Breaking News

ಹುಬ್ಬಳ್ಳಿ-ಧಾರವಾಡದ ಬಿಆರ್‌ಟಿಎಸ್ ಯೋಜನೆ ಆರ್ಥಿಕ ನಷ್ಟದಲ್ಲಿದೆ

Spread the love

ಹುಬ್ಬಳ್ಳಿ, ಜನವರಿ 06: ಅದು ಹುಬ್ಬಳ್ಳಿ-ಧಾರವಾಡ (Hubballi-Dharwad) ಅವಳಿ ನಗರದ ಮಹತ್ವಾಕಾಂಕ್ಷೆಯ ಯೋಜನೆ. ಮಾಜಿ ಸಿಎಂ ಜಗದೀಶ್ ಶೆಟ್ಟರ್ ಆ ಯೋಜನೆ ಆರಂಭ ಮಾಡುವ ಮುನ್ನವೇ ಸಾಕಷ್ಟು ಅಪಸ್ವರ ಕೇಳಿ ಬಂದಿದ್ದವು. ಹಾಗೂ ಹೀಗೂ ಯೋಜನೆ ಆರಂಭಿಸಲಾಗಿತ್ತು.ಹುಬ್ಬಳ್ಳಿ-ಧಾರವಾಡದಲ್ಲಿ ಹೊಸ ಯೋಜನೆ: ಬಂದ್​ ಆಗುತ್ತಾ ಚಿಗರಿ ಬಸ್​ ಓಡಾಟ?

ಆದರೆ ಆ ಯೋಜನೆಯಿಂದ ಆಗಿರುವ ಅನಕೂಲಕ್ಕಿಂತ ಅನಾನೂಕಲವೇ ಜಾಸ್ತಿ. ಆರ್ಥಿಕವಾಗಿಯೂ ಆ ಯೋಜನೆ ಸಾಕಷ್ಟು ನಷ್ಟದಲ್ಲಿದೆ. ಅವಳಿ ನಗರದಲ್ಲಿರುವ ಆ ಯೋಜನೆ ಇದೀಗ ಬಂದ್ ಆಗೋ ಲಕ್ಷಣವೇ ಹೆಚ್ಚಾಗಿದೆ. ಆ ಯೋಜನೆ‌ ಬದಲಾಗಿ ಮತ್ತೊಂದು ಯೋಜನೆ ಶಿಘ್ರವೇ ಅವಳಿ ನಗರಕ್ಕೆ ಬರಲಿದೆ.

ಅಷ್ಟಕ್ಕೂ ಆ ಹೊಸ ಯೋಜನೆ ಯಾವುದು ಎಂಬ ನಿಮ್ಮ ಪ್ರಶ್ನೆಗೆ ಮುಂದೆ ಉತ್ತರವಿದೆ ಓದಿ.ಬಿಆರ್​ಟಿಎಸ್​ ಜಗದೀಶ್ ಶೆಟ್ಟರ್ ಸಿಎಂ ಆಗಿದ್ದ ಅವಧಿಯಲ್ಲಿ ಹುಬ್ಬಳ್ಳಿ-ಧಾರವಾಡ ನಡುವೆ ಆರಂಭವಾಗಿದ್ದ ಯೋಜನೆ.

ಹೊರ ರಾಜ್ಯದಲ್ಲಿ ವಿಫಲವಾದ ಯೋಜನೆ ರಾಜ್ಯಕ್ಕೆ ತರೋವಾಗಲೇ ಸಾಕಷ್ಟು ವಿವಾದವಾಗಿತ್ತು. BRTS ವ್ಯಾಪ್ತಿಯಲ್ಲಿ ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ನಿತ್ಯ ನೂರಾರು ಚಿಗರಿ ಬಸ್ ಗಳು ಸಂಚಾರ ಮಾಡುತ್ತವೆ.

ಅದಕ್ಕೆಂದೆ ಪ್ರತ್ಯೇಕ ಕಾರಿಡಾರ್ ಇದೆ. ಅಲ್ಲಿ ಬೇರೆ ಯಾವ ವಾಹನಗಳಿಗೂ ಅವಕಾಶ ಇಲ್ಲ. ಹೀಗಾಗಿ ಹುಧಾ ಅವಳಿ ನಗರದ ಪ್ರಯಾಣಿಕರಿಗೆ ಅನಕೂಲವಾಗಲು ಯೋಜನೆ ಜಾರಿಯಾಗಿತ್ತು‌. ಆದರೆ ಈ ಯೋಜನೆಯಿಂದ ಅನಾನಕೂಲವೇ ಜಾಸ್ತಿಯಾಗಿದೆ.


Spread the love

About Laxminews 24x7

Check Also

2026ರ ಮೊದಲ ಚಂದ್ರಗ್ರಹಣ: ಈ ರಾಶಿಯವರಿಗೆ ಒಲಿಯಲಿದೆ ರಾಜಯೋಗ ಹೋಳಿ ಹಬ್ಬದಂದೇ ಯಾರಿಗೆ ಅದೃಷ್ಟ? ಯಾರಿಗೆ ಎಚ್ಚರಿಕೆ?

Spread the love2026ರ ವರ್ಷವು ಆಧ್ಯಾತ್ಮಿಕವಾಗಿ ಸಂಚಲನ ಮೂಡಿಸಲು ಸಜ್ಜಾಗಿದೆ. ಈ ಬಾರಿ ಬಣ್ಣಗಳ ಹಬ್ಬ ಹೋಳಿಯ ಸಂಭ್ರಮದ ನಡುವೆಯೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ