Breaking News

ಹೊಸಬರು, ಹಳಬರನ್ನೂ ಬಿಜೆಪಿಯವರು ಟಚ್ ಮಾಡ್ತಿದ್ದಾರೆ: ಶಾಸಕ ಬಾಬಾಸಾಹೇಬ ಪಾಟೀಲ್

Spread the love

ಬೆಳಗಾವಿ: ಆರಂಭದಲ್ಲಿ ಬಿಜೆಪಿಯಿಂದ ನನಗೆ ಪಕ್ಷ ಸೇರುವಂತೆ ಆಫರ್ ಬಂದಿತ್ತು. ಈಗ ಹಣದ ಆಫರ್ ಬಂದಿಲ್ಲ. ಒಂದು ವರ್ಷದ ಹಿಂದೆ ಆಫರ್ ಬಂದಿತ್ತು. ಇದನ್ನು ಮುಖಂಡರ ಗಮನಕ್ಕೆ ತಂದಿದ್ದೇನೆ. ಒಂದು ವರ್ಷದ ಹಿಂದೆ ನನಗೆ ಪಕ್ಷಕ್ಕೆ ಬರುವಂತೆ ಆಹ್ವಾನ ಮಾಡಿದ್ದರು. ಈಗ ಹಣದ ಡಿಮ್ಯಾಂಡ್ ಯಾರೂ ಮಾಡಿರಲಿಲ್ಲ.

ಸ್ನೇಹ, ವಿಶ್ವಾಸದ ಮೇಲೆ ಬಿಜೆಪಿಯಲ್ಲಿರುವ ಸ್ನೇಹತರು ಆಹ್ವಾನ ಮಾಡಿದ್ದರು. ಆಗ ನಿಮ್ಮ ಪಕ್ಷದಲ್ಲಿ ನೀವು ಇರಿ, ನಮ್ಮ ಪಕ್ಷದಲ್ಲಿ ನಾವು ಇರುತ್ತೇನೆಂದು ಹೇಳಿದ್ದೆ ಎಂದು ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ್ ಹೇಳಿದರು.

ಕಿತ್ತೂರು ಶಾಸಕ ಬಾಬಾಸಾಹೇಬ್ ಪಾಟೀಲ ಅವರಿಗೆ ಬಿಜೆಪಿಯಿಂದ ನೂರು ಕೋಟಿ ಆಫರ್ ಬಗ್ಗೆ ಮಂಡ್ಯ ಶಾಸಕ ರವಿ ಗಣಿಗ ಆರೋಪ ವಿಚಾರಕ್ಕೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರವಿ ಗಣಿಗ ಹೇಳಿರುವುದು ಸುಳ್ಳು. ನನಗೆ ದುಡ್ಡಿನ ಯಾವುದೇ ಆಫರ್ ಬಂದಿಲ್ಲ. ರವಿ ಗಣಿಗ ಅವರು ಯಾಕೆ ಹೇಳಿದ್ದಾರೆಂದು ಅವರನ್ನೇ ಕೇಳಿ. ಅವರ ಬಳಿ ಆಡಿಯೋ ವಿಡಿಯೋ ದಾಖಲೆ ಇದ್ದರೆ ಬಿಡುಗಡೆ ಮಾಡಲಿ ಎಂದರು.

ನೂರಲ್ಲ ಇನ್ನೂರು ಕೋಟಿ ಕೊಟ್ಟರೂ ನಾನು ಹೋಗಲ್ಲ. ಪ್ರಸಂಗ ಬಂದಾಗ ಯಾರು ಕರೆದಿದ್ದಾರೆಂದು ಹೇಳುತ್ತೀನೆ. ದುಡ್ಡಿಗೆ ಮಾರಿಕೊಳ್ಳುವವನು ನಾನಲ್ಲ, ಎಲ್ಲೂ ಹೋಗಲ್ಲ. ಈ ವಿಚಾರವನ್ನು ವರ್ಷದ ಹಿಂದೆ ನಮ್ಮ ನಾಯಕರ ಗಮನಕ್ಕೆ ತಂದಿದ್ದೇನೆ. ಈಗ ಮತ್ತೆ ಯಾರೂ ನನಗೆ ಆಫರ್ ಕೊಟ್ಟಿಲ್ಲ. ಬೇರೆ ಶಾಸಕರಿಗೆ ಆಫರ್ ಮಾಡುತ್ತಿರಬಹುದು. ಬಿಜೆಪಿಯವರು ನಿರಂತರವಾಗಿ ಈ ರೀತಿ ಶಾಸಕರನ್ನು ಸೆಳೆಯುವ ಕೆಲಸ ಮಾಡುತ್ತಿದ್ದಾರೆ. ಬಿಜೆಪಿಯಲ್ಲಿ ಬೇರೆ ಬೇರೆ ನಾಯಕರು ಪ್ರಯತ್ನ ಮಾಡುತ್ತಿದ್ದಾರೆ. ಐದು ವರ್ಷ ನಮ್ಮ ಸರ್ಕಾರ ಗಟ್ಟಿಯಾಗಿರುತ್ತದೆ. ನಾವೆಲ್ಲರೂ ಸಿಎಂ ಸಿದ್ದರಾಮಯ್ಯ ಅವರ ಜೊತೆಗೆ ಇರುತ್ತೇವೆ. ನಮ್ಮನ್ನು ಕರೆಯಬೇಡಿ ಎಂದೂ ಆಗಲೇ ಹೇಳಿದ್ದೇನೆ ಎಂದು ಬಾಬಾಸಾಹೇಬ ಪಾಟೀಲ್ ಹೇಳಿದರು.


Spread the love

About Laxminews 24x7

Check Also

2 ವರ್ಷಗಳಿಂದ ಆರಂಭವಾಗದ ಶುದ್ಧ ನೀರಿನ ಘಟಕಗಳು

Spread the loveಹಾವೇರಿ: ನಗರದ ನಿವಾಸಿಗಳಿಗೆ ಶುದ್ಧ ಕುಡಿಯುವ ನೀರು ಸಿಗಲಿ ಎಂದು ಶಾಸಕರ ಅನುದಾನದಲ್ಲಿ ಆರು ಶುದ್ಧ ಕುಡಿಯುವ ನೀರಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ