ಕಾಗವಾಡಕ್ಕೆ ಆಗಮಿಸಿದ ರಾಯಣ್ಣ ಜ್ಯೋತಿ…ತಾಲೂಕಾಡಳಿತದಿಂದ ಭವ್ಯ ಸ್ವಾಗತ…
ಕಾಗವಾಡಕ್ಕೆ ಆಗಮಿಸಿದ ರಾಯಣ್ಣ ಜ್ಯೋತಿ…ತಾಲೂಕಾಡಳಿತದಿಂದ ಭವ್ಯ ಸ್ವಾಗತ…ಅಥಣಿಗೆ ರಾಯಣ್ಣ ಜ್ಯೋತಿ ಬಿಳ್ಕೋಟ್ಟ ಅಧಿಕಾರಿಗಳುವಿವಿಧ ಸಂಘಟೆಗಳು ಭಾಗಿ
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಉತ್ಸವ ನಿಮಿತ್ಯ ನಂದಗಡದಿಂದ ಆಗಮಿಸಿದ ಕಾಗವಾಡಕ್ಕೆ ಆಗಮಿಸಿದ ರಾಯಣ್ಣ ಜ್ಯೋತಿ ಯಾತ್ರೆಯನ್ನು ತಹಶೀಲ್ದಾರ್ ರಾಜೇಶ್ ಬುರ್ಲಿ ಅವರ ನೇತೃತ್ವದಲ್ಲಿ ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಕನ್ನಡಪರ ಸಂಘಟನೆಗಳು ಬರಮಾಡಿಕೊಂಡರು.
ಗುರುವಾರ ಮಧ್ಯಾಹ್ನ ಕಾಗವಾಡದ ರಾಣಿ ಚೆನ್ನಮ್ಮ ವೃತ್ತದಲ್ಲಿ ರಾಯಣ್ಣ ಜ್ಯೋತಿಯಾತ್ರೆ ರಥವು ಆಗಮಿಸಿತು. ರಥಕ್ಕೆ ತಹಶೀಲ್ದಾರ್ ರಾಜೇಶ್ ಬುರ್ಲಿ ಮತ್ತು ತಾಲೂಕ ಪಂಚಾಯತಿ ಅಧಿಕಾರಿ ವೀರಣ್ಣ ವಾಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎಂ ಆರ್ ಮುಂಜೆ, ಸಿ ಡಿ ಪಿ ಓ ಸಂಜು ಕುಮಾರ್ ಸದಲಗೆ, ಕರವೇ ಕರ್ಯಮರ್ತ ರು ಕನ್ನಡಪರ ಸಂಘಟನೆಗಳು ಕುರುಬರ ಸಮಾಜದ ಮುಖಂಡರು ವಿವಿಧ ಶಾಲೆಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ತಹಸಿಲ್ದಾರ್ ರಾಜೇಶ್ ಬುರ್ಲಿ ಅವರು ಜ್ಯೋತಿಗೆ ಪೂಜೆ ಸಲ್ಲಿಸಿ ಮಾತನಾಡುವಾಗ ರಾಜ್ಯ ಸರ್ಕಾರ ಸಂಗೊಳ್ಳಿ ರಾಯಣ್ಣ ಅವರು ಜಯಂತಿ ಅದ್ದೂರಿಯಾಗಿ ಆಚರಿಸಲು ಜಿಲ್ಲೆಯಲ್ಲಿ ಜ್ಯೋತಿ ಮೆರವಣಿಗೆ ರಥ ಪ್ರಾರಂಭಿಸಿದ್ದು ನಿಪ್ಪಾನಿ ಮಾರ್ಗವಾಗಿ ಕಾಗವಾಡಕ್ಕೆ ಆಗಮಿಸಿದ್ದು ರಥಕ್ಕೆ ನಾವು ಎಲ್ಲರೂ ಸ್ವಾಗತಿಸಿದ್ದು ಕಾಗವಾಡ ಮಾರ್ಗವಾಗಿ ಮಂಗಸುಳಿಯಿಂದ ಅಥಣಿ ಪಟ್ಟಣ ಕಡೆ ರಥಕ್ಕೆ ಬಿಳ್ಕೋಡುತ್ತೇವೆ ಎಂದು ಹೇಳಿದರು.
ಪ್ರದೇಶ ಕರ್ನಾಟಕ ಕುರುಬರ ಸಮಾಜದ ಜಿಲ್ಲಾ ಸಂಚಾಲಕ ಸದಾಶಿವ ಪೂಜಾರಿ ತಾಲೂಕ ಅಧ್ಯಕ್ಷ ಪ್ರಕಾಶ್ ಡಂಗ್, ರಾವ್ ಸಾಬ್ ಜುಗಳೆ, ಕಿತ್ತೂರು ರ್ನಾಂಟಕ ಸೇನೆ ಪದಾಧಿಕಾರಿ ಸಾಹುಕಾರ, ರವಿ ಪಾಟೀಲ್, ಸೂರಜ್ ಕೋರೆ, ಸಿದ್ದು ಒಡೆಯರ್, ಬಸವರಾಜ್ ಮಗದೂಮ್, ಮಹಾವೀರ್ ಪಾಟೀಲ್, ರವಿ ಪಾಟೀಲ, ಅರುಣ ಜೋಶಿ, ರೈತ ಸಂಸ್ಥೆಯ ಅಧ್ಯಕ್ಷ ಶಾಂತಿನಾಥ್ ಕರವ, ಇನ್ನುಳಿದವರು ಭಾಗಿಯಾಗಿದ್ಧರು.
Laxmi News 24×7