ವಿದ್ಯುತ್ ಶಾರ್ಟ್ ಸರ್ಕಿಟ್ ನಿಂದ ಸುಟ್ಟು ಭಸ್ಮವಾದ ಕಿರಾಣಿ ಅಂಗಡಿ;ಓರ್ವನಿಗೆ ಗಾಯ
ಅಥಣಿ :ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಕಿರಾಣಿ ಅಂಗಡಿ ಸುಟ್ಟು ಭಸ್ಮವಾದ ಘಟನೆ ಅಥಣಿ ತಾಲೂಕಿನ ಅಡಳ್ಳಿ ಗ್ರಾಮದಲ್ಲಿ ನಡೆದಿದೆ.
ಇಂದು ಬೆಳಿಗ್ಗೆ 9:00 ಗಂಟೆ ಸುಮಾರಿಗೆ ಅಂಗಡಿಯಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ನಂದಿಸಲು ಹೋದ ಇಬ್ಬರಿಗೆ ಗಾಯಗಳಾಗಿವೆ ಓರ್ವ ಬಾಲಕನಿಗೆ ಬೆಂಕಿ ತಿವ್ರತೆಗೆ ಸುಟ್ಟ ಗಾಯಗಳಾಗಿದ್ದು.ಅಪಾರ ಪ್ರಾಮಾನದ ವಸ್ತುಗಳು ನಾಶವಾಗಿವೆ.ಸುಭಾಸ್ ಮಹಾನಿಂಗ ಸೂರ್ಯವಂಶಿ ಮಾಲೀಕತ್ವದ ಅಪ್ಪಾಜಿ ಕಿರಾಣಿ ಅಂಗಡಿಗೆ ಬೆಂಕಿ ತಗುಲಿದ್ದು 5 ಲಕ್ಷ ಕ್ಕೂ ಅಧಿಕ ವಸ್ತುಗಳು ನಾಶವಾಗಿವೆ.
ಬೆಂಕಿ ಅವಘಡದಲ್ಲಿ ಪ್ರೀತಮ್ ಸಂಜಯ ಕಾಂಬಳೆ (15) ಎಂಬ ಬಾಲಕನಿಗೆ ಸುಟ್ಟ ಗಾಯಗಳಾಗಿವೆ.
ಘಟನಾ ಸ್ಥಳಕ್ಕೆ ಅಥಣಿ ಅಗ್ನಿಶಾಮಕ ದಳ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಐಗಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.