Breaking News

ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ

Spread the love

ಡಿಸೆಂಬರ್​ 28: ದೈವದ ನೇಮ ಆಗುವ ಗದ್ದೆಯಲ್ಲಿ ತ್ಯಾಜ್ಯ ರಾಶಿ ಕಂಡು ದೈವ ಕೆಂಡಾಮಂಡಲವಾದಂತಹ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ (Ullal) ತಾಲೂಕಿನ ಕುಂಪಲ ಬಳಿಯ ಕನೀರುತೋಟ ಎಂಬಲ್ಲಿ ನಡೆದಿದೆ.

ದೈವದ ಕೋಪಕ್ಕೆ ದೈವಸ್ಥಾನದ ಆಡಳಿತ ಮಂಡಳಿ ಕಕ್ಕಾಬಿಕ್ಕಿಯಾಗಿದ್ದಾರೆ. ಇಲ್ಲಿನ ವೈದ್ಯನಾಥ ದೈವದ ನೇಮ ಹಾಗೂ ವಲಸರಿ‌ ಸೇವೆಯಿತ್ತು. ದೈವ ಆವೇಶವಾಗಿ ಇನ್ನೇನು ವಲಸರಿ ಹೊರಡಬೇಕು ಎಂಬಷ್ಟರಲ್ಲಿ ಘಟನೆ ನಡೆದಿದೆ.

ಇದೇನು ವಲಸರಿ ಗದ್ದೆಯೋ, ಸಂತೆಗದ್ದೆಯೋ? ನಾನು ಎಂಜಲು ತುಳಿದು ವಲಸರಿ ಹೋಗಬೇಕೆ ಎಂದು ದೈವ ಪ್ರಶ್ನೆ ಮಾಡಿದೆ. ಹೇಗೆ ಆಗಬೇಕೋ ಹಾಗೆಯೇ ಆಗಬೇಕು. ಹೇಗೋ ಆದರೆ ಆಯ್ತು ಎನ್ನುವುದು ಉಚಿತವಲ್ಲ ಎಂದು ಕೆಂಡಾಮಂಡಲವಾಗಿದೆ. ಸದ್ಯ ದೈವದ ಕೋಪಾವೇಶದ ನುಡಿಯ ವಿಡಿಯೋ ವೈರಲ್​ ಆಗಿದೆ.


Spread the love

About Laxminews 24x7

Check Also

ಮಾ.3ಕ್ಕೆ ರಕ್ತಚಂದ್ರಗ್ರಹಣ – ಕರ್ನಾಟಕದಲ್ಲಿ 25 ನಿಮಿಷ ಗ್ರಹಣ ಗೋಚರ

Spread the loveಬೆಂಗಳೂರು: ಮಾ.3ರಂದು ಕೇತುಗ್ರಸ್ತ ರಕ್ತಚಂದ್ರಗಹಣ  ಸಂಭವಿಸಲಿದೆ. ಹೋಳಿ ಹಬ್ಬದಂದೇ ಬಾನಂಗಳದಲ್ಲಿ ಕೆಂಬಣ್ಣದ ಚಂದಿರನ ವಿಸ್ಮಯ ಗೋಚರವಾಗಲಿದೆ. ಪಾಲ್ಗುಣ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ