Breaking News

ಹುಬ್ಬಳ್ಳಿ-ತುಂಡ್ಲಾ ನಿಲ್ದಾಣಗಳ ನಡುವೆ ಒಂದು ಟ್ರಿಪ್ ವಿಶೇಷ ರೈಲು ಸಂಚಾರ:

Spread the love

ಹುಬ್ಬಳ್ಳಿ: ಕುಂಭಮೇಳದ ಸಮಯದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ಪೂರೈಸಲು ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ಮತ್ತು ಉತ್ತರ ಪ್ರದೇಶದ ತುಂಡ್ಲಾ ರೈಲು ನಿಲ್ದಾಣಗಳ ನಡುವೆ ಎರಡು ವಿಶೇಷ ಎಕ್ಸ್​ಪ್ರೆಸ್ ರೈಲುಗಳನ್ನು ಓಡಿಸಲು ರೈಲ್ವೆ ಮಂಡಳಿ ಅನುಮೋದನೆ ನೀಡಿದೆ. ಈ ರೈಲುಗಳು ಯಾತ್ರಾರ್ಥಿಗಳಿಗೆ ಅನುಕೂಲಕರ ಪ್ರಯಾಣದ ಆಯ್ಕೆಗಳನ್ನು ಒದಗಿಸುವ ಗುರಿಯನ್ನು ಹೊಂದಿವೆ. ವಿವರಗಳು ಈ ಕೆಳಗಿನಂತಿವೆ..

ಹುಬ್ಬಳ್ಳಿ-ತುಂಡ್ಲಾ ನಿಲ್ದಾಣಗಳ ನಡುವೆ ಒಂದು ಟ್ರಿಪ್ ವಿಶೇಷ ರೈಲು ಸಂಚಾರ:

  • ರೈಲು ಸಂಖ್ಯೆ 07379 – ಎಸ್ಎಸ್ಎಸ್ ಹುಬ್ಬಳ್ಳಿ-ತುಂಡ್ಲಾ ವಿಶೇಷ ಎಕ್ಸ್ ಪ್ರೆಸ್ ರೈಲು ಜನವರಿ 20 ರಂದು (ಸೋಮವಾರ) 00:45 ಗಂಟೆಗೆ ಎಸ್ಎಸ್ಎಸ್ ಹುಬ್ಬಳ್ಳಿಯಿಂದ ಹೊರಟು, ಜನವರಿ 22 ರಂದು (ಬುಧವಾರ) 02:30 ಗಂಟೆಗೆ ಉತ್ತರ ಪ್ರದೇಶದ ತುಂಡ್ಲಾ ನಿಲ್ದಾಣಕ್ಕೆ ತಲುಪಲಿದೆ.
  • ರೈಲು ಸಂಖ್ಯೆ 07380 – ತುಂಡ್ಲಾ-ಎಸ್ಎಸ್ಎಸ್ ಹುಬ್ಬಳ್ಳಿ ವಿಶೇಷ ಎಕ್ಸ್ ಪ್ರೆಸ್ ರೈಲು ಜನವರಿ 23 ರಂದು (ಗುರುವಾರ) 16:00 ಗಂಟೆಗೆ ತುಂಡ್ಲಾದಿಂದ ಹೊರಟು, ಜನವರಿ 25 ರಂದು (ಶನಿವಾರ) 18:40 ಗಂಟೆಗೆ ಹುಬ್ಬಳ್ಳಿ ನಿಲ್ದಾಣಕ್ಕೆ ಆಗಮಿಸಲಿದೆ.
  • ರೈಲು ಸಂಖ್ಯೆ 07381 – ಎಸ್ಎಸ್ಎಸ್ ಹುಬ್ಬಳ್ಳಿ ವಿಶೇಷ ಎಕ್ಸ್ ಪ್ರೆಸ್ ರೈಲು ಫೆಬ್ರುವರಿ 6 ರಂದು (ಗುರುವಾರ) 20:10 ಗಂಟೆಗೆ ಎಸ್ಎಸ್ಎಸ್ ಹುಬ್ಬಳ್ಳಿಯಿಂದ ಹೊರಟು, ಫೆಬ್ರುವರಿ 8 ರಂದು (ಶನಿವಾರ) 20:15 ಗಂಟೆಗೆ ಉತ್ತರ ಪ್ರದೇಶದ ತುಂಡ್ಲಾ ನಿಲ್ದಾಣಕ್ಕೆ ತಲುಪಲಿದೆ.
  • ರೈಲು ಸಂಖ್ಯೆ 07382 ತುಂಡ್ಲಾ-ಎಸ್ಎಸ್ಎಸ್ ಹುಬ್ಬಳ್ಳಿ ವಿಶೇಷ ಎಕ್ಸ್​ಪ್ರೆಸ್ ರೈಲು ಫೆಬ್ರುವರಿ 9 ರಂದು (ಭಾನುವಾರ) 16:20 ಗಂಟೆಗೆ ತುಂಡ್ಲಾದಿಂದ ಹೊರಟು, ಫೆಬ್ರುವರಿ 11 ರಂದು (ಮಂಗಳವಾರ) 18:40 ಗಂಟೆಗೆ ಹುಬ್ಬಳ್ಳಿ ನಿಲ್ದಾಣಕ್ಕೆ ಆಗಮಿಸಲಿದೆ.

    ಈ ಎರಡೂ ರೈಲುಗಳು ಧಾರವಾಡ, ಅಳ್ನಾವರ, ಲೋಂಡಾ, ಖಾನಾಪುರ, ಬೆಳಗಾವಿ, ಗೋಕಾಕ್ ರೋಡ್, ಘಟಪ್ರಭಾ, ರಾಯಬಾಗ, ಕುಡಚಿ, ಮಿರಜ್, ಸತಾರಾ, ಪುಣೆ, ದೌಂಡ್ ಕಾರ್ಡ್ ಲೈನ್, ಅಹ್ಮದ್ ನಗರ, ಕೋಪರ್‌ಗಾಂವ್, ಮನ್ಮಾಡ್, ಭೂಸಾವಲ್, ಖಾಂಡ್ವಾ, ಇಟಾರ್ಸಿ, ಪಿಪಾರಿಯಾ, ನರಸಿಂಗಪುರ, ಜಬಲ್ಪುರ್, ಕಟ್ನಿ, ಮೈಹಾರ್, ಸತ್ನಾ, ಮಾಣಿಕ್‌ಪುರ್, ಪ್ರಯಾಗ್‌ರಾಜ್ ಜಂಕ್ಷನ್, ಫತೇಪುರ್, ಗೋವಿಂದಪುರಿ ಮತ್ತು ಇಟಾವಾ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿವೆ.

    ಬೋಗಿಗಳ ಸಂಯೋಜನೆ: ಈ ರೈಲುಗಳು 1 ಎಸಿ 2 ಟೈರ್, 4 ಎಸಿ ತ್ರಿ ಟೈರ್, 11 ಸ್ಲೀಪರ್ ಕ್ಲಾಸ್, 1 ಸೆಕೆಂಡ್ ಕ್ಲಾಸ್ ಲಗೇಜ್ ಕಮ್ ಗಾರ್ಡ್ ಬ್ರೇಕ್ ವ್ಯಾನ್ ಮತ್ತು 1 ಲಗೇಜ್ / ಜನರೇಟರ್ / ಬ್ರೇಕ್ ವ್ಯಾನ್ ಸೇರಿದಂತೆ 18 ಬೋಗಿಗಳನ್ನು ಒಳಗೊಂಡಿರುತ್ತದೆ.

    ಈ ರೈಲುಗಳ ಪ್ರತಿ ನಿಲ್ದಾಣದ ಆಗಮನ, ನಿರ್ಗಮನ ಸಮಯಕ್ಕಾಗಿ, ಪ್ರಯಾಣಿಕರು ಭಾರತೀಯ ರೈಲ್ವೆ ಜಾಲತಾಣ www.enquiry.indianrail.gov.in ಗೆ ಭೇಟಿ ನೀಡಿ ಅಥವಾ ಸಹಾಯವಾಣಿ 139ಕ್ಕೆ ಕರೆ ಮಾಡುವ ಮೂಲಕ ಮಾಹಿತಿ ಪಡೆದುಕೊಳ್ಳಬಹುದು ಎಂದು ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ. ಮಂಜುನಾಥ ಕನಮಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love

About Laxminews 24x7

Check Also

ಮಹಾದೇವಿ ಅವರ ಮೃತದೇಹ ಆಂಬ್ಯುಲೆನ್ಸ್​ ಮೂಲಕ ನೂಲ್ವಿ ಗ್ರಾಮಕ್ಕೆ ಆಗಮಸಿದ್ದು, ತಂದೆ, ಸಹೋದರರು ಸೇರಿದಂತೆ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.

Spread the loveಹುಬ್ಬಳ್ಳಿ: ಪ್ರಯಾಗ್‌ರಾಜ್​ನಲ್ಲಿ ಕಾಲ್ತುಳಿತಕ್ಕೊಳಗಾಗಿ ಸಾವನ್ನಪ್ಪಿದ ಹುಬ್ಬಳ್ಳಿ ತಾಲೂಕಿನ ನೂಲ್ವಿ ಮಹಾದೇವಿ ಹನುಮಂತಪ್ಪ ಬಾವನೂರ್ (ಸಂಕನಗೌಡರ್) ಮೃತದೇಹಕ್ಕೆ ಗುರುವಾರ ತಡರಾತ್ರಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ