Breaking News

ಚಿಕ್ಕೋಡಿಯಲ್ಲಿ ವಿಜೃಂಭಣೆಯಿಂದ ಜರುಗಿದ ಮೇದಾರ ಕೇತಯ್ಯಾ ಜಯಂತಿ

Spread the love

ಚಿಕ್ಕೋಡಿಯಲ್ಲಿ ವಿಜೃಂಭಣೆಯಿಂದ ಜರುಗಿದ ಮೇದಾರ ಕೇತಯ್ಯಾ ಜಯಂತಿ

ಚಿಕ್ಕೋಡಿ: ಪಟ್ಟಣದಲ್ಲಿ ಇವತ್ತು ಶಿವಶರಣ ಮೇದಾರ ಕೇತಯ್ಯಾನವರ 894 ನೇ ಜಯಂತೋತ್ಸವ ವಿಜೃಂಭಣೆಯಿಂದ ಜರುಗಿತು.

ಪ್ರಾರಂಭದಲ್ಲಿ ಮೇದಾರ ಕೇತಯ್ಯ ಅವರ ಭಾವಚಿತ್ರದ ಮೆರವಣಿಗೆಯು ಸಕಲ ವಾದ್ಯ ಮೇಳದೊಂದಿಗೆ,ಸುಮಂಗಲಿಯರ ಕುಂಭದೊಂದಿಗೆ ಚಿಕ್ಕೋಡಿ ಪಟ್ಟಣದ್ಯಾಂತ ಜರುಗಿತು. ಮೇದಾರ ಕೇತಯ್ಯಾ ಭವನದಿಂದ ಪ್ರಾರಂಭವಾದ ಮೆರವಣಿಗೆಯು ಅಂಕಲಿಕೂಟ, ಗುರುವಾರ ಪೇಟ, ಪುರಸಭೆ, ಬಸವೇಶ್ವರ ವೃತ್ತದವರೆಗೆ ಅತ್ಯಂತ ವಿಜೃಂಭಣೆಯಿಂದ ಸಾಗಿತು.

ಬಳಿಕ ಬಸವಣ್ಣನವರ ಹಾಗೂ ಮೇದಾರ ಕೇತಯ್ಯಾನವರ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸಲಾಯಿತು. ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿದ್ದ ಕಾಡಾಪುರ ಗ್ರಾಮದ ಸಿದ್ಧಾರೂಢ ಮಠದ ಶ್ರೀ ರಾಜಯೋಗಿ ನಾಗಲಿಂಗ ಮಹಾಸ್ವಾಮೀಜಿಯವರು ಮಾತನಾಡಿ ಕೇತಯ್ಯನವರು ಹನ್ನೆರಡನೆಯ ಶತಮಾನದ ಶ್ರೇಷ್ಠ ವಚನಕಾರ ಹಾಗು ಶರಣರು. ಬಿದಿರುಬುಟ್ಟಿ, ಮೊರ ಮುಂತಾದವುಗಳನ್ನು ಮಾಡಿ ಇದರ ಕಾಯಕದ ಹಣದಿಂದ ದಾಸೋಹ ನಡೆಸಿ, ಪವಿತ್ರಜೀವನವನ್ನು ನಡೆಸಿಕೊಂಡು ಹೋಗುತ್ತಿದ್ದ ಶರಣರು. ವೀರಶೈವ ತತ್ತ್ವವನ್ನು ಅನುಸರಿಸಿ ಜನರಿಗೆ ಬೋಧಿಸಿದವರು. ಶರಣ ಸಿದ್ಧಾಂತವನ್ನು, ವಚನಗಳನ್ನು ಪಸರಿಸಿದವರು ಎಂದರು.


Spread the love

About Laxminews 24x7

Check Also

ಗೋಕಾಕ ನಗರದ ಇತಿಹಾಸದಲ್ಲೇ ಪ್ರಥಮ ಬಾರಿಗೆ, ಗೋಕಾಕ ಇಂಜಿನಿಯರ್ಸ್ ಅಸೋಸಿಯೇಷನ್‌ ಅವರ ವತಿಯಿಂದ ಶ್ರೀ ಮಹಾಲಕ್ಷ್ಮಿ ಭವನದಲ್ಲಿ ಆಯೋಜಿಸಲಾದ “ಬಿಲ್ಡ್ ಟೆಕ್ – 2025” ಕಟ್ಟಡ ನಿರ್ಮಾಣ

Spread the love ಗೋಕಾಕ ನಗರದ ಇತಿಹಾಸದಲ್ಲೇ ಪ್ರಥಮ ಬಾರಿಗೆ, ಗೋಕಾಕ ಇಂಜಿನಿಯರ್ಸ್ ಅಸೋಸಿಯೇಷನ್‌ ಅವರ ವತಿಯಿಂದ ಶ್ರೀ ಮಹಾಲಕ್ಷ್ಮಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ