Breaking News

ಲಾರಿ ಅಪಘಾತದಲ್ಲಿ ಮೃತಪಟ್ಟ 10 ಜನರ ಅಂತ್ಯಕ್ರಿಯೆಯು ಸವಣೂರು ಪಟ್ಟಣದ ಖಬರಸ್ತಾನಗಳಲ್ಲಿ

Spread the love

ಹಾವೇರಿ: ಲಾರಿ ಅಪಘಾತದಲ್ಲಿ ಮೃತಪಟ್ಟ 10 ಜನರ ಅಂತ್ಯಕ್ರಿಯೆಯು ಸವಣೂರು ಪಟ್ಟಣದ ಖಬರಸ್ತಾನಗಳಲ್ಲಿ ನಡೆಯಿತು.

ಅದಕ್ಕೂ ಮುನ್ನ ಪಟ್ಟಣಕ್ಕೆ ಶಾಸಕ ಯಾಸೀರಖಾನ್ ಪಠಾಣ ನೇತೃತ್ವದಲ್ಲಿ ಎಲ್ಲ ಮೃತದೇಹಗಳನ್ನು ಘಟನಾ ಸ್ಥಳದಿಂದ ತರಲಾಯಿತು. ಮೃತದೇಹಗಳನ್ನು ಹೊತ್ತ ವಾಹನ ಪಟ್ಟಣ ತಲುಪುತ್ತಿದ್ದಂತೆ ದಾರಿ ಉದ್ದಕ್ಕೂ ಸಂಬಂಧಿಕರು, ನಿವಾಸಿಗಳು, ಸಾವಿರಾರು ಸಂಖ್ಯೆಯಲ್ಲಿ ನಿಂತು ಪಾರ್ಥಿವ ಶರೀರಗಳ ವೀಕ್ಷಣೆ ಮಾಡಿದರು. ನಂತರ ಮೃತರ ಮನೆಗಳಿಗೆ ಪಾರ್ಥಿವ ಶರೀರಗಳನ್ನು ತಗೆದುಕೊಂಡು ಹೋಗಲಾಯಿತು. ಮನೆಯಲ್ಲಿ ಮುಸ್ಲಿಂ ಸಂಪ್ರದಾಯದಂತೆ ವಿಧಿವಿಧಾನಗಳನ್ನು ಪೂರೈಸಲಾಯಿತು. ಈ ವೇಳೆ ಮೃತ ಕುಟುಂಬದ ಸಂಬಂಧಿಕರ ಆಕ್ರಂದನ ಮಗಿಲು ಮುಟ್ಟಿತ್ತು.

YELLAPUR ACCIDENT

ಸಾಮೂಹಿಕ ಪ್ರಾರ್ಥನೆ : ಬಳಿಕ ಅಲ್ಲಿಂದ ಮೃತದೇಹಗಳನ್ನು ಈದ್ಗಾ ಮೈದಾನಕ್ಕೆ ತರಲಾಯಿತು. ಈದ್ಗಾ ಮೈದಾನದಲ್ಲಿ ಸಾಲಾಗಿ ಶವವಿಟ್ಟು ಪ್ರಾರ್ಥನೆ ಸಲ್ಲಿಸಲಾಯಿತು. ಅಲ್ಲಿಯೂ ಮುಸ್ಲಿಂ ಧರ್ಮದ ವಿಧಿವಿಧಾನಗಳನ್ನ ಪೂರೈಸಲಾಯಿತು. ಆ ಬಳಿಕ ಮೃತರ ಸಂಬಂಧಿಕರು ಮೃತ ದೇಹಗಳನ್ನು ತಮ್ಮನ್ನಗಲಿದ ಹಿರಿಯರನ್ನು ದಫನ್ ಮಾಡಿದ ಖಬರಸ್ತಾನಕ್ಕೆ ತೆಗೆದುಕೊಂಡು ಹೋಗಿ ಅಲ್ಲಿಯೇ ಅಂತ್ಯಕ್ರಿಯೆ ಮಾಡಿದರು. ಈ ಮೂಲಕ ಕುಮಟಾಕ್ಕೆ ಸಂತೆಗಾಗಿ ಹೋದವರು ತಮ್ಮ ಬದುಕಿನ ಸಂತೆ ಮುಗಿಸಿದ ಹಾಗೂ ಅಪಘಾತದಲ್ಲಿ ಜೀವ ಕಳೆದುಕೊಂಡ ಹತ್ತೂ ಜನರಿಗೆ ಅಂತಿಮ ವಿದಾಯ ಹೇಳಲಾಯಿತು. ಘಟನೆ ನೆನೆದು ಎಲ್ಲರೂ ಕಣ್ಣೀರು ಸುರಿಸುತ್ತಿದ್ದರು.

1972 ರಲ್ಲೂ ನಡೆದಿತ್ತು ಇಂತಹುದ್ದೇ ದುರ್ಘಟನೆ: ಈ ಹಿಂದೆ 1972ರಲ್ಲಿ ನಡೆದ 9 ಜನರ ಸಾವು ಸವಣೂರಿಗೆ ದೊಡ್ಡ ಪೆಟ್ಟು ನೀಡಿತ್ತು. ಇದೀಗ 10 ಜನ ಸಾವು ಮತ್ತೊಂದು ಆಘಾತಕಾರಿ ಘಟನೆಗೆ ಸವಣೂರು ಸಾಕ್ಷಿಯಾಯಿತೆಂದು ಸ್ಥಳೀಯರು ತಮ್ಮ ತಮ್ಮಲ್ಲಿ ಮಾತನಾಡಿಕೊಳ್ಳುತ್ತಿದ್ದರು. ಅಪಘಾತವಾದಾಗಿನಿಂದ ಅಂತ್ಯಕ್ರಿಯೆ ನಡೆಯುವವರೆಗೂ ಸವಣೂರು ಪಟ್ಟಣದಲ್ಲಿ ನೀರವ ಮೌನ ಅವರಿಸಿತ್ತು.


Spread the love

About Laxminews 24x7

Check Also

ಮಾ.3ಕ್ಕೆ ರಕ್ತಚಂದ್ರಗ್ರಹಣ – ಕರ್ನಾಟಕದಲ್ಲಿ 25 ನಿಮಿಷ ಗ್ರಹಣ ಗೋಚರ

Spread the loveಬೆಂಗಳೂರು: ಮಾ.3ರಂದು ಕೇತುಗ್ರಸ್ತ ರಕ್ತಚಂದ್ರಗಹಣ  ಸಂಭವಿಸಲಿದೆ. ಹೋಳಿ ಹಬ್ಬದಂದೇ ಬಾನಂಗಳದಲ್ಲಿ ಕೆಂಬಣ್ಣದ ಚಂದಿರನ ವಿಸ್ಮಯ ಗೋಚರವಾಗಲಿದೆ. ಪಾಲ್ಗುಣ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ