Breaking News

ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ಪವಿತ್ರಾ ಗೌಡ ಹಾಗು ಲಕ್ಷ್ಮಣ್​ ಇಂದು ಜೈಲಿನಿಂದ ಬಿಡುಗಡೆಯಾದರು.

Spread the love

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ಪವಿತ್ರಾ ಗೌಡ ಹಾಗೂ ಲಕ್ಷ್ಮಣ್ ಇಂದು ಜೈಲಿನಿಂದ ಬಿಡುಗಡೆಯಾಗಿದ್ದಾರೆ.

ಜೂನ್ 11ರಂದು ಬಂಧಿಸಲ್ಪಟ್ಟು ಪರಪ್ಪನ ಅಗ್ರಹಾರ ಕಾರಾಗೃಹ ಸೇರಿದ್ದ ಪವಿತ್ರಾ ಗೌಡ ಹಾಗು ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿದ್ದ ಆರೋಪಿ ಲಕ್ಷ್ಮಣ್​ ಬಿಡುಗಡೆಯಾಗಿದ್ದಾರೆ.

ನಟ ದರ್ಶನ್​, ಪವಿತ್ರಾ ಗೌಡ, ಪ್ರದೋಷ್​, ಅನುಕುಮಾರ್, ನಾಗರಾಜ್, ಲಕ್ಷ್ಮಣ್ ಹಾಗೂ ಜಗದೀಶ್​ಗೆ ಕಳೆದ ಶುಕ್ರವಾರ ಹೈಕೋರ್ಟ್ ಜಾಮೀನು ನೀಡಿತ್ತು. ಎರಡನೇ ಶನಿವಾರ ಹಾಗು ಭಾನುವಾರ ರಜೆ ಇದ್ದ ಕಾರಣ ಸೋಮವಾರ ಕೋರ್ಟ್​ ಜಾಮೀನು ಪ್ರತಿ ನೀಡಿತ್ತು.

ಜೈಲಿನಿಂದ ಹೊರಬಂದ ತಕ್ಷಣ ಪವಿತ್ರಾ ಗೌಡಗೆ ಸಮೀಪದ ಮುನೇಶ್ವರ ದೇವಾಲಯದೆದುರು ಕುಟುಂಬಸ್ಥರು ದೃಷ್ಟಿ ತೆಗೆದರು. ನಂತರ ಮಾಧ್ಯಮಗಳು ಪ್ರತಿಕ್ರಿಯೆ ಪಡೆಯಲು ಮುಂದಾಗಿದ್ದು, ಯಾವುದಕ್ಕೂ ಉತ್ತರಿಸದೇ ಕಾರಿನಲ್ಲಿ ಕುಳಿತು ಮನೆಯತ್ತ ಹೊರಟರು.

ಸೋಮವಾರ ರಾತ್ರಿ 10.30ಕ್ಕೆ ಶಿವಮೊಗ್ಗ ಕೇಂದ್ರ ಕಾರಾಗೃಹಕ್ಕೆ ಇಮೇಲ್ ಬಂದ ಕಾರಣ ಇಂದು ಬೆಳಗ್ಗೆ ಲಕ್ಷ್ಮಣ್​ ಅವರನ್ನು ಬಿಡುಗಡೆ ಮಾಡಲಾಗಿದೆ. ಜೈಲಿನಿಂದ ಬಿಡುಗಡೆಯಾಗುತ್ತಿದ್ದಂತೆಯೇ ಮಾಧ್ಯಮದವರು ಪ್ರತಿಕ್ರಿಯೆಗೆ ಯತ್ನಿಸಿದರು. ಆದರೆ ಅವರು ಪ್ರತಿಕ್ರಿಯೆ ನೀಡದೆ ಓಡಿ ಹೋಗಿ ಕಾರು ಹತ್ತಿ ತೆರಳಿದರು.


Spread the love

About Laxminews 24x7

Check Also

ನಾಲ್ಕು ರಾಜ್ಯಗಳ ಉಪಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ

Spread the loveಭಾರತೀಯ ಜನತಾ ಪಾರ್ಟಿ (ಬಿಜೆಪಿ) ಗೋವಾ ಸೇರಿದಂತೆ ನಾಲ್ಕು ರಾಜ್ಯಗಳ ಐದು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ