Breaking News

30 ಗುಂಟೆಯಲ್ಲಿ ಬದನೆಕಾಯಿ ಬೆಳೆದು 15 ಲಕ್ಷ ರೂಪಾಯಿ ಲಾಭಗಳಿಸಿದ ಹಜಾರೆ ಸಹೋದರರ

Spread the love

 

ಚಿಕ್ಕೋಡಿ: ಭೂಮಿ ತಾಯಿಯನ್ನು ನಂಬಿದ ರೈತನಿಗೆ ಎಂದಿಗೂ ಮೋಸವಾಗಿಲ್ಲ ಎಂಬುದು ಹಿರಿಯರ ಮಾತಿನಂತೆ ಇಲ್ಲೋಬ್ಬ ಯುವ ರೈತ 30 ಗುಂಟೆಯಲ್ಲಿ ಕೇವಲ ಆರು ತಿಂಗಳಲ್ಲಿಯೇ ಬದನೆಕಾಯಿ ಬೆಳೆದು 15 ಲಕ್ಷ ರೂ ಬಂಪರ ಬೆಳೆ ತೆಗೆದು ಇತರ ರೈತನಿಗೆ ಮಾದರಿಯಾಗಿದ್ದಾನೆ.

ಚಿಕ್ಕೋಡಿ ತಾಲೂಕಿನ ಕಾಡಾಪೂರ ಗ್ರಾಮದ ಯುವ ರೈತರಾದ ಅನಿಲ ಹಜಾರೆ ಮತ್ತು ಸುನೀಲ ಹಜಾರೆ ಅವರು ತಮ್ಮ ಅರ್ಧ ಎಕರೆಯಲ್ಲಿ 1093 ತಳಿಯ ಬದನೆಕಾಯಿ ಬೆಳೆ ನಾಟಿ ಮಾಡಿದ್ದರು. ನಾಟಿ ಮಾಡಿ ಆರು ತಿಂಗಳಲ್ಲಿಯೇ ಬದನೆಕಾಯಿಗೆ ಮಾರುಕಟ್ಟೆಯಲ್ಲಿ ಒಳ್ಳೆಯ ಬೆಲೆ ಸಿಕ್ಕಿದೆ. ಆರು ತಿಂಗಳಲ್ಲಿ ಸುಮಾರು 40 ಟನ್ ಬದನೆಕಾಯಿ ಇಳುವರಿ ತೆಗೆದು ಸುಮಾರು 15 ಲಕ್ಷ ರೂ ಆದಾಯ ಗಳಿಸಿದ್ದಾರೆ.

ವಾಣಿಜ್ಯ ಬೆಳೆ ಕಬ್ಬು ನಾಟಿ ಮಾಡಲು ಪ್ರತಿಯೊಬ್ಬರು ಮುಂದಾಗುತ್ತಾರೆ. ಅರ್ಧ ಎಕರೆಯಲ್ಲಿ ಕಬ್ಬು ನಾಟಿ ಮಾಡಿದರೆ 25 ರಿಂದ 30 ಟನ್ ಇಳುವರಿ ಬಂದು 75 ಸಾವಿರದಿಂದ 90 ಸಾವಿರದವರೆಗೆ ಆದಾಯ ಬರುತ್ತಿತ್ತು. ಆದರೆ ಕಾಡಾಪೂರದ ರೈತ ಅನಿಲ,ಸುನಿಲ ಹಜಾರೆ ಅವರು ವೈಜ್ಞಾನಿಕವಾಗಿ ಬದನೆಕಾಯಿ ನಾಟಿ ಮಾಡಿ ಆರು ತಿಂಗಳಲ್ಲಿಯೇ 40 ಟನ್ ಇಳುವರಿ ಪಡೆದು 15 ಲಕ್ಷ ರೂ ಆದಾಯ ಗಳಿಸಿರುವುದು ಇತರೆ ಯುವ ರೈತರಿಗೆ ಮಾದರಿಯಾಗಿದ್ದಾರೆ.
ಜಮೀನಿನಲ್ಲಿ ವಿವಿಧ ಬೆಳೆ ಬೆಳೆದು ಕೈಸುಟ್ಟುಕೊಂಡು ಕೃಷಿನೆ ಬೇಡ ಎನ್ನುವ ಸ್ಥಿತಿಯಲ್ಲಿ ಇದ್ದೇವು. ಕರ್ನಾಟಕದ ಗಡಿ ಭಾಗ ಮತಗ್ತು ಮಹಾರಾಷ್ಟçದ ಇಚಲಕರಂಜಿ, ಸಾಂಗ್ಲೀ, ಕೊಲ್ಲಾಪೂರ ಜಿಲ್ಲೆಯಲ್ಲಿ ಹೆಚ್ಚು ಮಾರಾಟವಾಗುವ 1093 ಬದನೆಕಾಯಿಯ ಸುಮಾರು 2500 ಸಸಿಗಳನ್ನು ಅರ್ಧ ಎಕರೆಯಲ್ಲಿ ನಾಟಿ ಮಾಡಿದೇವು. ಸದ್ಯ 40 ಟನ್ ಇಳುವರಿ ಬಂದು ನಮ್ಮ ಜೀವನ ಬದಲಿಸಿದೆ ಎಂದು ರೈತರಾದ ಅನಿಲ ಮತ್ತು ಸುನೀಲ ಖುಷಿ ಪಟ್ಟರು.

ಒಟ್ಟಿನಲ್ಲಿ ಕೇವಲ 30 ಗುಂಟೆಯಲ್ಲಿ ಬದನೆಕಾಯಿ ಬೆಳೆದು 15 ಲಕ್ಷ ರೂಪಾಯಿ ಲಾಭಗಳಿಸಿದ ಹಜಾರೆ ಸಹೋದರರ ಕಾರ್ಯ ಇತರರಿಗೆ ಮಾದರಿ..


Spread the love

About Laxminews 24x7

Check Also

ಚಿಕ್ಕೋಡಿಯಲ್ಲಿ ವಿಜೃಂಭಣೆಯಿಂದ ಜರುಗಿದ ಮೇದಾರ ಕೇತಯ್ಯಾ ಜಯಂತಿ

Spread the loveಚಿಕ್ಕೋಡಿಯಲ್ಲಿ ವಿಜೃಂಭಣೆಯಿಂದ ಜರುಗಿದ ಮೇದಾರ ಕೇತಯ್ಯಾ ಜಯಂತಿ ಚಿಕ್ಕೋಡಿ: ಪಟ್ಟಣದಲ್ಲಿ ಇವತ್ತು ಶಿವಶರಣ ಮೇದಾರ ಕೇತಯ್ಯಾನವರ 894 …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ