Breaking News

ಸದನದಲ್ಲಿ ಪರಸ್ಪರ ನಮಸ್ಕರಿಸಿದ ವಿಜಯೇಂದ್ರ-ಯತ್ನಾಳ್

Spread the love

ಬೆಳಗಾವಿ: ಬಹಿರಂಗವಾಗಿ ಪರಸ್ಪರ ಅಸಮಾಧಾನ ವ್ಯಕ್ತಪಡಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಹಾಗೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮುಖಾಮುಖಿಯಾಗಿ ಕುಶಲೋಪರಿ ವಿಚಾರಿಸಿದ ಪ್ರಸಂಗ ಇಂದು ಸದನದಲ್ಲಿ ನಡೆಯಿತು.

ಭಿನ್ನಮತದ ಹಿನ್ನೆಲೆ ಪರಸ್ಪರ ವೈಮನಸ್ಸು ಹೊಂದಿದ್ದವರು ಸೋಮವಾರ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ವಿಜಯೇಂದ್ರ ಪರಸ್ಪರ ನಮಸ್ಕರಿಸಿ, ಮಾತನಾಡಿಸುವ ಮೂಲಕ ಗಮನ ಸೆಳೆದರು. ನಿನ್ನೆ ಬೆಳಗ್ಗೆ ಸದನದಲ್ಲಿ ಈ ಅಪರೂಪದ ಕ್ಷಣ ಕಂಡುಬಂದಿತ್ತು.

ಸೋಮವಾರ ಸದನದಲ್ಲಿ ತಾವೇ ಖುದ್ದಾಗಿ ಯತ್ನಾಳ್ ಅವರನ್ನು ಮಾತನಾಡಿಸಿದ್ದ ವಿಜಯೇಂದ್ರ, ಶಾಸಕರಿಗಾಗಿ ತಾವು ಆಯೋಜಿಸಿದ್ದ ಔತಣಕೂಟಕ್ಕೆ ಆಹ್ವಾನಿಸಿದ್ದರು. ಯತ್ನಾಳ್ ಅವರನ್ನು ನೋಡಿ ಕೈಮುಗಿದು ಔತಣಕೂಟಕ್ಕೆ ಬರುವಂತೆ ಕೋರಿದ್ದರು. ಸದನದ ವಿಪಕ್ಷಗಳ ಆಸನದ ಮೊದಲ ಸಾಲಿನಲ್ಲಿ ಕುಳಿತಿದ್ದ ಬಿ. ವೈ. ವಿಜಯೇಂದ್ರ ಅವರು ಯತ್ನಾಳ್ ಕಡೆ ತಿರುಗಿ ನಮಸ್ಕರಿಸಿ, ಔತಣಕೂಟಕ್ಕೆ ಬರುವಂತೆ ಆಹ್ವಾನಿಸಿದ್ದರು. ಅದಕ್ಕೆ ನಮಸ್ಕರಿಸಿ, ನಗು ಮೊಗದಲ್ಲಿ ಆಗಲಿ ಅಂತ ಹೇಳಿದ್ದ ಯತ್ನಾಳ್, ಔತಣ ಕೂಟಕ್ಕೆ ಹೋಗಿರಲಿಲ್ಲ.


Spread the love

About Laxminews 24x7

Check Also

ನಾಲ್ಕು ರಾಜ್ಯಗಳ ಉಪಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ

Spread the loveಭಾರತೀಯ ಜನತಾ ಪಾರ್ಟಿ (ಬಿಜೆಪಿ) ಗೋವಾ ಸೇರಿದಂತೆ ನಾಲ್ಕು ರಾಜ್ಯಗಳ ಐದು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ