳಿಬಂದಿದೆ.

Spread the love

ಧಾರವಾಡ: ಮೈಕ್ರೋ ಫೈನಾನ್ಸ್​ಗಳ ವಿರುದ್ಧ ಕಿರುಕುಳ ಆರೋಪ ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಶನಿವಾರ ಸಿಎಂ ಸಿದ್ದರಾಮಯ್ಯ ಅವರು ಮಹತ್ವದ ಸಭೆ ನಡೆಸಿದ್ದಾರೆ. ಅಲ್ಲದೆ, ಕಾನೂನು ಮೀರಿ ಸಾಲ ವಸೂಲಾತಿಗೆ ಇಳಿದ ಸಂಸ್ಥೆಗಳಿಗೆ ಎಚ್ಚರಿಕೆಯನ್ನೂ ನೀಡಿದ್ದಾರೆ. ಈ ನಡುವೆ ಧಾರವಾಡ ಜಿಲ್ಲೆಯ ಅಳ್ನಾವರ ತಾಲೂಕಿನ ಅರವಟಿಗಿ ಗ್ರಾಮದಲ್ಲಿ 7 ತಿಂಗಳ ಗರ್ಭಿಣಿ ಡೀನಾ ಫೀಲಿಪ್ ಅವ ರನ್ನು ಮನೆಯಿಂದ ಹೊರಹಾಕಿರುವ ಆರೋಪ ಆರೋಪ ಕೇಳಿಬಂದಿದೆ.

”ಫೈನಾನ್ಸ್​ ಕಂಪನಿಯೊಂದರಲ್ಲಿ ಸಾಲ ಪಡೆದುಕೊಂಡಿದ್ದೆವು. ಪ್ರತಿ ತಿಂಗಳಿಗೊಮ್ಮೆ ಹಣ ಕಟ್ಟುತ್ತಲೇ ಬಂದಿದ್ದೆವು. ಆದರೆ ಉಳಿದ ಹಣ ಕಟ್ಟದ ಹಿನ್ನೆಲೆ ಫೈನಾನ್ಸ್​ ಕಂಪನಿ ಮನೆ ಸೀಜ್​ ಮಾಡಿದೆ. ಸದ್ಯ ನಾವು ಮನೆಯ ಹೊರಗಡೆಯೇ ವಾಸ ಮಾಡುತ್ತಿದ್ದೇವೆ. ಹಲವು ಬಾರಿ ಫೈನಾನ್ಸ್ ಸಿಬ್ಬಂದಿಗೆ ಮನವಿ ಮಾಡಿಕೊಂಡರೂ ಕೂಡ ಕಿರುಕುಳ ತಪ್ಪಿಲ್ಲ” ಎಂದು ಗರ್ಭಿಣಿ ಆರೋಪಿಸಿದ್ದಾರೆ.

”ಈಗಾಗಲೇ ಅರ್ಧ ಕಂತು ಕಟ್ಟಲಾಗಿದೆ. ಆದರೆ, ಇನ್ನುಳಿದ ಹಣ ಕಟ್ಟಲು ಕಾಲಾವಕಾಶ ಕೇಳಿದರೂ ಫೈನಾನನ್ಸ್ ಕಂಪನಿಯವರು ಸಮಯ ಕೊಡುತ್ತಿಲ್ಲ” ಎಂದು ಡೀನಾ ಫೀಲಿಪ್ ದೂರಿದ್ದಾರೆ.


Spread the love

About Laxminews 24x7

Check Also

ಮಾ.3ಕ್ಕೆ ರಕ್ತಚಂದ್ರಗ್ರಹಣ – ಕರ್ನಾಟಕದಲ್ಲಿ 25 ನಿಮಿಷ ಗ್ರಹಣ ಗೋಚರ

Spread the loveಬೆಂಗಳೂರು: ಮಾ.3ರಂದು ಕೇತುಗ್ರಸ್ತ ರಕ್ತಚಂದ್ರಗಹಣ  ಸಂಭವಿಸಲಿದೆ. ಹೋಳಿ ಹಬ್ಬದಂದೇ ಬಾನಂಗಳದಲ್ಲಿ ಕೆಂಬಣ್ಣದ ಚಂದಿರನ ವಿಸ್ಮಯ ಗೋಚರವಾಗಲಿದೆ. ಪಾಲ್ಗುಣ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ