ಜಮ್ಮೀರ್ ಅಹಮದ್ ಬಂದ ಮೇಲೆ ಹಿಂದೂಗಳನ್ನು ಸೈತಾನ್‌ಗೆ ಹೋಲಿಕೆ ಮಾಡಿ ಪ್ರಚೋದನೆ ಕೊಟ್ಟರು ಎಂದಿರುವ ಬಸನಗೌಡ ಪಾಟೀಲ್ ಯತ್ನಾಳ್, ಅಧಿಕಾರಿಗಳಿಗೆ ಧಮ್ಕಿ ಹಾಕಿ ಹೆದರಿಸಿ ಬೆದರಿಸಿದ್ದಾರೆ. ಅಧಿಕಾರಿಗಳು ಕೂಡ ನಮ್ಮ ಬಳಿ ಅಳಲು ತೋಡಿಕೊಂಡಿದ್ದಾರೆ. ಹೀಗಾಗಿ ಟ್ರಿಬ್ಯುನಲ್ ರದ್ದು ಮಾಡಬೇಕು ಎಂದು ಹೇಳಿದರು.
ಬಿಜೆಪಿ ಕಾಲದಲ್ಲಿನ ಏನನ್ನೂ ಸಮರ್ಥನೆ ಮಾಡಿಕೊಳ್ಳೋದಿಲ್ಲ ಎಂದ ಯತ್ನಾಳ್, ಆ ಪ್ರಕ್ರಿಯೆ ಒಳಗೆ ಅವ್ರು ಕೊಟ್ಟೇ ಕೊಟ್ಟಿರ್ತಾರೆ. ಆದರೆ ನಮ್ಮ ಸಮಾಜಕ್ಕೆ ಅನ್ಯಾಯ ಆಗ್ತಿದೆ. ಜಮ್ಮೀರ್ ಅಹಮದ್ ಮಾಡಿದ್ದು ಸರೀನಾ? ನಮ್ಮ ಹೋರಾಟ ಬಿಜೆಪಿಯಡಿಯಲ್ಲಿಯೇ ನಡೆಯುತ್ತೆ ಎಂದು ಹೇಳಿದರು.
ಇನ್ನು, ವಕ್ಪ್ ಆಸ್ತಿ ಕುರಿತು ಜನ ಜಾಗೃತಿಗೆ ಹೈಕಮಾಂಡ್ ಬೆಂಬಲವಿರುವ ವಿಚಾರದ ಬಗ್ಗೆ ಮಾತನಾಡಿದ ಬಸನಗೌಡ ಪಾಟೀಲ್ ಯತ್ನಾಳ್, ಅನುಮತಿ ಪ್ರಶ್ನೆ ಅಲ್ಲ, ಆದರೆ ವಾಲ್ಮೀಕಿ ಹೋರಾಟಕ್ಕೆ ಅನುಮತಿ ಕೊಟ್ಟಿರಲಿಲ್ಲ. ನಾವು ರಮೇಶ್ ಜಾರಕಿಹೊಳಿ ಸೇರಿ ಎಲ್ಲರೂ ದೆಹಲಿಯಲ್ಲಿ ಹೋಗಿ ಪ್ರಯತ್ನ ಮಾಡಿದ್ವಿ. ಆದರೆ ಪಾದಯಾತ್ರೆಗೆ ಯಾಕೆ ಅವ್ರು ಅವಕಾಶ ಕೊಟ್ಟಿಲ್ವೋ ಗೊತ್ತಿಲ್ಲ. ಆದರೆ ವಕ್ಪ್ ಬಗ್ಗೆ ನರೇಂದ್ರ ಮೋದಿ ಎಲ್ಲರೂ ಧ್ವನಿಗೂಡಿಸಿದ್ದಾರೆ. ಇದರ ಅರ್ಥ ನಮ್ಮ ಹೋರಾಟಕ್ಕೆ ಬೆಂಬಲ ಇದೆ. ಕೇಂದ್ರ ಸರ್ಕಾರ ತರಲು ಹೊರಟಿರೋ ಕಾಯ್ದೆಗಾಗಿ ನಾವು ಹೋರಾಟ ಮಾಡಬೇಕು. ಇದರ ನೇತೃತ್ವ ಬಿಜೆಪಿಯಲ್ಲಿ ಯಾವುದೇ ಒಂದು ವ್ಯಕ್ತಿಯ ನೇತೃತ್ವದಲ್ಲಿ ಅಲ್ಲ, ಈ ಹೋರಾಟಕ್ಕೆ ಎಲ್ಲರೂ ಸಹಕಾರ ಕೊಡ್ತಾರೆ ಎಂದು ಹೇಳಿದರು.