Breaking News

ಬೀಡಾಡಿ ದನಗಳ ಹಾವಳಿ: ತಡೆಗೆ ಮುಂದಾದ ಪುರಸಭೆ

Spread the love

ಬೀಡಾಡಿ ದನಗಳ ಹಾವಳಿ: ತಡೆಗೆ ಮುಂದಾದ ಪುರಸಭೆ

ಚಿಕ್ಕೋಡಿ: ಪಟ್ಟಣದ ರಸ್ತೆಗಳ ಮೇಲೆ ಬೇಕಾಬಿಟ್ಟಿಯಾಗಿ ಜಾನುವಾರುಗಳನ್ನು ಬಿಟ್ಟಿದ್ದಾರೋ, ಅವರೆಲ್ಲರೂ ತಮ್ಮ ಜಾನುವಾರುಗಳನ್ನು ತೆಗೆದುಕೊಂಡು ಹೋಗಬೇಕು. ಇಲ್ಲದೇ ಹೋದಲ್ಲಿ ಗೋಶಾಲೆಗಳಿಗೆ ಜಾನುವಾರುಗಳನ್ನು ರವಾನೆ ಮಾಡುವುದಾಗಿ ಪುರಸಭೆ ಎಚ್ಚರಿಕೆ ನೀಡಿದೆ.

ಬೀಡಾಡಿ ದನಗಳು ರಸ್ತೆ ಮೇಲೆ ತಿರುಗಾಡುವುದು, ಮಲಗುವುದು ಮಾಡುತ್ತಿರುವುದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ.

ಹೀಗಾಗಿ ಮಕ್ಕಳು, ಪಾದಚಾರಿಗಳ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ಕೂಡಲೇ ಬೀಡಾಡಿ ದನಗಳ ಮಾಲೀಕರು ತಮ್ಮ ತಮ್ಮ ಜಾನುವಾರುಗಳನ್ನು ಗುರುತಿಸಿ ತೆಗೆದುಕೊಂಡು ಹೋಗದೇ ಇದ್ದಲ್ಲಿ ಚಿಕ್ಕೋಡಿ ಪುರಸಭೆಯಿಂದ ಬೀಡಾಡಿ ದನಗಳನ್ನು ಹಿಡಿದು ಗೋಶಾಲೆಗಳಿಗೆ ರವಾನೆ ಮಾಡಲಾಗುವುದು. ನಂತರ ಯಾರೇ ಈ ಕುರಿತು ದೂರು ನೀಡಿದರೂ ತಮ್ಮ ಅಹವಾಲನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ ಎಂದು ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ ನಾಗನೂರ ತಿಳಿಸಿದ್ದಾರೆ.

ಬೀಡಾಡಿ ದನಗಳ ಹಾವಳಿ ಕುರಿತು ‘ಬೆಂಬಿಡದ ಬೀಡಾಡಿ ದನಗಳ ಹಾವಳಿ’ ಎಂಬ ಶೀರ್ಷಿಕೆ ಅಡಿಯಲ್ಲಿ ಪ್ರಜಾವಾಣಿಯಲ್ಲಿ ನ.14ರಂದು ವಿಶೇಷ ವರದಿ ಪ್ರಕಟಿಸಿತ್ತು. ಈ ಹಿನ್ನೆಲೆಯಲ್ಲಿ ಚಿಕ್ಕೋಡಿ ಪುರಸಭೆಯು ಬೀಡಾಡಿ ದನಗಳ ಹಾವಳಿ ತಪ್ಪಿಸಲು ಮುಂದಾಗಿದೆ. ಈ ಕುರಿತು ಗುರುವಾರ ಪುರಸಭೆ ಕಚೇರಿಯಿಂದ ಧ್ವನಿವರ್ಧಕದ ಮೂಲಕ ಸೂಚನೆ ನೀಡಲಾಯಿತು.


Spread the love

About Laxminews 24x7

Check Also

ಕೋರ್ಟ್‌, ಏರ್‌ಪೋರ್ಟ್‌ಗೆ 1,100 ಹುಸಿ ಬಾಂಬ್ ಬೆದರಿಕೆ – ಮೈಸೂರಲ್ಲಿ ಆರೋಪಿ ಅರೆಸ್ಟ್‌

Spread the loveಮೈಸೂರು: ದೇಶದ ನಾನಾ ಭಾಗಗಳಲ್ಲಿ ವಿಧ್ವಂಸಕ ಕೃತ್ಯ ನಡೆಸುವ ಇಮೇಲ್ ರವಾನಿಸುತ್ತಿದ್ದ ವ್ಯಕ್ತಿಯನ್ನು ದೆಹಲಿ ಪೊಲೀಸರು  ಮೈಸೂರಿನಲ್ಲಿ  …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ