ಬೆಳಗಾವಿ, (ಡಿಸೆಂಬರ್ 08): ಮೈದುನ ಜೊತೆಗಿನ ಗುಪ್ತ ಸಂಬಂಧ ಬಹಿರಂಗವಾಗಿದ್ದಕ್ಕೆ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಬೊಮ್ಮನಾಳ ಗ್ರಾಮದಲ್ಲಿ ನಡೆದಿದೆ.
ಕಾಗವಾಡ ತಾಲೂಕಿನ ಕುಸನಾಳ ಗ್ರಾಮದ 28 ವರ್ಷದ ಆರತಿಗೆ ಏಳು ವರ್ಷದ ಹಿಂದೆ ಮೊರಬ ಗ್ರಾಮದ ಪ್ರಶಾಂತ್ ಕಾಂಬಳೆ ಜೊತೆಗೆ ಮದುವೆಯಾಗಿದ್ದು, ಎರಡು ಮಕ್ಕಳು ಸಹ ಇವೆ. ಆದ್ರೆ, ಮೈದುನ (ಗಂಡನ ಸಹೋದರ) ಜೊತೆಗಿನ ಸಂಬಂಧ ಎಲ್ಲರಿಗೂ ಗೊತ್ತಾಗುತ್ತಿದ್ದಂತೆಯೇ ಆರತಿ ತನ್ನ ಅಕ್ಕನ ಮನಗೆ ಬಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ
.ಕಾಗವಾಡ ತಾಲೂಕಿನ ಕುಸನಾಳ ಗ್ರಾಮದ ಆರತಿಗೆ ಏಳು ವರ್ಷದ ಹಿಂದೆ ಮೊರಬ ಗ್ರಾಮದ ಪ್ರಶಾಂತ್ ಕಾಂಬಳೆ ಜೊತೆಗೆ ಮದುವೆಯಾಗಿದ್ದು, ಎರಡು ಮಕ್ಕಳು ಸಹ ಇವೆ.
ಒಂದು ಗಂಡು ಒಂದು ಹೆಣ್ಣು ಮಗುವಿದ್ದು ಆದ್ರೇ ಅಕ್ಕನ ಮನೆಗೆ ಬಂದಿದ್ದವಳು ಅಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಬಗ್ಗೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆಗೆ ನಡೆಸಿದಾಗ ಒಂದು ವಾಟ್ಸಪ್ ಹಾಗೂ ಇನ್ಸ್ಟಾಗ್ರಾಮ್ ಸ್ಟೇಟಸ್ನಿಂದಾಗಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಬೆಳಕಿಗೆ ಬಂದಿದೆ.ರತಿ ಆತ್ಮಹತ್ಯೆ ಮಾಡಿಕೊಂಡಿದ್ದು ಗಂಡ, ಅತ್ತೆ ಮಾವ ಕಿರುಕುಳ ಅಥವಾ ತವರು ಮನೆಯವರ ಕಿರುಕುಳದಿಂದ ಅಲ್ಲ.
ಬದಲಿಗೆ ಅದೊಂದು ವಾಟ್ಸಪ್, ಇನ್ಸ್ಟಾಗ್ರಾಂ ಸ್ಟೇಟಟ್ನಿಂದ ಎನ್ನುವುದು ಗೊತ್ತಾಗಿದೆ. ಈ ಸಂಬಂಧ ಆರು ಜನರ ವಿರುದ್ಧ ಆಕೆಯ ಗಂಡ ದೂರು ದಾಖಲಾಗಿದೆ.