ಕಾ, ಜಿ ಸಿ ಬಯ್ಯಾರೆಡ್ಡಿ ರವರ ಅಂತೀಮ ದರ್ಶನ
ಕರ್ನಾಟಕ ಪ್ರಾಂತ ರೈತ ಸಂಘ ರಾಜ್ಯಾಧ್ಯಕ್ಷರು, ಸಂಯುಕ್ತ ಹೋರಾಟ – ಕರ್ನಾಟಕ ಸಂಚಾಲಕರು ಮತ್ತು ಸಿಪಿಐ ( ಎಂ) ಪಕ್ಷದ ಕಾರ್ಯದರ್ಶಿ, ಕಾ.ಜಿ ಸಿ ಬಯ್ಯಾರೆಡ್ಡಿ ಅನಾರೋಗ್ಯದಿಂದ ದಿನಾಂಕ :04/01/2025 ರಂದು ಬೆಳಿಗ್ಗೆ ಜಯನಗರ,3 ನೇ ಬ್ಲಾಕ್, ಅಪೋಲೋ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಎಡರಂಗದ ವಿಚಾರಗಳಿಗೆ ಮತ್ತು ರೈತಪರ ಚಳುವಳಿಗೆ ಹಿರಿಯನ್ನು ಕಳೆದುಕೊಂಡ ನಮಗೆ ತುಂಬಲಾರದ ನಷ್ಟವಾಗಿದೆ.ಅವರ ಅಗಲಿಕೆಯಿಂದ ಆಘಾತವಾಗಿದೆ.
MES ಭವನ,ಮಹಾಲಕ್ಷ್ಮಿ ಲೇಔಟ,ಬೆಂಗಳೂರಿನ ಸಿಪಿಐ ( ಎಂ) ಪಕ್ಷದ ಕಚೇರಿಯಲ್ಲಿ ಅಂತೀಮ ದರ್ಶನ ಪಡೆಯಲಾಯಿತು.ಮೃತರ ಆತ್ಮಕ್ಕೆ ಚಿರಶಾಂತಿಯನ್ನು ನೀಡಲಿ.ಮೃತರ ಕುಟುಂಬದ ಸದಸ್ಯರು ಹಾಗೂ ಬಂಧು – ಬಳಗಕ್ಕೆ ದುಃಖ ಭರಿಸುವ ಶಕ್ತಿಯನ್ನು ಸೃಷ್ಟಿ ಕರ್ತನು ದಯಪಾಲಿಸಲೆಂದು ಭಾರತೀಯ ಕೃಷಿಕ ಸಮಾಜ ( ಸಂಯುಕ್ತ) – ಕರ್ನಾಟಕ,ರೈತ ಸಂಘಟನೆ ವತಿಯಿಂದ ಭಗವಂತನಲ್ಲಿ ಪ್ರಾರ್ಥಿಸಲಾಯಿತು.
ಕಾ,ಜಿ ಸಿ ಬಯ್ಯಾರೆಡ್ಡಿ ರವರಿಗೆ ಹಸಿರು ವಂದನೆಗಳೊಂದಿಗೆ.
ಸಿದಗೌಡ ಮೋದಗಿ,ರಾಜ್ಯಾಧ್ಯಕ್ಷರು, ಬಿಕೆಎಸ್
Laxmi News 24×7