ಬೆಳಗಾವಿ: “ನಾವು ಯಾರ ಪರವೂ ಇಲ್ಲ, ಯಾರ ವಿರುದ್ಧವೂ ಇಲ್ಲ” ಎಂದು ಶಾಸಕ ಬಿಜೆಪಿ ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ.
ಸುವರ್ಣ ಸೌಧದಲ್ಲಿಂದು ಮಾತನಾಡಿದ ಅವರು, ದೆಹಲಿ ಹೈಕಮಾಂಡ್ ನಾಯಕರ ಭೇಟಿ ವಿಚಾರವಾಗಿ ಪ್ರತಿಕ್ರಿಯಿಸಿ, “ಮೊದಲ ಹಂತದ ಹೋರಾಟದ ವರದಿ ನೀಡಿದ್ದೇವೆ. ಜೆಪಿಸಿ ಸಮಿತಿಗೂ ವರದಿ ನೀಡಿದ್ದೇವೆ. ಯತ್ನಾಳ್ ಶೋಕಾಸ್ ನೋಟಿಸ್ಗೆ ಉತ್ತರ ಕೊಟ್ಟಿದ್ದಾರೆ. ಇದನ್ನು ಬಿಟ್ಟು ಬೇರೆ ಏನಿಲ್ಲ” ಎಂದರು.
ವಿಜಯೇಂದ್ರ ಪರ ಮಾಜಿ ಶಾಸಕರ ಸಭೆ ವಿಚಾರವಾಗಿ ಪ್ರತಿಕ್ರಿಯಿಸಿ, “ಆ ಹೋರಾಟದಲ್ಲಿ ಇರುವವರ ಫೋಟೊಗಳನ್ನು ನೋಡಿ. 12 ಜನ ಮಾಜಿ ಶಾಸಕರಿದ್ದಾರೆ. ಅಧ್ಯಕ್ಷರಿದ್ದಾರೆ ಅನ್ನುವ ಕಾರಣಕ್ಕೆ ಅವರೆಲ್ಲಾ ಹೋಗಿದ್ದಾರೆ. ಅಧ್ಯಕ್ಷರು ಹೋರಾಟಕ್ಕೆ ಹೋಗಿ ಅಂತ ಹೇಳಿದ್ದಕ್ಕೆ ಹೋಗಿದ್ದಾರೆ” ಎಂದು ಹೇಳಿದರು.
Laxmi News 24×7