Breaking News

ಪತಿಯ ಅನುಮಾನ ರೋಗಕ್ಕೆ ಹಾರಿ ಹೋಯ್ತು ಪತ್ನಿ ಪ್ರಾಣ..!

Spread the love

ಕೊಪ್ಪಳ, (ಜನವರಿ 05): ಆಕೆ ಮುದ್ದು ಮುಖದ ತಾವರೆಯಂತಿದ್ದಳು. ಮನೆಯಲ್ಲಿ ಚೆನ್ನಾಗಿ ಸಾಕಿದ್ದ ಹೆತ್ತವರು,ಗಿಣಿಯಂತೆ ಇದ್ದ ಮಗಳನ್ನು ಮದುವೆ ಮಾಡಿ, ಆಕೆಯ ಸಂಸಾರದ ಬಾಳು ಆನಂದಸಾಗರವಾಗಲಿ ಅಂತ ಹರಿಸಿದ್ದರು. ಮದುವೆಯಾದ ಒಂದೇ ವರ್ಷಕ್ಕೆ ಮುದ್ದಾದ ಹೆಣ್ಣು ಮಗು ಕೂಡಾ ಹುಟ್ಟಿತ್ತು.

ಮದುವೆಯಾದ ಮಗಳು ಚೆನ್ನಾಗಿರಲಿ ಅಂತ ಹೆತ್ತವರು ಸಾಕಷ್ಟು ವರದಕ್ಷಿಣೆ ನೀಡಿದ್ದರು. ಅಳಿಯ ಕೇಳಿದಾಗ ಮತ್ತೆ ಹಣ ಕೂಡಾ ನೀಡಿದ್ದರು. ಆದ್ರೆ ಇಂತಹ ಮುದ್ದಾದ ಮಗಳು, ಬಾರದ ಲೋಕಕ್ಕೆ ಹೋಗಿದ್ದ ಸುದ್ದಿ ಕೇಳಿ ಹೆತ್ತವರಿಗೆ ಬರಸಿಡಿಲು ಬಡಿದಂತಾಗಿದ್ದು ಹೆತ್ತವರ ಆಕ್ರಂಧನ ಮುಗಿಲು ಮುಟ್ಟಿದೆ.

ಕೊಪ್ಪಳದಲ್ಲಿ ಹೆತ್ತವರ ಆಕ್ರೋಶ, ಆಕ್ರಂಧನಕ್ಕೆ ಕಾರಣ,ತಮ್ಮ ಮಗಳು ಬಾರದ ಲೋಕಕ್ಕೆ ಹೋಗಿದ್ದು. ಕೊಪ್ಪಳ ನಗರದ ಭಾಗ್ಯ ನಗರದಲ್ಲಿರುವ ಜನತಾ ಕಾಲೋನಿಯ ನಿವಾಸಿಯಾಗಿದ್ದ ರೇಣುಕಾ ಸಂಗಟಿ ಅನ್ನೋ ಇಪ್ಪತ್ತೈದು ವರ್ಷದ ಮಹಿಳೆ ಇಂದು ನಸುಕಿನ ಜಾವದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾಳೆ.

ರೇಣುಕಾಳ ಪತಿ, ರೇಣುಕಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಅಂತ ಹೇಳಿದ್ರೆ, ಇತ್ತ ಹೆತ್ತವರು ಮಾತ್ರ ಮಗಳ ಶವ ನೋಡಿ, ಇದು ಆತ್ಮಹತ್ಯೆಯಲ್ಲ, ಬದಲಾಗಿ ಕೊಲೆ ಅಂತ ಆರೋಪಿಸುತ್ತಿದ್ದಾರೆ. ರೇಣುಕಾಳ ಪತಿ ಅನೀಲ್ ಸಂಗಟಿ ಮತ್ತು ಆತನ ಕುಟುಂಬದವರು ಕೊಲೆ ಮಾಡಿ, ಆತ್ಮಹತ್ಯೆಯ ಕಥೆ ಕಟ್ಟುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ.


Spread the love

About Laxminews 24x7

Check Also

ನಾಲ್ಕು ರಾಜ್ಯಗಳ ಉಪಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ

Spread the loveಭಾರತೀಯ ಜನತಾ ಪಾರ್ಟಿ (ಬಿಜೆಪಿ) ಗೋವಾ ಸೇರಿದಂತೆ ನಾಲ್ಕು ರಾಜ್ಯಗಳ ಐದು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ