Breaking News

ಲಿಕ್ಕರ್ ಮಳಿಗೆಗಳು ಮತ್ತು ಬಾರ್‍ಗಳು ಮುಚ್ಚಿದ್ದರಿಂದ ಮದ್ಯ ಮಾರಾಟದಲ್ಲಿ ಭಾರೀ ಇಳಿಕೆ

Spread the love

ಬೆಂಗಳೂರು, – ರಾಜ್ಯದಲ್ಲಿ ಕೋವಿಡ್-19 ಲಾಕ್‍ಡೌನ್ ಸಂದರ್ಭ ದಲ್ಲಿ ಎಲ್ಲ ಲಿಕ್ಕರ್ ಮಳಿಗೆಗಳು ಮತ್ತು ಬಾರ್‍ಗಳು ಮುಚ್ಚಿದ್ದರಿಂದ ಮದ್ಯ ಮಾರಾಟದಲ್ಲಿ ಭಾರೀ ಇಳಿಕೆಯಾಗಿತ್ತು. ಆದರೆ, ಲಾಕ್‍ಡೌನ್ ತೆರವುಗೊಂಡ ಬಳಿಕ ಅಬಕಾರಿ ಇಲಾಖೆ ತನ್ನ ಆದಾಯ ಹೆಚ್ಚಿಸಿಕೊಂಡಿದೆ. ಕಳೆದ ಹಣಕಾಸು ವರ್ಷಕ್ಕೆ ಹೋಲಿಸಿದರೆ ಅತ್ಯಲ್ಪ ಆದಾಯ ಕುಸಿತ ಅನುಭವಿಸಿದೆ.

2019ರ ಏಪ್ರಿಲ್-ನವೆಂಬರ್ ಅವಧಿಯಲ್ಲಿ ರಾಜ್ಯ ಅಬಕಾರಿ ಇಲಾಖೆಯು 14,390.39 ಕೋಟಿ ರೂ. ಆದಾಯ ಪಡೆದಿದ್ದರೆ, ಈ ವರ್ಷ 13,778.30 ಕೋಟಿ ರೂ. ಆದಾಯ ಗಳಿಸಿದೆ. ಅಂದರೆ ಎರಡು ತಿಂಗಳ ಲಾಕ್‍ಡೌನ್ ಮತ್ತು ಜನರ ಕೋವಿಡ್ ಭಯದ ನಡುವೆಯೂ ಅಬಕಾರಿ ಇಲಾಖೆ ಕಳೆದ ವರ್ಷಕ್ಕೆ ಹೋಲಿಸಿದರೆ ಕೇವಲ 612.09 ಕೋಟಿ ರೂ. ಕಡಿಮೆ ಆದಾಯ ಗಳಿಸಿದೆ.

2019ರ ನವೆಂಬರ್ ಅಂತ್ಯಕ್ಕೆ ಸಂಗ್ರಹವಾಗಿದ್ದ ಇಲಾಖೆಯ ಆದಾಯಕ್ಕೆ ಹೋಲಿಸಿದರೆ 2020ರ ನವೆಂಬರ್ ಅಂತ್ಯಕ್ಕೆ ಅಬಕಾರಿ ಆದಾಯವು ಶೇ.4.25ರಷ್ಟು ಮಾತ್ರವೇ ಕಡಿಮೆಯಾಗಿದೆ. ಈ ಕೊರತೆಯು ಮೇ ತಿಂಗಳ ಶೇ.58.15, ಜೂನ್ ತಿಂಗಳ ಶೇ. 33.49, ಜುಲೈ ತಿಂಗಳ ಶೇ.21.26 ಮತ್ತು ಆಗಸ್ಟ್ ತಿಂಗಳ ಶೇ. 15.07ರಿಂದ ಇಳಿಕೆಯಾಗಿದೆ.

ಲಾಕ್‍ಡೌನ್ ಸಂದರ್ಭದಲ್ಲಿ ಮದ್ಯ ಸಿಗುತ್ತಿಲ್ಲ ಎಂದು ಪರದಾಡುತ್ತಿದ್ದ ಮದ್ಯಪ್ರಿಯರು, ಸೀಮಿತ ಅವಧಿಯಲ್ಲಿ ಮದ್ಯ ಮಳಿಗೆಗಳನ್ನು ತೆರೆಯಲು ಅವಕಾಶ ನೀಡುತ್ತಿದ್ದಂತೆಯೇ ಖುಷಿಯಿಂದ ಮುಗಿಬಿದ್ದು ಖರೀದಿಯಲ್ಲಿ ತೊಡಗಿದ್ದರು.


Spread the love

About Laxminews 24x7

Check Also

ರಾಜಕಾರಣಿಗಳು, ಸಹಚರರ ಜೊತೆ ಮಲಗು ಎಂದು ಪೀಡಿಸುವ ಗಂಡ! 6 ಬಾರಿ ತಲಾಖ್, ಅಬಾರ್ಷನ್

Spread the loveಬೆಂಗಳೂರು, ಜುಲೈ 1: ಗಂಡನಾದವನೇ ಹೆಂಡತಿಯನ್ನು ಬೇರೆಯವರ ಜತೆ ಮಲಗುವಂತೆ ಪೀಡಿಸಿದರೆ, ಅದಕ್ಕಾಗಿ ಹಿಂಸಿಸಿದರೆ ಮಹಿಳೆಯ ಸ್ಥಿತಿ ಹೇಗಾಗಬಹುದು! …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ