ಬೆಳಗಾವಿ – ಕೆ. ಎಲ್. ಎಸ್. ಗೋಗಟೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ (KLS GIT) ಅತ್ಯಂತ ಜನಪ್ರಿಯವಾದ ಅವಲಾಂಚ 2024 ಟೆಕ್ನಿಕಲ್ ಫೆಸ್ಟ್ ಅನ್ನು ಗುರುವಾರ ಉದ್ಘಾಟಿಸಲಾಯಿತು.
ಕಾರ್ಯಕ್ರಮವನ್ನು ಟಿಸಿಎಸ್‌ನ ಪ್ರಾದೇಶಿಕ ಮುಖ್ಯಸ್ಥ ವಿನಯ್ ಶಿವಾಪುರ ಉದ್ಘಾಟಿಸಿದರು. ಕೆಎಲ್‌ಎಸ್ ಜಿಐಟಿಯ ಆಡಳಿತ ಮಂಡಳಿಯ ಅಧ್ಯಕ್ಷ ರಾಜೇಂದ್ರ ಬೆಳಗಾಂವಕರ, ಪ್ರಾಚಾರ್ಯ ಡಾ. ಎಂ. ಎಸ್. ಪಾಟೀಲ, ಐ. ಎಸ್. ಇ. ವಿಭಾಗದ ಮುಖ್ಯಸ್ಥ ಡಾ. ಕಿರಣ ತಾಂಗೋಡ ಮತ್ತು ಏರೋನಾಟಿಕಲ್ ಇಂಜಿನಿಯರಿಂಗ್ ಮುಖ್ಯಸ್ಥ ಪ್ರೊ. ಪರಮೇಶ್ವರ ಬಾಣಕರ ಉಪಸ್ಥಿತರಿದ್ದರು.
ಪ್ರಾಚಾರ್ಯ ಡಾ.ಎಂ.ಎಸ್. ಪಾಟೀಲ್ ಸ್ವಾಗತ ಭಾಷಣದಲ್ಲಿ, ತಾಂತ್ರಿಕ ಉತ್ಕೃಷ್ಟತೆಯನ್ನು ಉತ್ತೇಜಿಸುವಲ್ಲಿ ಸಂಸ್ಥೆಯ ಪಾತ್ರವನ್ನು ವಿವರಿಸಿದರು. ರಾಜೇಂದ್ರ ಬೆಳಗಾಂವಕರ್ ಅವರು, ಕೌಶಲ್ಯ ಮತ್ತು ಅಂತರಶಿಸ್ತೀಯ ಸಹಯೋಗವನ್ನು ಉತ್ತೇಜಿಸುವಲ್ಲಿ ಅವಲಾಂಚ ಪಾತ್ರವನ್ನು ತಿಳಿಸಿ, ಎಲ್ಲರ ಶ್ರಮವನ್ನು ಶ್ಲಾಘಿಸಿದರು.
Laxmi News 24×7