Breaking News

ಅಲೆಮಾರಿ ದಂಪತಿಯ ಒಂದು ವರ್ಷದ ಗಂಡು ಮಗು ನಾಪತ್ತೆ

Spread the love

ದಾವಣಗೆರೆ: ಅಲೆಮಾರಿ ದಂಪತಿಯ 1 ವರ್ಷ ಗಂಡು ಮಗು ನಾಪತ್ತೆಯಾದ ಘಟನೆ ನ.16ರಂದು ವಿಜಯನಗರ ಜಿಲ್ಲೆಯ ಹರಪನಹಳ್ಳಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಪೋಷಕರಾದ ಯುವರಾಜ್ ಪವಾರ್ ಮತ್ತು​ ಸಾರಿಕಾ ಪವಾರ್​ ಹರಪನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿ ಒಂದು ತಿಂಗಳಾದರೂ ಮಗುವಿನ ಸುಳಿವು ಇನ್ನೂ ಪತ್ತೆಯಾಗಿಲ್ಲ. ಹೀಗಾಗಿ ಹೆತ್ತವರು ಅಳಲು ತೋಡಿಕೊಂಡಿದ್ದಾರೆ.

ಮಗುವಿನ ತಂದೆ ಯುವರಾಜ್ ಪವಾರ್ ಅವರು ಜೊತೆ ಮಾತನಾಡಿ, “ಹರಪನಹಳ್ಳಿಯಲ್ಲಿ ಟೆಂಟ್ ಹಾಕಿಕೊಂಡು ರಾತ್ರಿ ವೇಳೆ ಮಲಗಿದ್ದಾಗ ಒಂದು ವರ್ಷ ಎರಡು ತಿಂಗಳು ವಯಸ್ಸಿನ ಪುತ್ರ ಆರ್ಯನ್ ನಾಪತ್ತೆಯಾಗಿದ್ದಾನೆ. ಮಗು ಹುಡುಕಿಕೊಡುವಂತೆ ಹರಪನಹಳ್ಳಿ ಠಾಣೆಯಲ್ಲಿ ದೂರು ದಾಖಲು ಮಾಡಿದ್ದೇವೆ.

ದೂರು ನೀಡಿ ಒಂದು ತಿಂಗಳು ಕಳೆದಿದ್ದರೂ ಮಗುವಿನ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ನಮ್ಮ ಮಗುವನ್ನು ಯಾರು ಅಪಹರಿಸಿದ್ದಾರೆ ಗೊತ್ತಿಲ್ಲ. ನಮಗೆ ಮಗುವನ್ನು ಹುಡುಕಿ ಕೊಡಿ” ಎಂದು ಅಳಲು ತೋಡಿಕೊಂಡರು.


Spread the love

About Laxminews 24x7

Check Also

ಕಾರ್ಮಿಕ ಸಂಘಟನೆಗಳಿಂದ ಭಾರತ್ ಬಂದ್‌ಗೆ ಕರೆ – 9 ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರೊಟೆಸ್ಟ್

Spread the loveಬೆಂಗಳೂರು: ದೇಶಾದ್ಯಂತ ಹಲವು ಕಾರ್ಮಿಕ ಸಂಘಟನೆಗಳು  ಇಂದು ಭಾರತ್ ಬಂದ್‌ಗೆ  ಕರೆ ಕೊಟ್ಟಿವೆ. ಕೇಂದ್ರ ಸರ್ಕಾರದ ಹೊಸ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ