ಹುಕ್ಕೇರಿ : ಯುವಕ,ಯುವತಿಯರಿಗೆ ಉದ್ಯೋಗ ಮಾಡುವ ಮನಸ್ಸು ಇರಬೇಕು – ಚಂದ್ರಶೇಖರ ಮಹಾಸ್ವಾಮಿಗಳು.
ನಮ್ಮ ಯುವಕ, ಯುವತಿಯರಿಗೆ ಉದ್ಯೋಗ ಮಾಡುವ ಮನಸ್ಸು ಇರಬೇಕು ಎಂದು ಹುಕ್ಕೇರಿ ಹಿರೇಮಠದ ಚಂದ್ರಶೇಖರ ಮಹಾಸ್ವಾಮಿಗಳು ಹೇಳಿದರು.
ಹುಕ್ಕೇರಿ ನಗರದ ಸಿ ಎಸ್ ತುಬಚಿ ಶಿಕ್ಷಣ ಸಂಸ್ಥೆ ,ಸಿ ಆರ್ ಶೇಟ್ಟಿ ಫೌಂಡೇಶನ್ ಮತ್ತು ಬೆಳಗಾವಿ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ ಹಾಗೂ ಹುಕ್ಕೇರಿ ಗೆಳೆಯರ ಬಳಗ ವತಿಯಿಂದ ಬೃಹತ್ ಉಚಿತ ಉದ್ಯೋಗ ಮೇಳವನ್ನು ಹುಕ್ಕೇರಿ ಹಿರೇಮಠದ ಚಂದ್ರಶೇಖರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ವಿರಕ್ತ ಮಠದ ಶಿವ ಬಸವ ಮಹಾಸ್ವಾಮಿಗಳ ನೇತೃತ್ವದಲ್ಲಿ ಎಸ್ ಕೆ ಪಬ್ಲಿಕ್ ಶಾಲೆ ಅದ್ಯಕ್ಷ ಪಿಂಟು ಶೇಟ್ಟಿ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.
ವೇದಿಕೆ ಮೇಲೆ ಸಿವ್ಹಿಲ್ ನ್ಯಾಯಾಧೀಶ ಕೆ ಎಸ್ ರೋಟ್ಟೆರ, ಪುರಸಭೆ ಅದ್ಯಕ್ಷ ಇಮ್ರನ್ ಮೋಮಿನ, ಉಪಾದ್ಯಕ್ಷೆ ಜ್ಯೋತಿ ಬಡಿಗೇರ, ನೀಲಾಂಬಿಕಾ ಶೇಟ್ಟಿ, ನ್ಯಾಯವಾದಿ ಅನೀಲ ಶೇಟ್ಟಿ, ಡಾ, ಸರ್ವಮಂಗಳಾ ಕಮತಗಿ, ಡಾ, ಗೀರಿರಾಜ ಶಿರಗೆ , ಸಂತೋಷ ನಾವಲಗಿ, ರಾಘವೇಂದ್ರ ಕುಲಕರ್ಣಿ ,ಎಸ್ ಕೆ ಘಸ್ತಿ ಉಪಸ್ಥಿತರಿದ್ದರು.
ಗೆಳೆಯರ ಬಳಗದ ಸದಸ್ಯರು ಗಣ್ಯರಿಗೆ ಸತ್ಕರಿಸಿ ಅಭಿನಂದಿಸಿದರು.
ಚಂದ್ರಶೇಖರ ಮಹಾಸ್ವಾಮಿಗಳು ಮಾತನಾಡಿ ನಮ್ಮ ಯುವಕ ಯುವತಿಯರಿಗೆ ಉದ್ಯೋಗ ಮಾಡುವ ಮನಸ್ಸು ಇದ್ದರೆ ಉದ್ಯೋಗ ಸಿಕ್ಕೆ ಸಿಗುತ್ತದೆ, ನಮ್ಮ ದೇಶದಲ್ಲಿ ಯಾವದೆ ಉದ್ಯೋಗ ಮಾಡುವದಕ್ಕೆ ಮುಕ್ತ ಅವಕಾಶ ಇದೆ ಆದರೆ ಅದನ್ನು ಸೂಕ್ತವಾಗಿ ಬಳೆಸಿಕೊಳ್ಳುತ್ತಿಲ್ಲಾ ಅವರು ಕೇವಲ ಮೊಬೈಲ್ ಗೀಳಿನಿಂದ ಹೋರಗೆ ಬಂದು ಉದ್ಯೋಗ ದ ಕಡೆ ಗಮನ ಹರಿಸಬೇಕು ಮತ್ತು ಶ್ರದ್ಧೆಯಿಂದ ಕಾಯಕ ಮಾಡಬೇಕು ಎಂದು ಸಲಹೆ ನೀಡಿದರು ( )
ಉದ್ಯೋಗ ಮೇಳದಲ್ಲಿ ಕರ್ನಾಟಕ ,ಮಹಾರಾಷ್ಟ್ರ ಮತ್ತು ಗೋವಾ ರಾಜ್ಯದಿಂದ ಸುಮಾರು 30 ವಿವಿಧ ಕಂಪನಿಗಳು ಭಾಗವಹಿಸಿ 2 ಸಾವಿರ ಉದ್ಯೋಗ ಸೃಷ್ಟಿಸಿ ಯುವಕ ಯುವತಿಯರಿಂದ ವಿವರಣೆ ಪಡೆದುಕೊಂಡವು.
ಸಂಕೇಶ್ವರದ ಗಿರಿಜಾ ಫೌಂಡೇಶನ್ ವತಿಯಿಂದ ಕೌಶಲ್ಯ ಆಧಾರಿತ ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸುಮಾರು 3 ಸಾವಿರ ಉದ್ಯೋಗಾಕಾಂಕ್ಷಿಗಳು ಭಾಗವಹಿಸಿ ತಮ್ಮ ಹೆಸರು ನೊಂದಣಿ ಮಾಡಿದರು.