ಮುಂಬೈ: ಮಹಾರಾಷ್ಟ್ರ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯೊಬ್ಬರು ಮತಗಟ್ಟೆ ಬಳಿ ಚಪ್ಪಲಿಗಳಿಗೆ ನಿಷೇಧ ಹೇರಬೇಕೆಂಬ ವಿಚಿತ್ರ ಬೇಡಿಕೆಯನ್ನು ಚುನಾವಣಾ ಆಯೋಗದ ಮುಂದಿಟ್ಟಿದ್ದಾರೆ.
ಪರಂದ ಕ್ಷೇತ್ರದ ಅಭ್ಯರ್ಥಿಯಾಗಿರುವ ಗುರುದಾಸ್ ಸಂಭಾಜಿ ಕಾಂಬ್ಳೆ ಚಪ್ಪಲಿಯ ಚಿಹ್ನೆಯಲ್ಲಿ ಸ್ಪರ್ಧಿಸುತ್ತಿದ್ದಾರೆ.
ಹೀಗಾಗಿ, ಅದನ್ನು ಧರಿಸಿದರೆ ಮಾದರಿ ಸಂಹಿತೆ ಉಲ್ಲಂಘನೆಯಾಗುತ್ತದೆ.
ಹೀಗಾಗಿ ಮತಗಟ್ಟೆಯ ಸುತ್ತ 200 ಮೀ. ಚಪ್ಪಲಿಗಳನ್ನು ನಿಷೇಧಿಸಬೇಕು ಎಂದು ಆಯೋಗಕ್ಕೆ ಪತ್ರ ಬರೆದಿದ್ದಾರೆ. ಚುನಾವಣಾ ಆಯೋಗದ ನೀತಿ ಸಂಹಿತೆಯ ಪ್ರಕಾರ ಮತಗಟ್ಟೆಯ ಸಮೀಪ ಅಭ್ಯರ್ಥಿ ತಮ್ಮ ಚಿಹ್ನೆಯ ಪ್ರದರ್ಶನ ಮಾಡಿ, ಪ್ರಚಾರ ನಡೆಸುವಂತಿಲ್ಲ. ಹಾಗಾಗಿ ನೀತಿ ಸಂಹಿತೆ ಉಲ್ಲಂಘನೆ ತಡೆಗಟ್ಟುವ ನಿಟ್ಟಿನಲ್ಲಿ ಆಯೋಗ ಕ್ರಮ ಕೈಗೊಳ್ಳಬೇಕೆಂದು ಗುರುದಾಸ್ ಹೇಳಿದ್ದಾರೆ.