Breaking News

 ಮೂರು ತಿಂಗಳಿಂದ ವೇತನ ನೀಡದಿದ್ದಕ್ಕೆ ಬ್ಯಾನರ್ ಕಂಬ ಏರಿದ ಕಾರ್ಮಿಕ

Spread the love

ಡಿಸೆಂಬರ್​ 16: ಮೂರು ತಿಂಗಳಿಂದ ವೇತನ ನೀಡದಿದ್ದಕ್ಕೆ ಬ್ಯಾನರ್ ಕಂಬ ಏರಿ ಕಾರ್ಮಿಕ (labor) ಪ್ರತಿಭಟನೆ ಮಾಡಿರುವಂತಹ ಘಟನೆ ಜಿಲ್ಲೆಯ ಬೈಲಹೊಂಗಲ ಪಟ್ಟಣದಲ್ಲಿ ನಡೆದಿದೆ.

ಮಂಜುನಾಥ ‌ಬಸಪ್ಪ ಮಡೊಳ್ಳಿ (48) ಪ್ರತಿಭಟನೆ ಮಾಡಿದ ಕಾರ್ಮಿಕ. ಸಂಗಮ್ ಹೋಟೆಲ್​​ನಲ್ಲಿ ಮಂಜುನಾಥ ಕೆಲಸ ಮಾಡುತ್ತಿದ್ದರು. ಸಂಬಳ ಕೇಳಿದ್ದಕ್ಕೆ ಕಾರ್ಮಿಕನ ಮೇಲೆ ಮಾಲೀಕ ಚಂದ್ರಶೇಖರ್ ಶೆಟ್ಟಿ ಹಲ್ಲೆ ಮಾಡಿ ಅವಾಚ್ಯವಾಗಿ ನಿಂದಿಸಿದ್ದಾರೆ. ಇದರಿಂದ ಮನನೊಂದು ಹೋಟೆಲ್ ಎದುರಿನ ಬ್ಯಾನರ್ ಕಂಬ ಏರಿ ಕುಳಿತಿದ್ದಾರೆ.

ಕೂಡಲೇ ಕಂಬ ಏರಿದ ಆಟೋ ಚಾಲಕ ಕಾರ್ಮಿಕನನ್ನ ಕಾಪಾಡಿ ಪೊಲೀಸರ ಕೈಗೆ ಒಪ್ಪಿಸಿದ್ದಾರೆ. ಬೈಲಹೊಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


Spread the love

About Laxminews 24x7

Check Also

ನಾಲ್ಕು ರಾಜ್ಯಗಳ ಉಪಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ

Spread the loveಭಾರತೀಯ ಜನತಾ ಪಾರ್ಟಿ (ಬಿಜೆಪಿ) ಗೋವಾ ಸೇರಿದಂತೆ ನಾಲ್ಕು ರಾಜ್ಯಗಳ ಐದು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ