Breaking News

ರಾಜಕಾರಣಿಗಳು ಕ್ರಿಕೆಟ್‌ನಿಂದ ದೂರವಿರಬೇಕು: ಡಿ.ಕೆ.ಶಿವಕುಮಾರ್

Spread the love

ಬೆಂಗಳೂರು: ರಾಜಕಾರಣ ಹಾಗೂ ಕ್ರಿಕೆಟ್ ಎರಡೂ ಸಹ ಬೇರೆ ಬೇರೆ ಎಂದು ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಹೇಳಿದರು. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯಲ್ಲಿ ಇಂದು ಆಯೋಜಿಸಲಾಗಿದ್ದ 1983 ವಿಶ್ವಕಪ್ ವಿಜೇತ‌ ಭಾರತ ತಂಡದ‌ ಸದಸ್ಯ, ಕನ್ನಡಿಗ ಸೈಯದ್‌ ಕಿರ್ಮಾನಿ ಅವರ ಆತ್ಮಕಥೆ “ಸ್ಟಂಪ್ಡ್ : ಲೈಫ್ ಬಿಹೈಂಡ್​​ ಆ್ಯಂಡ್ ಬಿಯಾಂಡ್​ ದಿ ಟ್ವೆಂಟಿ ಟು ಯಾರ್ಡ್ಸ್” ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

“ರಾಜಕೀಯ ಹಾಗೂ ಕ್ರಿಕೆಟ್ ಎರಡೂ ಬೇರೆ ಬೇರೆ, ರಾಜಕಾರಣಿಗಳು ಕ್ರಿಕೆಟ್‌ನಿಂದ ಯಾವಾಗಲೂ ದೂರವಿರಬೇಕು. ಆದರೆ ನಾನು ಡಿಸಿಎಂ ಆಗಿ ಅಲ್ಲ ಬದಲಿಗೆ ಸೈಯದ್ ಕಿರ್ಮಾನಿಯವರ ಅಭಿಮಾನಿಯಾಗಿ ಕಾರ್ಯಕ್ರಮಕ್ಕೆ ಬಂದಿದ್ದೇನೆ. ಶಾಲಾ ದಿನಗಳಿಂದಲೂ ನಾನು ಸೈಯದ್ ಕಿರ್ಮಾನಿ, ಜಿ.ಆರ್.ವಿಶ್ವನಾಥ್ ಹಾಗೂ ಬಿ. ಎಸ್. ಚಂದ್ರಶೇಖರ್ ಅವರ ಅಭಿಮಾನಿ” ಎಂದರು.


Spread the love

About Laxminews 24x7

Check Also

ನಾಲ್ಕು ರಾಜ್ಯಗಳ ಉಪಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ

Spread the loveಭಾರತೀಯ ಜನತಾ ಪಾರ್ಟಿ (ಬಿಜೆಪಿ) ಗೋವಾ ಸೇರಿದಂತೆ ನಾಲ್ಕು ರಾಜ್ಯಗಳ ಐದು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ