ನವದೆಹಲಿ : ಮಹಾಮಾರಿ ಕೊರೊನಾದಿಂದಾಗಿ ಮುಂದಿನ 10 ವರ್ಷದಲ್ಲಿ ಸುಮಾರು 100 ಕೋಟಿ ಜನ ಕಡುಬಡತನಕ್ಕೆ ಸಿಲುಕಲಿದ್ದಾರೆ ಎಂಬ ಮುನ್ಸೂಚನೆ ಸಿಕ್ಕಿದೆ. ವಿಶ್ವಸಂಸ್ಥೆಯ ಅಭಿವೃದ್ಧಿ ಯೋಜನೆ (ಯುಎನ್‍ಡಿಪಿ) ನಡೆಸಿರುವ ಸಮೀಕ್ಷೆ ಪ್ರಕಾರ ಕೊರೊನಾದಿಂದಾಗಿ ಸದ್ಯದ ಪರಿಸ್ಥಿತಿಯಲ್ಲಿ 207 ಮಿಲಿಯನ್ ಜನ ಕಡು ಬಡತನಕ್ಕೆ ದೂಡಲ್ಪಟ್ಟಿದ್ದಾರೆ.
2030ರ ವೇಳೆಗೆ ಒಂದು ಬಿಲಿಯನ್ ಸರಿಸುಮಾರು 100 ಕೋಟಿ ಜನ ಬಡತನಕ್ಕೆ ಸಿಲುಕಲಿದ್ದಾರೆ ಎಂದು ಹೇಳಲಾಗಿದೆ. ಕೊರೊನಾದಿಂದಾಗಿ ಆರ್ಥಿಕ ಚಟುವಟಿಕೆಗಳಿಗೆ ಭಾರೀ ಹೊಡೆತ ಬಿದ್ದಿದೆ. ವಹಿವಾಟುಗಳು ಸ್ಥಗಿತಗೊಂಡಿದೆ.ಆರ್ಥಿಕ ಪುನಶ್ಚೇತನಗಳು ಸಕಾರಾತ್ಮಕವಾಗಿಲ್ಲ. ವಿವಿಧ ದೃಷ್ಟಿಕೋನಗಳಿಂದ ಸಮೀಕ್ಷೆ ನಡೆಸಲಾಗಿದ್ದು, ಕೊರೊನಾ ನಂತರದ ಜೀವನ ದುಸ್ತರವಾಗಿದೆ. ಬಡತನದ ಬೇಗೆ ತೀವ್ರವಾಗಲಿದೆ ಎಂಬ ಆತಂಕ ಕೇಳಿ ಬಂದಿದೆ.