ಬೆಂಗಳೂರು, : ಕಳೆದ ಒಂದು ವಾರದಿಂದ ದೆಹಲಿಯಲ್ಲಿ ಬೀಡುಬಿಟ್ಟಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರಗೆ ಹೈಕಮಾಂಡ್ ಅಭಯ ಮತ್ತಷ್ಟು ಶಕ್ತಿ ತುಂಬಿದಂತಿದೆ. ಮೊನ್ನೆ ಮೊನ್ನೆಯಷ್ಟೇ ಕೇಂದ್ರ ಸಚಿವ ಅಮಿತ್ ಶಾರನ್ನೂ, ಜೆಪಿ ನಡ್ಡಾರನ್ನೂ ಭೇಟಿಯಾಗಿದ್ದರು. ಅದಾದ ಬೆನ್ನಲ್ಲೇ ರಾಜ್ಯಕ್ಕೂ ಜೆಪಿ ನಡ್ಡಾ, ವಿಜಯೇಂದ್ರ ಶುಕ್ರವಾರ ಒಟ್ಟಿಗೇ ಆಗಮಿಸಿದ್ದರು. ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ ವಿಜಯೇಂದ್ರ ಹೆಚ್ಚು ಆತ್ಮವಿಶ್ವಾಸದಿಂದ ಮಾತನಾಡುತ್ತಿದ್ದು, ಯತ್ನಾಳ್ಗೆ ಡೋಂಟ್ಕೇರ್ ಅನ್ನುತ್ತಿದ್ದಾರೆ ಎನ್ನಲಾಗಿದೆ.
ಕಳೆದ ಒಂದು ವಾರದಿಂದ ದೆಹಲಿಯಲ್ಲೇ ಇದ್ದ ವಿಜಯೇಂದ್ರ ಅಮಿತ್ ಶಾ ಸೇರಿದಂತೆ ಹಲವು ನಾಯಕರನ್ನು ಭೇಟಿ ಮಾಡಿದ್ದರು. ಅಮಿತ್ ಶಾ ಬಳಿಯೂ ಯತ್ನಾಳ್ ನಡೆಯ ಬಗ್ಗೆ ದೂರು ಕೊಟ್ಟಿದ್ದರು. ಇದಿಷ್ಟೇ ಅಲ್ಲ ಜೆಪಿ ನಡ್ಡಾರನ್ನೂ ಭೇಟಿಯಾಗಿ ಯತ್ನಾಳ್ ನಡೆಯ ಬಗ್ಗೆ ದೂರು ಕೊಟ್ಟಿದ್ದರು ಎನ್ನಲಾಗಿದೆ.
ಇದೀಗ, ಪ್ರತ್ಯೇಕ ಸಮರ ಸಾರಿರುವ ಯತ್ನಾಳ್ ವಿರುದ್ಧ ಮತ್ತೆ ವಿಜಯೇಂದ್ರ ಬೆಂಕಿಯುಗುಳಿದ್ದಾರೆ. ಯಾರೋ ಒಂದಿಬ್ಬರು ಮಾತನಾಡೋದನ್ನು ಬದಿಗಿಟ್ಟು, ಉಳಿದೆಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಕೆಲಸ ಮಾಡಿದ್ದೀನೆ. ರಾಜ್ಯಾಧಕ್ಷನಾಗಿ ಪಕ್ಷವನ್ನ ಅಧಿಕಾರಕ್ಕೆ ತಂದೇ ತರುತ್ತೇನೆ ಎಂದಿದ್ದಾರೆ.
Laxmi News 24×7