ಡ್ರಗ್ಸ್ ಮುಕ್ತ ಹುಬ್ಬಳ್ಳಿ- ಧಾರವಾಡ ಪೊಲೀಸ್ ಕಮಿಷನರ್ ಕಾರ್ಯಕ್ಕೆ ಕನ್ನಡ ಚಿತ್ರರಂಗದ ನಟರು ಸಾಥ್ ನೀಡಿದ್ದು ಕಳೆದ ತಿಂಗಳು ಮಾದಕ ದ್ರವ್ಯ ವಸ್ತುಗಳ ವಿರುದ್ಧದ ಜಾಗೃತಿಯನ್ನು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ ಸಾಥ್ ನೀಡಿದ್ದರು ಇಂದು ಹು-ಧಾ ಪೊಲೀಸ್ ಕಮಿಷನರಗೆ ರಿಯಲ್ ಸ್ಟಾರ್ ಉಪೇಂದ್ರ ಅವರು ಸಾಥ್ ನೀಡಿದ್ದಾರೆ.
ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಆಗಿ ನೇಮಕ ಆದಾಗಿನಿಂದ ಎನ್.ಶಶಿಕುಮಾರ್ ಅವರು ಗಾಂಜಾ , ಡ್ರಗ್ಸ್ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಂಡು ಗಾಂಜಾ , ಡ್ರಗ್ಸ್ ಕಡಿವಾಣ ಹಾಕಿದ್ದರು. ಇದೀಗ ಒಂದು ಹೆಜ್ಜೆ ಮುಂದಿಟ್ಟಿರುವ ಪೊಲೀಸ್ ಕಮಿಷನರ್ ಹು-ಧಾ ವಿವಿಧ ಕಾಲೇಜು ವಿದ್ಯಾರ್ಥಿಗಳಲ್ಲಿ ಮಾದಕ ವಸ್ತುಗಳ ವಿರುದ್ಧದ ಜಾಗೃತಿ
ಮುಡಿಸುತ್ತಿದ್ದಾರೆ.
: ಹುಬ್ಬಳ್ಳಿ ಬಿವಿಬಿ ಕಾಲೇಜನಿಂದ ತೋಳನ ಕೇರೆ ವರೆಗೆ ವಾಕ್ ಥಾ ನಲ್ಲಿ ಚಿತ್ರ ನಟ ರಿಯಲ್ ಸ್ಟಾರ್ ಉಪೇಂದ್ರ ಅವರು ಭಾಗಿ ಮಾದಕ ವಸ್ತುಗಳ ಕುರಿತು ವಿದ್ಯಾರ್ಥಿಗಳಿಗೆ ತಿಳುವಳಿಕೆ ನೀಡಿದರು. ಎರಡು ಕಿಲೋಮೀಟರ್ ವಾಕ್ ಥಾ ನಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗಿಯಾಗಿದ್ದರು.
ನಂತರ ಮಾದಕ ವಸ್ತುಗಳ ವಿರುದ್ಧದ ಜಾಗೃತಿ ವಾಕ್ ಥಾನ್ ಕಾರ್ಯಕ್ರಮ ದಲ್ಲಿ ಮಾತನಾಡಿದ ಚಿತ್ರ ನಟ ಉಪೇಂದ್ರ ಅವರು . ವಿದ್ಯಾರ್ಥಿಗಳು
ಬೇಡವಾದ ಎಂಬೊಂದನ್ನು ಒಳ್ಳೆಯದರ ಜೊತೆ ಸೇರಿಸಬಾರದು. ಪ್ರತಿದಿನ ನಿಮ್ಮ ಮನಸ್ಸಿನ ಜೊತೆಯಲ್ಲಿ ಹತ್ತು ನಿಮಿಷಗಳ ಕಾಲ ಮಾತನಾಡಿಕೊಳ್ಳಿ. .ಒಳ್ಳೆಯದು ಯಾವುದು ಕೆಟ್ಟದ್ದು ಯಾವುದು ನೀವೆ ತೀರ್ಮಾನ ಮಾಡಿ ಎಂದರು.
: ಒಟ್ಟಿನಲ್ಲಿ ಹು-ಧಾ ಅವಳಿ ನಗರದ ಪೊಲೀಸರು ಡ್ರಗ್ಸ್ ನಿರ್ಮೂಲನೆ ಮಾಡುವ ಸಲುವಾಗಿ. ಚಿತ್ರ ನಟರನ್ನ ಕರೆಸಿ ಕಾಲೇಜುಳಲ್ಲಿ ಡ್ರಗ್ಸ್ ವಿರುದ್ಧ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡುತ್ತಿರುವುದು ಖುಷಿಯ ಸಂಗತಿಯಾಗಿದ್ದು. ಸಾರ್ವಜನಿಕರು ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.