ಹಾವೇರಿ: ಪ್ರತಿಯೊಬ್ಬರಿಗೂ ಒಂದೊಂದು ಹವ್ಯಾಸ ಇರುತ್ತದೆ. ಕೆಲವರಿಗೆ ಹಳೆಯ ಕಾರ್ಗಳ ಸಂಗ್ರಹದ ಹವ್ಯಾಸ, ಇನ್ನು ಕೆಲವರಿಗೆ ಅಂಚೆ ಚೀಟಿ ಸಂಗ್ರಹಿಸುವ ಹವ್ಯಾಸ ಇರುತ್ತದೆ. ಆದರೆ, ಹಾವೇರಿಯಲ್ಲೊಬ್ಬ ವಿಶಿಷ್ಟ ಹವ್ಯಾಸವಿರುವ ಯುವಕನೊಬ್ಬನಿದ್ದಾನೆ.
ಹಾವೇರಿಯ ನಾಗೇಂದ್ರನಮಟ್ಟಿಯ ಮೌಲಾಲಿಗೆ ಪಾರಿವಾಳಗಳನ್ನು ಸಾಕುವ ಹವ್ಯಾಸ. ಪಾರಿವಾಳ ಸಂಗ್ರಹದಲ್ಲಿ ಸುಮಾರು 15ಕ್ಕೂ ಅಧಿಕ ದೇಶ- ವಿದೇಶಗಳ ವಿವಿಧ ಜಾತಿಯ ಪಾರಿವಾಳಗಳಿವೆ. ಸುಮಾರು 120ಕ್ಕೂ ಅಧಿಕ ಪಾರಿವಾಳ ಸಾಕಿರುವ ಮೌಲಾಲಿ ಬಹುತೇಕರಂತೆ ಜೂಜಿಗಾಗಿ ಹಣಕ್ಕಾಗಿ ಸಾಕುತ್ತಿಲ್ಲ ಬದಲಿಗೆ ಪಾರಿವಾಳ ಅಂದರೆ ಇವರಿಗೆ ಇಷ್ಟ. ಪಾರಿವಾಳ ನೋಡದಿದ್ದರೆ ಮೌಲಾಲಿಗೆ ದಿನ ಕಳೆಯುವುದಿಲ್ಲ
ವಿವಿಧ ಜಾತಿಯ ಪಾರಿವಾಳಗಳು: ಲಕ್ಕಾ, ಹ್ಯಾಂಗರ್, ಕೇಸರ್, ಬಾಮರ್, ರೇಸಿಂಗ್ ಬಾಮರ್, ಅಮೆರಿಕನ್ ಲಕ್ಕಾ, ದುಬಾಸ್, ಗಿರಿಯಾ ಬಾಜಿ ಜಾತಿಯ ಪಾರಿವಾಳಗಳಿವೆ. ಮೌಲಾಲಿ ತಂದೆ ಪಾರಿವಾಳ ಸಾಕುತ್ತಿದ್ದರು. ಅವರು ತೀರಿ ಹೋದ ಮೇಲೆ ಅದೇ ಹವ್ಯಾಸವನ್ನು ಮಗ ಬೆಳೆಸಿಕೊಂಡು ಬಂದಿದ್ದಾರೆ. ಪ್ರತಿಯೊಂದು ಗೂಡಿನಲ್ಲಿ ಒಂದು ಗಂಡು ಹೆಣ್ಣು ಜೋಡಿಯನ್ನು ಇಡುತ್ತಾರೆ. ಅವು ಹಾಕುವ ಮೊಟ್ಟೆಗಳಿಂದ ಮರಿಗಳನ್ನು ಸಹ ಮಾಡುವ ರೂಢಿಯನ್ನು ಮೌಲಾಲಿ ಬೆಳೆಸಿಕೊಂಡು ಬಂದಿದ್ದಾರೆ