ವಿನೋದ್ ಕಾಂಬ್ಳಿ ನೆರವಿಗೆ 1983 ವಿಶ್ವಕಪ್ ವಿಜೇತ ತಂಡ ಸಿದ್ಧ ಎಂದ ಗವಾಸ್ಕರ್
Laxminews 24x7
ಡಿಸೆಂಬರ್ 7, 2024
ರಾಜಕೀಯ, ರಾಜ್ಯ
146 Views
ಟೀಂ ಇಂಡಿಯಾದ ಮಾಜಿ ಆಟಗಾರ ವಿನೋದ್ ಕಾಂಬ್ಳಿ ಅವರ ಆರ್ಥಿಕ ಮತ್ತು ವೈಯಕ್ತಿಕ ಸಂಕಷ್ಟಕ್ಕೆ 1983ರ ವಿಶ್ವಕಪ್ ವಿಜೇತ ತಂಡ ಸಹಾಯ ಮಾಡಲು ಮುಂದಾಗಿದೆ.
ಸುನಿಲ್ ಗವಾಸ್ಕರ್ ಮತ್ತು ಕಪಿಲ್ ದೇವ್ ಅವರು ಕಾಂಬ್ಳಿಗೆ ಆರ್ಥಿಕ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.
ಆದರೆ ಕಾಂಬ್ಳಿಗೆ ನೆರವು ನೀಡಬೇಕೆಂದರೆ ಅವರು ಮೊದಲು ಕುಡಿದತ ಚಟದಿಂದ ಮುಕ್ತರಾಗಬೇಕು ಎಂದು ಕಪಿಲ್ ದೇವ್ ಷರತ್ತು ವಿಧಿಸಿದ್ದಾರೆ.
ಅನಾರೋಗ್ಯ ಹಾಗೂ ಆರ್ಥಿಕ ಸಂಕಷ್ಟದಿಂದ ಜೀವನ ನಿರ್ವಹಣೆಗೂ ಸಂಕಷ್ಟ ಪಡುತ್ತಿರುವ ಟೀಂ ಇಂಡಿಯಾದ ಮಾಜಿ ಆಟಗಾರ ಹಾಗೂ ಸಚಿನ್ ತೆಂಡೂಲ್ಕರ್ ಅವರ ಬಾಲ್ಯದ ಗೆಳೆಯ ವಿನೋದ್ ಕಾಂಬ್ಳಿ ಅವರಿಗೆ ಎಲ್ಲಾ ರೀತಿಯ ನೆರವು ನೀಡಲು 1983 ರ ಚೊಚ್ಚಲ ಏಕದಿನ ವಿಶ್ವಕಪ್ ಗೆದ್ದ ತಂಡದ ಸದಸ್ಯರೆಲ್ಲರು ಸಿದ್ದರಿದ್ದೇವೆ ಎಂದು ಆ ತಂಡದ ಭಾಗವಾಗಿದ್ದ ಸುನೀಲ್ ಗವಾಸ್ಕರ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ವಾಸ್ತವವಾಗಿ ಕೆಲವು ದಿನಗಳ ಹಿಂದೆ ಕಪಿಲ್ ದೇವ್ ಕೂಡ ವಿನೋದ್ ಕಾಂಬ್ಳಿಗೆ ನೆರವು ನೀಡುವುದಾಗಿ ಹೇಳಿಕೊಂಡಿದ್ದರು. ಆದರೆ ನಾವು ನೆರವು ನೀಡಬೇಕೆಂದರೆ ವಿನೋದ್ ಮೊದಲು ರಿಹ್ಯಾಬ್ ಸೆಂಟರ್ಗೆ ಸೇರಿ ಕುಡಿತದ ಚಟದಿಂದ ಹೊರಬರಬೇಕು ಎಂಬ ಷರತ್ತವನ್ನು ವಿಧಿಸಿದ್ದರು.