ಹುಕ್ಕೇರಿ : ರಾಜ್ಯದಲ್ಲಿ ಕಿಂಗ್ ಮೇಕರ್ ಆಗಿ ಹೊರಹೊಮ್ಮಿದ ಸತೀಶ ಜಾರಕಿಹೊಳಿ – ಶಾನೂಲ ತಾಶೀಲ್ದಾರ್
ರಾಜ್ಯದಲ್ಲಿಯ ಮೂರು ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಜಯ ಭೇರಿ ಗಳಿಸಲು ಅಹಿಂದ ಮತಗಳನ್ನು ಹಿಡಿದಿಟ್ಟಕೊಂಡ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೋಳಿ ಕಿಂಗ್ ಮೇಕರ ಆಗಿ ಹೋರ ಹೋಮ್ಮಿದ್ದಾರೆ ಎಂದು ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಅಲ್ಪ ಸಂಖ್ಯಾತರ ಅಧ್ಯಕ್ಷ ಶಾನೂಲ ತಹಸಿಲ್ದಾರ ಹೇಳಿದರು.
ಅವರು ಇಂದು ರಾಜ್ಯದಲ್ಲಿಯ ಸೊಂಡೂರು , ಶಿಗ್ಗಾವಿ ಮತ್ತು ಚನ್ನಪಟ್ಟಣದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯ ಭೇರಿ ಗಳಿಸುದ ಹಿನ್ನಲೆಯಲ್ಲಿ ಹುಕ್ಕೇರಿ ನಗರದ ಕೋರ್ಟ ಸರ್ಕಲ್ ಬಳಿ ಪಟಾಕಿ ಸಿಡುಸಿ ವಿಜಯೋತ್ಸವ ಆಚರಿಸಿದರು.
ನಂತರ ಮಾದ್ಯಮಗಳೊಂದಿಗೆ ಮಾತನಾಡುತ್ತಾ ರಾಜ್ದ ಮೂರು ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯ ಸಾಧಿಸಲು ಕಾರಣ ಬಿ ಜೆ ಪಿ ಪಕ್ಷದವರು ಮೂಡಾ ಹಗರಣ ,ವಕ್ಪ್ತ ಬೋರ್ಡ, ಗ್ಯಾರಂಟಿ ವಿಫಲ ಇತ್ಯಾದಿ ಹಗರಣಗಳು ಎಂದು ಸುಳ್ಳು ಹೇಳಿಕೆ ನೀಡಿ ದ್ದರಿಂದ ಕ್ಷೇತ್ರದ ಜನತೆ ಬಿ ಜೆ ಪಿ ಗೆ ತಕ್ಕ ಪಾಠ ಕಲಿಸಿದ್ದಾರೆ, ಮುಂಬರುವ 2028 ಸಾರ್ವರ್ತಿಕ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಈಗಲಾದರು ವಿರೋಧ ಪಕ್ಷದಲ್ಲಿ ಕುಳಿತು ಸುಳ್ಳು ಹೇಳಿಕೆಗಳನ್ನು ನೀಡುವದು ಬಂದ ಮಾಡಬೇಕು. ಶಿಗ್ಗಾಂವಿ ಯಲ್ಲಿ ಸಚಿವ ಸತೀಶ ಜಾರಕಿಹೋಳಿ ಯವರು ತಮ್ಮ ಬೆಂಬಲಿಗರೊಂದಿಗೆ ಬೀಡು ಬಿಟ್ಟು ಅಹಿಂದ ಮತಗಳು ಕಾಂಗ್ರೆಸ್ ಪಕ್ಷಕ್ಕೆ ಬರುವಹಾಗೆ ತಮ್ಮ ಛಾಪು ಮೂಡಿಸಿದ್ದಾರೆ ಇದರಿಂದಾಗ ಸತೀಶ ಜಾರಕಿಹೋಳಿ ಯವರು ಕಿಂಗ್ ಮೇಕರ ಆಗಿ ಹೋರ ಹೊಮ್ಮಿದ್ದಾರೆ ಎಂದರು
ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸತಿಶ ಜಾರಕಿಹೋಳಿ ಪರ ಘೂಷಣೆ ಕೂಗಿ ಪಟಾಕಿ ಸಿಡಿಸಿ ಸಿಹಿ ಹಂಚಿದರು.
ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಗಳ ಹುಕ್ಕೇರಿ ತಾಲೂಕಾ ಅದ್ಯಕ್ಷ ಶಾನೂಲ ತಹಸಿಲ್ದಾರ, ಪುರಸಭೆ ಅದ್ಯಕ್ಷ ಇಮ್ರಾನ ಮೋಮಿನ, ಹುಕ್ಕೇರಿ ಕಾಂಗ್ರೆಸ್ ಬ್ಲಾಕ್ ಅದ್ಯಕ್ಷ ಡಾ, ಸಾದೀಕ ಮಕಾನದಾರ , ಕಬೀರ ಮಲ್ಲಿಕ ,ಮೀರಾ ಚೌಧರಿ, ತಮ್ನನಗೌಡ ಪಾಟೀಲ, ಮೋಹಮ್ಮದ ಮುಜಾವರ, ಪ್ರಕಾಶ ಪಟ್ಟಣಶೇಟ್ಟಿ, ಮಲ್ಲಿಕಾರ್ಜುನ ಕರಡಿ, ಡಾ, ರಾಜು ಪೋತದಾರ, ದಯಾನಂದ ಮರಗುದ್ದಿ ಶೇಖ ಮುಜಾವರ ಮೊದಲಾದವರು ಶಿಗ್ಗಾಂವಿ ಶಾಸಕ ಪಠಾಣ ಮತ್ತು ಸತಿಶ ಜಾರಕಿಹೋಳಿಯವರ ಭಾವಚಿತ್ರವನ್ನು ಪ್ರದರ್ಶಿಸಿ ಘೋಷಣೆ ಕೂಗಿದರು.