ಬೆಂಗಳೂರು : ಹೆಚ್ಎಂಪಿವಿ ಅಪಾಯಕಾರಿ ವೈರಸ್ ಅಲ್ಲ, ಆದರೂ ಮುಂಜಾಗ್ರತಾ ಕ್ರಮ ಕೈಗೊಂಡಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು. ವಿಧಾನಸೌಧದಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಚೈನಾ ವೈರಸ್ ಕಾಣಿಸಿಕೊಂಡಿದೆ. ಕರ್ನಾಟಕಕ್ಕೆ HMPV ವೈರಸ್ ಬಂದಿದೆ ಎಂಬ ಮಾಹಿತಿ ಬಂದಿದೆ. ಮುಂಜಾಗ್ರತಾ ಕ್ರಮಕ್ಕೆ ಆರೋಗ್ಯ ಇಲಾಖೆಗೆ ದಿನೇಶ್ ಗುಂಡೂರಾವ್ ಅವರಿಗೆ ಸೂಚನೆ ಕೊಟ್ಟಿದ್ದೇನೆ. ಈಗಾಗಲೇ ಇದರ ಬಗ್ಗೆ ಸಭೆ ನಡೆಯುತ್ತಿದೆ. ಈ ವೈರಸ್ ಎರಡು ಮಕ್ಕಳಲ್ಲಿ ಕಾಣಿಸಿಕೊಂಡಿದೆ ಎಂದರು.
ಆರೋಗ್ಯ ಇಲಾಖೆಯವರು ಏನೇನು ಕ್ರಮ ಕೈಗೊಳ್ಳಬೇಕು ಮಾಡ್ತಾರೆ. ಸಚಿವ ದಿನೇಶ್ ಗುಂಡೂರಾವ್ ಸಭೆ ಮಾಡ್ತಿದ್ದಾರೆ. ಆರೋಗ್ಯ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ ಸಭೆ ನಡೆಸ್ತಿದೆ ಎಂದರು.ವಿದೇಶದಿಂದ ಬರುವವರೆಗೆ ಸ್ಕ್ರೀನಿಂಗ್ ಮಾಡುವ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ನೋಡೋಣ, ಆರೋಗ್ಯ ಇಲಾಖೆಯವರು ಏನು ಕ್ರಮ ತೆಗೆದುಕೊಳ್ಳಬೇಕೋ ಅದನ್ನ ತೆಗೆದುಕೊಳ್ಳುವುದಕ್ಕೆ ಹೇಳಿದ್ದೇನೆ. ಸರ್ಕಾರ ಏನೇನು ಕ್ರಮ ಬೇಕೋ ಅದನ್ನು ತೆಗೆದುಕೊಳ್ಳುತ್ತದೆ. ದಿನೇಶ್ ಗುಂಡೂರಾವ್ ಸಭೆ ಮಾಡುತ್ತಿದ್ದಾರೆ, ಅಗತ್ಯ ಬಿದ್ದರೆ ನಾನು ಸಭೆ ಮಾಡುತ್ತೇನೆ ಎಂದರು.ನಕ್ಸಲರ ಶರಣಾಗತಿ ವಿಚಾರವಾಗಿ ಪ್ರತಿಕ್ರಿಯಿಸಿ, ನಕ್ಸಲರಿಗೆ ಶರಣಾಗಿ ಎಂದು ನಾನೇ ಕರೆ ಕೊಟ್ಟಿದ್ದೇನೆ. ಬಹುಶಃ ಅವರ ಮನಃ ಪರಿವರ್ತನೆ ಆಗುತ್ತೆ ಅಂತ ನಾನು ಅಂದುಕೊಂಡಿದ್ದೇನೆ. ನನ್ನೊಂದಿಗೆ ಮಾತನಾಡಿಲ್ಲ, ಮನಃ ಪರಿವರ್ತನೆ ಆಗುವ ಸಾಧ್ಯತೆ ಇದೆ ಎಂದು ಹೇಳಿದರು.