ಹುಬ್ಬಳ್ಳಿ ಮತ್ತು ರಾಮೇಶ್ವರಂ ಮಧಗ್ಯದ ಸಾಪ್ತಾಹಿಕ ವಿಶೇಷ ಎಕ್ಸ್​ಪ್ರೆಸ್ ರೈಲು ಸಂಚಾರ ಅವಧಿಯನ್ನು ವಿಸ್ತರಿಸಿ ರೈಲ್ವೆ ಇಲಾಖೆ ಪ್ರಕಟಣೆ ಹೊರಡಿಸಿದೆ.

Spread the love

ಹುಬ್ಬಳ್ಳಿ: ನಗರದ ಶ್ರೀ ಸಿದ್ಧಾರೂಢ ಸ್ವಾಮೀಜಿ ರೈಲ್ವೆ ನಿಲ್ದಾಣದಿಂದ ರಾಮೇಶ್ವರಂ ಸಂಚರಿಸುವ ಸಾಪ್ತಾಹಿಕ ವಿಶೇಷ ಎಕ್ಸ್​ಪ್ರೆಸ್ ರೈಲುಗಳ ಅವಧಿಯನ್ನು ವಿಸ್ತರಿಸಲು ರೈಲ್ವೆ ಮಂಡಳಿ ಅನುಮೋದನೆ ನೀಡಿದೆ.

ರೈಲು ಸಂಖ್ಯೆ 07355: ಎಸ್ಎಸ್ಎಸ್ ಹುಬ್ಬಳ್ಳಿ – ರಾಮೇಶ್ವರಂ ಮಧ್ಯದ ಸಾಪ್ತಾಹಿಕ ವಿಶೇಷ ಎಕ್ಸ್​ಪ್ರೆಸ್ ರೈಲು ಜನವರಿ 4 ರಿಂದ ಜೂನ್ 28, 2025 ರವರೆಗೆ ತನ್ನ ಸೇವೆ ಮುಂದುವರಿಸಲಿದೆ. ಈ ಮೊದಲು ಡಿಸೆಂಬರ್ 28, 2024ರ ವರೆಗೆ ಈ ರೈಲು ಓಡಿಸಲು ಸೂಚಿಸಲಾಗಿತ್ತು. ಇದೀಗ ಇದನ್ನು ವಿಸ್ತರಿಸಲಾಗಿದೆ.

ರೈಲು ಸಂಖ್ಯೆ 07356: ರಾಮೇಶ್ವರಂನಿಂದ ಎಸ್ಎಸ್ಎಸ್ ಹುಬ್ಬಳ್ಳಿಗೆ ಆಗಮಿಸುವ ಸಾಪ್ತಾಹಿಕ ವಿಶೇಷ ಎಕ್ಸ್​ಪ್ರೆಸ್ ರೈಲು ಜನವರಿ 5 ರಿಂದ ಜೂನ್ 29, 2025ರ ವರೆಗೆ ತನ್ನ ಸೇವೆ ಮುಂದುವರಿಸಲಿದೆ. ಈ ಮೊದಲು ಡಿಸೆಂಬರ್ 29, 2024ರ ವರೆಗೆ ಓಡಿಸಲು ಸೂಚಿಸಲಾಗಿತ್ತು.

ಮಧುರೈ ವಿಭಾಗದ ವ್ಯಾಪ್ತಿಯಲ್ಲಿ ಬರುವ ಶಿವಗಂಗಾ ನಿಲ್ದಾಣದಲ್ಲಿ ಈ ರೈಲುಗಳಿಗೆ ಹೆಚ್ಚುವರಿ ನಿಲುಗಡೆಯನ್ನು ಒದಗಿಸಲಾಗಿದೆ.


Spread the love

About Laxminews 24x7

Check Also

ಕಾರ್ಮಿಕ ಸಂಘಟನೆಗಳಿಂದ ಭಾರತ್ ಬಂದ್‌ಗೆ ಕರೆ – 9 ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರೊಟೆಸ್ಟ್

Spread the loveಬೆಂಗಳೂರು: ದೇಶಾದ್ಯಂತ ಹಲವು ಕಾರ್ಮಿಕ ಸಂಘಟನೆಗಳು  ಇಂದು ಭಾರತ್ ಬಂದ್‌ಗೆ  ಕರೆ ಕೊಟ್ಟಿವೆ. ಕೇಂದ್ರ ಸರ್ಕಾರದ ಹೊಸ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ