ಬೆಂಗಳೂರು: ನಗರದ ಸಸ್ಯಕಾಶಿ ಲಾಲ್ಬಾಗ್ನಲ್ಲಿ ನಡೆಯುತ್ತಿರುವ 217ನೇ ಫಲಪುಷ್ಪ ಪ್ರದರ್ಶನದ ಅಂಗವಾಗಿ ಹಮ್ಮಿಕೊಂಡಿದ್ದ ಇಕೆಬಾನ, ಪುಪ್ಪಭಾರತಿ, ಪುಷ್ಪ ರಂಗೋಲಿ, ತರಕಾರಿ ಕೆತ್ತನೆ, ಡಚ್ ಹೂವಿನ ಜೋಡನೆ, ಥಾಯ್ ಆರ್ಟ್‌ನ ಪೂರಕ ಕಲೆಗಳ ಪ್ರದರ್ಶನವನ್ನು ಬಹುಭಾಷಾ ನಟಿ ಪ್ರೇಮಾ ಶನಿವಾರ ಲೋಕಾರ್ಪಣೆ ಮಾಡಿದರು.
ಬಳಿಕ ಮಾತನಾಡಿದ ಅವರು, ಹೂವು, ಬಾಳೆಎಲೆ, ತೆಂಗಿನ ಗರಿ, ತರಕಾರಿಗಳಲ್ಲಿ ಬಗೆ ಬಗೆಯ ವಿನ್ಯಾಸದ ಕಲಾಕೃತಿಗಳನ್ನು ಮಾಡುವುದೆಂದರೆ ಇದೊಂದು ರೀತಿ ಧ್ಯಾನ ಇದ್ದಂತೆ ಎಂದು ಹೇಳಿದರು
Laxmi News 24×7