Breaking News

ಸಾರಿಗೆ ಬಸ್​ ದರ ಪರಿಷ್ಕರಣೆಗೆ ಹುಬ್ಬಳ್ಳಿ ಸಾರ್ವಜನಿಕರ ಅಭಿಪ್ರಾಯ

Spread the love

ಹುಬ್ಬಳ್ಳಿ: ರಾಜ್ಯ ಸರ್ಕಾರ ನಾಲ್ಕು ಸಾರಿಗೆ ಸಂಸ್ಥೆಗಳ ಪ್ರಯಾಣ ದರ ಪರಿಷ್ಕರಿಸುವ ನಿರ್ಧಾರ ಕೈಗೊಂಡಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳಲ್ಲಿ ಪ್ರಯಾಣ ದರ ಏರಿಕೆಯಾಗುತ್ತಿರುವುದಕ್ಕೆ ವಾಣಿಜ್ಯ ನಗರಿ ಹುಬ್ಬಳ್ಳಿ ಮಂದಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.KARNATAKA GOVT HIKE IN BUS FARE  DHARWAD  ಸಾರಿಗೆ ಬಸ್​ ದರ ಪರಿಷ್ಕರಣೆ  HUBBALLI

ಶಶಿಕುಮಾರ್ ಹಿರೇಮಠ ಎಂಬವರು ಪ್ರತಿಕ್ರಿಯಿಸಿ, “ಬಸ್​ ದರ ಏರಿಕೆ ಮಾಡುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುವದರ ಜೊತೆಗೆ ಆರ್ಥಿಕ ಹೊರೆ ಬೀಳಲಿದೆ. ದರ ಏರಿಕೆ ಮಾಡುವುದಕ್ಕಿಂತ ಮಹಿಳೆಯರಿಗೆ ನೀಡಿರುವ ಶಕ್ತಿ ಯೋಜನೆಯನ್ನು ಸ್ಥಗಿತಗೊಳಿಸಿ ಯಥಾಸ್ಥಿತಿ‌ ಮುಂದುವರೆಸಬೇಕು” ಎಂದು ಒತ್ತಾಯಿಸಿದ ಅವರು “ಸಾರಿಗೆ ಸಿಬ್ಬಂದಿಗೆ ಸಂಬಳ ಕೊಡಲು ಸಾಧ್ಯವಾಗದ ಕಾರಣ ಅದನ್ನು ಮುಚ್ಚಿಕೊಳ್ಳಲು ದರ ಏರಿಕೆ ಮಾಡಲಾಗಿದೆ.‌ ಹೀಗಾಗಿ ಸಾರ್ವಜನಿಕ ಹಿತಾಶಕ್ತಿ ಗಮನದಲ್ಲಿಟ್ಟುಕೊಂಡು ದರ ಪರಿಷ್ಕರಣೆ ಹಿಂದಕ್ಕೆ ಪಡೆಯಬೇಕು” ಎಂದರು.ಶ್ರೀನಿವಾಸ ಕುಲಕರ್ಣಿ ಪ್ರತಿಕ್ರಿಯಿಸಿ, “ಏಕಕಾಲಕ್ಕೆ ಶೇ.15ರಷ್ಟು ದರ ಏರಿಕೆ ಮಾಡಿದರೆ ಸಾರ್ವಜನಿಕರಿಗೆ ಕೂಲಿ ಕಾರ್ಮಿಕರಿಗೆ ಸಾಕಷ್ಟು ತೊಂದರೆಯಾಗಲಿದೆ‌. ಈಗಾಗಲೇ ದಿನ ಬಳಕೆ ವಸ್ತುಗಳು ಬೆಲೆ ಏರಿಕೆ ನಡುವೆ ಇದನದನು ಏರಿಕೆ ಸರಿಯಲ್ಲ‌. ಹಂತ ಹಂತವಾಗಿ ಬೆಲೆ ಏರಿಕೆ ಮಾಡಿದರೆ ಒಳ್ಳೆಯದು. ‌ಈಗ ಏಕಕಾಲಕ್ಕೆ ಶೇ.15ರಷ್ಟು ಮಾಡಬಾರದು” ಎಂದು ಅನಿಸಿಕೆ ಹಂಚಿಕೊಂಡರು.


Spread the love

About Laxminews 24x7

Check Also

ಕೊಟಗುಂಡಹುಣಸಿಯಲ್ಲಿ ನಿವ ಅದೇಷ್ಟೋ ಜನ ನಿವೃತ್ತಿಯಾದ ನಂತರ ತಾವಾಯ್ತು, ತಮ್ಮ ಕುಟುಂಬ ಆಯಿತು ಅಂತಾ ಕಾಲ ಕಳೆಯುವವರೇ ಹೆಚ್ಚು.

Spread the loveಕೊಟಗುಂಡಹುಣಸಿಯಲ್ಲಿ ನಿವ ಅದೇಷ್ಟೋ ಜನ ನಿವೃತ್ತಿಯಾದ ನಂತರ ತಾವಾಯ್ತು, ತಮ್ಮ ಕುಟುಂಬ ಆಯಿತು ಅಂತಾ ಕಾಲ ಕಳೆಯುವವರೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ