Breaking News

ಜಮೀರ್-ಯತ್ನಾಳ್ ಜುಗಲ್ ಬಂದಿ!

Spread the love

ಇನ್ನೊಂದೆಡೆ ಇಂದು ಸುವರ್ಣಸೌಧದ ಸಚಿವರ ಚೇಂಬರ್​​ನಲ್ಲಿ ಸಚಿವ ಜಮೀರ್ ಅಹಮದ್ ಖಾನ್ ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ಪರಸ್ಪರ ಭೇಟಿಯಾದ ವೇಳೆ ಅನ್ಯೋನ್ಯತೆಯಿಂದ ಮಾತುಕತೆ ನಡೆಸಿದರು.

ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸುವರ್ಣಸೌಧ ಕಚೇರಿಯಲ್ಲಿ ಸಚಿವ ಜಮೀರ್ ಅಹಮದ್ ಖಾನ್ ಅವರನ್ನು ಭೇಟಿ ಮಾಡಿ ಕ್ಷೇತ್ರದ ಅಭಿವೃದ್ಧಿ ಯೋಜನೆ ಕುರಿತು ಚರ್ಚಿಸಿದರು. ಈ ವೇಳೆ ಯತ್ನಾಳ್ ಅವರನ್ನು ಪ್ರೀತಿಯಿಂದಲೇ ಬರಮಾಡಿಕೊಂಡ ಜಮೀರ್, ಕಾಫಿ ಕೊಟ್ಟು ಉಪಚರಿಸಿದರು.

MLA YATNAL MEETS MINISTER ZAMIR AHAMAD KHAN

 

ವಕ್ಫ್ ವಿಚಾರವಾಗಿ ಕಳೆದ ಒಂದು ತಿಂಗಳಿಂದ ಸಚಿವ ಜಮೀರ್ ವಿರುದ್ಧ ಮುಗಿಬೀಳುತ್ತಿರುವ ಯತ್ನಾಳ್ ಇಂದು ಸಚಿವರ ಜೊತೆ ಆಪ್ತತೆಯಿಂದ ಮಾತುಕತೆ ನಡೆಸಿರುವುದು ಗಮನ ಸೆಳೆಯಿತು. ಸದನದ ಒಳಗೆ ಕಳೆದ ವಾರ ವಕ್ಫ್ ವಿಚಾರವಾಗಿ ಯತ್ನಾಳ್ ಅವರು ಸರ್ಕಾರ ಹಾಗೂ ಸಚಿವ ಜಮೀರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು.

ಇಬ್ಬರೂ ನಾಯಕರೂ ಇಂದು ಭೇಟಿಯಾಗಿ ಮಾತುಕತೆ ನಡೆಸಿರುವ ಫೋಟೋ ಸಾಕಷ್ಟು ಗಮನ ಸೆಳೆದಿದೆ.


Spread the love

About Laxminews 24x7

Check Also

ಕಾರ್ಮಿಕ ಸಂಘಟನೆಗಳಿಂದ ಭಾರತ್ ಬಂದ್‌ಗೆ ಕರೆ – 9 ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರೊಟೆಸ್ಟ್

Spread the loveಬೆಂಗಳೂರು: ದೇಶಾದ್ಯಂತ ಹಲವು ಕಾರ್ಮಿಕ ಸಂಘಟನೆಗಳು  ಇಂದು ಭಾರತ್ ಬಂದ್‌ಗೆ  ಕರೆ ಕೊಟ್ಟಿವೆ. ಕೇಂದ್ರ ಸರ್ಕಾರದ ಹೊಸ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ