ಬರುವ ಚಳಿಗಾಲ ಅಧಿವೇಶನದಲ್ಲಿ ಲಿಂಗಾಯತ ಸಮಾಜಕ್ಕೆ ೨ಎ ಮಿಸಲಾತಿ ಪಡೆಯಲು ಉಗ್ರವಾದ ಹೋರಾಟ ಕೈಗೊಳ್ಳುಲು ಕೂಡಲ ಸಂಗಮ ಗುರುಪೀಠದ ಬಸವ ಜಯ ಮೃತ್ಯಂಜಯ ಸ್ವಾಮಿಜಿ ಅವರು ಕಾಗವಾಡ ತಾಲೂಕಿನ ಪಂಚಮಶಾಲಿ ಲಿಂಗಾಯತ ಸಮಾಜದ ಮುಖಂಡರ ಸಭೆಯಲ್ಲಿ ಬೆಳಗಾವಿ ಚಲೋ ಕರೆ ನೀಡಿದರು.
ಸೋಮವಾರಂದು ಕಾಗವಾಡದ ಸರಕಾರಿ ವಿಶ್ರಾಂತಿ ಗೃಹದಲ್ಲಿ ಕಾಗವಾಡ ತಾಲೂಕಾ ಮಟ್ಟದ ಪಂಚಮಶಾಲಿ ಲಿಂಗಾಯತ ಸಮಾಜದ ಮುಖಂಡರನ್ನು ಮತ್ತು ಹೋರಾಟ ಸಮಿತಿಯ ಎಲ್ಲ ಪದಾಧಿಕಾರಿಗಳ ಸಭೆ ಜಯ ಮೃತ್ಯಂಜಯ ಸ್ವಾಮಿಜಿ ಇವರ ಸಾನಿಧ್ಯದಲ್ಲಿ ಜರುಗಿತು. ಸ್ವಾಮಿಜಿ ಇವರು ಸಮಾಜ ಪ್ರಮುಖರಿಗೆ ಮಾರ್ಗದರ್ಶನ ನೀಡಿದರು.
ಬಸವ ಜಯ ಮೃತ್ಯಂಜಯ ಸ್ವಾಮಿಜಿ ಅವರು ರಾಜ್ಯದಲ್ಲಿ ಇತರ ಸಮಾಜಗಳಿಗೆ ಶಿಕ್ಷಣ ನೌಕರಿಗಳಲ್ಲಿ ಒಳ್ಳೆಯ ಮಿಸಲಾತಿ ನೀಡಿದ್ದಾರೆ ಆದರೆ ಲಿಂಗಾಯತ ಸಮಾಜದ ಮಕ್ಕಳಿಗೆ ಶಿಕ್ಷಣ ಮತ್ತು ನೌಕರಿ ಹಾಗೂ ಇತರ ಯಾವುದೆ ಇಲಾಖೆಗೆ ಮಿಸಲಾತಿ ಇಲ್ಲ. ಇದರಿಂದ ಎಷ್ಟೂ ಜಾನ ವಿದ್ಯಾರ್ಥಿಗಳು ಇದ್ದರು ಅವರಿಗೆ ಅವರ ಮೇಲೆ ಅನ್ಯಾಯವಾಗುತ್ತಿದೆ. ಇದನ್ನು ಸಮಾಜದ ಮುಂದೆ ಇಟ್ಟು ಮಿಸಲಾತಿಗಾಗಿ ಹೋರಾಡುತ್ತಿದ್ದೇನೆ.
ಬಿ.ಜೆ.ಪಿ ಪಕ್ಷದ ಆಡಳಿತ ಇದ್ದಾಗ ಲಿಂಗಾಯತ ಸಮಾಜದ ಶಾಸಕರು ಸಚಿವರು ಬೆಂಬಲ ನೀಡಿದರು ಆದರೆ ಕೃತಿಯಲ್ಲಿ ಬರಲಿಲ್ಲಾ ಆ ವೇಳೆ ಕಾಂಗ್ರೇಸ್ ಪಕ್ಷದವರು ನಮ್ಮ ಆಡಳಿತ ಬಂದಾಗ ನಾವು ಮಾಡೇ ತಿರುತ್ತೇವೆ ಎಂದಿದ್ದರು ಈಗ ೧/೨ ವರ್ಷ ಕೆಳೆದರು ನ್ಯಾಯ ನೂಡುತ್ತಿಲ್ಲ ಈ ಕಾರಣ ರಾಜಕೀಯದವರೊಂದಿಗೆ ನ್ಯಾಯವಾದಿಗಳ ಸಹಕಾರದಿಂದ ಬರುವ ಚಳಿಗಾಲ ಅಧಿವೇಶನದಲ್ಲಿ ಉಗ್ರ ಹೋರಾಟ ಕೈಗೊಂಡಿದ್ದೇವೆ ಈ ತಾಲೂಕಿನಿಂದ ಸುಮಾರು ೧೦ ಸಾವಿರ ಜನ ತಮ್ಮ ವಾಹನಗಳನ್ನು ತೆಗೆದುಕೊಂಡು ಪಾಲ್ಗೊಳ್ಳಿರಿ ಎಂದು ಕರೆ ನೀಡಿದರು.