Breaking News

ಹೋರಾಟವನ್ನು ಅಸಂವೈಧಾನಿಕ ಅಂತ ಹೇಳಿ ಸಮುದಾಯದ ಬಗ್ಗೆ ಸಿಎಂ ನಿಷ್ಕಾಳಜಿ ಪ್ರದರ್ಶಿಸಿದ್ದಾರೆ: ಸ್ವಾಮೀಜಿ

Spread the love

ಬೆಳಗಾವಿ: ಪ್ರತಿಭಟನೆನಿರತ ಪಂಚಮಸಾಲಿಗಳ ಮೇಲೆ ಲಾಠಿ ಪ್ರಹಾರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಸದನದಲ್ಲಿ ಮಾತಾಡುವಾಗ ಪಂಚಮಸಾಲಿಗಳ ಮೀಸಲಾತಿ ಹೋರಾಟವನ್ನು ಸಂವಿಧಾನಬಾಹಿರ ಅಂತ ಹೇಳಿದ್ದು ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಮತ್ತು ಸಮುದಾಯದವರಲ್ಲಿ ತೀವ್ರ ಅಸಮಾಧಾನವನ್ನುಂಟು ಮಾಡಿದೆ.

ನಗರದಲ್ಲಿಂದು ಮಾಧ್ಯಮಗೋಷ್ಠಿಯೊಂದನ್ನು ಉದ್ದೇಶಿಸಿ ಮಾತಾಡಿದ ಸ್ವಾಮೀಜಿ, ನಮ್ಮ ಹೋರಾಟವನ್ನು ಅಸಂವೈಧಾನಿಕ ಎಂದು ಹೇಳುವ ಮೂಲಕ ಸಮುದಾಯದ ಬಗ್ಗೆ ತನಗೆ ಯಾವುದೇ ಕಾಳಜಿ ಇಲ್ಲವೆನ್ನುವುದನ್ನು ಸಿದ್ದರಾಮಯ್ಯ ನಿರೂಪಿಸಿದ್ದಾರೆ,

ಅವರು ಹೇಳಿರುವುದು ಬಸವಣ್ಣನ ಎಲ್ಲ ಅನುಯಾಯಿಗಳಿಗೆ ಮಾಡಿದ ಅವಮಾನವಾಗಿದೆ ಎಂದು ಸ್ವಾಮೀಜಿ ಕಿಡಿ ಕಾರಿದರು.


Spread the love

About Laxminews 24x7

Check Also

ಮಾ.3ಕ್ಕೆ ರಕ್ತಚಂದ್ರಗ್ರಹಣ – ಕರ್ನಾಟಕದಲ್ಲಿ 25 ನಿಮಿಷ ಗ್ರಹಣ ಗೋಚರ

Spread the loveಬೆಂಗಳೂರು: ಮಾ.3ರಂದು ಕೇತುಗ್ರಸ್ತ ರಕ್ತಚಂದ್ರಗಹಣ  ಸಂಭವಿಸಲಿದೆ. ಹೋಳಿ ಹಬ್ಬದಂದೇ ಬಾನಂಗಳದಲ್ಲಿ ಕೆಂಬಣ್ಣದ ಚಂದಿರನ ವಿಸ್ಮಯ ಗೋಚರವಾಗಲಿದೆ. ಪಾಲ್ಗುಣ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ