ಹು-ಧಾ ಪಶ್ಚಿಮ ವಿಧಾನ ಸಭಾ ಕ್ಷೇತ್ರದ ಜನ್ನತ ನಗರದ 117 ನಿವಾಸಿಗಳಿಗೆ ಹಕ್ಕುಪತ್ರ ವಿತರಣೆ….ವಿಪಕ್ಷ ನಾಯಕ ಅರವಿಂದ ಬೆಲ್ಲದರಿಂದ ಹಕ್ಕುಪತ್ರ ಹಸ್ತಾಂತರ
ಹು-ಧಾ ಪಶ್ಚಿಮ ವಿಧಾನ ಸಭಾ ಕ್ಷೇತ್ರದ ಜನ್ನತ ನಗರದ ನಿವಾಸಿಗಳು
ಅತಂತ್ರ ಪರಿಸ್ಥಿತಿಯಲ್ಲಿ ಜೀವನ ಸಾಗಿಸುತ್ತಿದ್ದ ಜನ
117 ನಿವಾಸಿಗಳಿಗೆ ಹಕ್ಕುಪತ್ರ ವಿತರಣೆ
ವಿಪಕ್ಷ ನಾಯಕ ಅರವಿಂದ ಬೆಲ್ಲದರಿಂದ ಹಕ್ಕುಪತ್ರ ವಿತರಣೆ
ಆ್ಯಂಕರ್- ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಧಾರವಾಡ ಜನ್ನತ ನಗರದ ಕೊಳಚೆ ಪ್ರದೇಶದ ನಿವಾಸಿಗಳಿಗೆ, ವಿಪಕ್ಷ ನಾಯಕರಾದ ಶಾಸಕ ಅರವಿಂದ ಬೆಲ್ಲದವರು ನಿವಾಸಿಗಳಿಗೆ ಹಕ್ಕುಪತ್ರ ನೀಡುವ ಮೂಲಕ ನಿವಾಸಿಗಳ ಮುಖದಲ್ಲಿ ನಗು ಮೂಡಿಸಿದ್ದಾರೆ.
ಹೌದು ತಾವು ವಾಸಿಸುತ್ತಿದ್ದ ನಿವಾಸದ ಹಕ್ಕುಪತ್ರವಿಲ್ಲದೆ ಅತಂತ್ರ ಭಾವನೆಯಲ್ಲಿ ದಿನ ದೂಡುತ್ತಿದ್ದ ಜನ್ನತ ನಗರದ 117 ಕುಟುಂಬಗಳಿಗೆ, ವಿರೋಧ ಪಕ್ಷದ ಉಪನಾಯಕರು ಹಾಗೂ ಹು-ಧಾ ಪಶ್ಚಿಮ ಶಾಸಕ ಅರವಿಂದ ಬೆಲ್ಲದವರು ಕಳೆದ ಭಾನುವಾರ ನಿವಾಸಿಗಳಲಿಗೆ ಹಕ್ಕು ಪತ್ರ ನೀಡಿದ್ದಾರೆ. ಈ ಸಂದರ್ಭದಲ್ಲಿ ಪ್ರಮುಖರಾದ ಮಂಜುನಾಥ್ ನೀರಲಕಟ್ಟಿ, ಶ್ರೀಕಾಂತ್ ಮುಂಗೋಡಿಕರ್, ಸ್ವಾಮಿ ಮಹಾಜನಶೆಟ್ಟರ್ ಸೇರಿ ಅನೇಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.