Breaking News

ಸಿನಿಮಾ ಶೈಲಿಯಲ್ಲಿ ಬ್ಯಾಂಕಿಗೆ ವಂಚನೆ: ತಂಗಿ ಮದ್ವೆ ಸಾಲಕ್ಕೆ ಅಣ್ಣ ಜೈಲು ಸೇರುವ ಪರಿಸ್ಥಿತಿ

Spread the love

ನೆಲಮಂಗಲ, ಡಿಸೆಂಬರ್​ 27: ಆಭರಣ ಮೌಲ್ಯಮಾಪಕನಿಂದ ಕರ್ನಾಟಕ ಗ್ರಾಮೀಣ ಬ್ಯಾಂಕ್​ಗೆ 23 ಲಕ್ಷಕ್ಕೂ ಹೆಚ್ಚು ಹಣ ವಂಚನೆ (fraud) ಮಾಡಿರುವಂತಹ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಕರ್ನಾಟಕ ಗ್ರಾಮೀಣ ಬ್ಯಾಂಕ್ ಶಾಖೆಯಲ್ಲಿ ನಡೆದಿದೆ. ಆಭರಣ ಮೌಲ್ಯಮಾಪಕ ಮಂಜುನಾಥ ವಂಚಕ.

ನೆಲಮಂಗಲ ಪೊಲೀಸ್ ಠಾಣೆಗೆ ಮ್ಯಾನೇಜರ್ ಆನಂದ್ ದೂರು ನೀಡುತ್ತಿದ್ದಂತೆ ಇತ್ತ ವಂಚಕ ಪರಾರಿ ಆಗಿದ್ದಾರೆ. ತಂಗಿಯ ಮದುವೆ ಸಾಲಕ್ಕೆ ಅಣ್ಣ ಜೈಲು ಸೇರುವ ಪರಿಸ್ಥಿತಿ ಎದರಾಗಿದೆ.ಅರ್ಧ ಕೆಜಿಯಷ್ಟು ನಕಲಿ ಚಿನ್ನಾಭರಣ ಅಡವಿಟ್ಟು ಮಂಜುನಾಥ ವಂಚಿಸಿದ್ದಾರೆ.

ಆದರ್ಶ ಹೆಸರಿನಲ್ಲಿ 3 ಲಕ್ಷ ರೂ., ಲೋಕೇಶ್ ಹೆಸರಿನಲ್ಲಿ 4 ಲಕ್ಷ ರೂ., ಸುದರ್ಶನ್ ಹೆಸರಿನಲ್ಲಿ 3 ಲಕ್ಷ ರೂ., ಗಿರೀಶ್ ಹೆಸರಿನಲ್ಲಿ 5 ಲಕ್ಷ ರೂ., ಐಶ್ವರ್ಯ ಹೆಸರಿನಲ್ಲಿ 3 ಲಕ್ಷ ರೂ. ಮತ್ತು ಹರೀಶ್ ಹೆಸರಿನಲ್ಲಿ 3 ಲಕ್ಷ ರೂ. ಹೀಗೆ ಬೇರೆ ಬೇರೆಯವರ ಹೆಸರಲ್ಲಿ ನಕಲಿ ಚಿನ್ನ ಅಡವಿಟ್ಟು ವಂಚಿಸಲಾಗಿದೆ.

ತಂಗಿ ಮದುವೆ ಸಾಲವಿದೆ ಎಂದು ಬೇರೆಯವರನ್ನು ಕರೆತಂದು ಬೇರೆಯವರ ಬ್ಯಾಂಕ್ ಖಾತೆ ಮೂಲಕ ನಕಲಿ ಚಿನ್ನಾಭರಣ ಅಡಮಾನವಿಡಲಾಗಿದೆ. ಆಭರಣ ಪರೀಕ್ಷೆ ವೇಳೆ ನಕಲಿ ಚಿನ್ನಾಭರಣವೆಂದು ಕರ್ನಾಟಕ ಗ್ರಾಮೀಣ ಬ್ಯಾಂಕ್ ಮ್ಯಾನೇಜರ್​ ಆನಂದ್ ಪತ್ತೆಹಚ್ಚಿದ್ದಾರೆ. ಸದ್ಯ ಪೊಲೀಸರಿಗೆ ದೂರು ನೀಡಿದ್ದು, ವಂಚಕನ ಮಾತಿಗೆ ಮರುಳಾಗಿ ಖಾತೆಗೆ ಹಣ ಹಾಕಿಸಿಕೊಂಡವರಿಗೂ ಪೊಲೀಸರಿಂದ ನೋಟಿಸ್ ನೀಡಲಾಗಿದೆ.


Spread the love

About Laxminews 24x7

Check Also

2026ರ ಮೊದಲ ಚಂದ್ರಗ್ರಹಣ: ಈ ರಾಶಿಯವರಿಗೆ ಒಲಿಯಲಿದೆ ರಾಜಯೋಗ ಹೋಳಿ ಹಬ್ಬದಂದೇ ಯಾರಿಗೆ ಅದೃಷ್ಟ? ಯಾರಿಗೆ ಎಚ್ಚರಿಕೆ?

Spread the love2026ರ ವರ್ಷವು ಆಧ್ಯಾತ್ಮಿಕವಾಗಿ ಸಂಚಲನ ಮೂಡಿಸಲು ಸಜ್ಜಾಗಿದೆ. ಈ ಬಾರಿ ಬಣ್ಣಗಳ ಹಬ್ಬ ಹೋಳಿಯ ಸಂಭ್ರಮದ ನಡುವೆಯೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ