Breaking News

ರಾಜ್ಯ ಬಿಜೆಪಿಯಲ್ಲಿ ಭಿನ್ನಮತೀಯರಿಂದ ಪ್ರತ್ಯೇಕ ಹೋರಾಟ! ವಕ್ಫ್ ಅಕ್ರಮದ ವಿರುದ್ಧ ತೊಡೆತಟ್ಟಿದ ಅತೃಪ್ತರ ತಂಡ!

Spread the love

ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ (Karnataka BJP) ಎಲ್ಲವೂ ಸರಿಯಿಲ್ಲ ಅನ್ನೋದು ಜಗಜ್ಜಾಹೀರಾಗಿರುವ ಸಂಗತಿ. ನಳಿನ್ ಕುಮಾರ್ ಕಟೀಲ್ ನಂತರ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬಿವೈ ವಿಜಯೇಂದ್ರ ಅವರನ್ನು ಆಯ್ಕೆ ಮಾಡುತ್ತಿದ್ದಂತೆ ಭಿನ್ನಮತೀಯರ ಗುಂಪು (BJP Rebels Team) ಸಕ್ರಿಯವಾಗಿತ್ತು.

ಇದೀಗ ಮತ್ತೆ ಆಕ್ಟೀವ್ ಆಗಿರುವ ಬಿಜೆಪಿ ಭಿನ್ನಮತೀಯರ ಗುಂಪು ಇಂದು ಸುದ್ದಿಗೋಷ್ಠಿ ಕರೆದು ಮಹತ್ವದ ವಿಷಯಗಳನ್ನು ಬಹಿರಂಗಪಡಿಸಿದೆ. ಬಿಜೆಪಿ ರೆಬೆಲ್ ನಾಯಕರು ಮೊದಲ ಹಂತದ ಪ್ರತ್ಯೇಕ ಹೋರಾಟ ಘೋಷಣೆ ಮಾಡಿದ್ದು, ವಕ್ಪ್ ಆಸ್ತಿ ವಿವಾದವನ್ನೇ ಮೊದಲ ಹೋರಾಟವಾಗಿ ತಗೊಂಡು ರಾಜ್ಯಾದ್ಯಂತ ಪ್ರವಾಸದ ಬಗ್ಗೆ ನಿರ್ಧಾರ ಮಾಡಿದ್ದಾರೆ. ಬಿಜೆಪಿ ಮುಖಂಡ ಕುಮಾರ್ ಬಂಗಾರಪ್ಪ ಸದಾಶಿವನಗರದಲ್ಲಿರುವ ಮನೆಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅತೃಪ್ತ ನಾಯಕರಾದ ರಮೇಶ್ ಜಾರಕಿಹೊಳಿ,‌ ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ್ ಲಿಂಬಾವಳಿ ಸೇರಿ ಹಲವರು ಇಂತಹುದೊಂದು ಹೋರಾಟವನ್ನು ಘೋಷಣೆ ಮಾಡಿದ್ದಾರೆ.

ಮಾಜಿ ಶಾಸಕ‌ ಕುಮಾರ್ ಬಂಗಾರಪ್ಪ ಅವರ ಸದಾಶಿವನಗರದಲ್ಲಿರುವ ನಿವಾಸದಲ್ಲಿ ಸುದ್ದಿ ಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಶಾಸಕ ಅರವಿಂದ್ ಲಿಂಬಾವಳಿ, ವಕ್ಪ್ ಬಗ್ಗೆ ಬಹಳಷ್ಟು ಸಮಸ್ಯೆಗಳು ಕಂಡು ಬಂದಿವೆ. ಯತ್ನಾಳ್ ಅವ್ರು ವಿಜಯಪುರದಲ್ಲಿ ಹೋರಾಟ ಶುರು ಮಾಡಿದ್ರು. ಇದರ ಪರಿಣಾಮವಾಗಿ ಕೇಂದ್ರದ ಕಾನೂನು ತಿದ್ದುಪಡಿಗೆ ರಚನೆಯಾಗಿರುವ ಜಂಟಿ ಸಮಿತಿ ಅಧ್ಯಕ್ಷರು ಭೇಟಿ ಕೊಟ್ಟಿದ್ರು. ಇದರಿಂದ ಹೋರಾಟವನ್ನು ತಾತ್ಕಾಲಿಕವಾಗಿ ನಿಲ್ಲಿಸಿದ್ದಾರೆ ಎಂದು ಹೇಳಿದರು.

ಮುಂದುವರಿದು ಮಾತನಾಡಿದ ಲಿಂಬಾವಳಿ, ವಕ್ಪ್ ಬಗ್ಗೆ ನಮಗೆ ಅನೇಕ ದೂರುಗಳನ್ನು ಸಲ್ಲಿಸುತ್ತಿದ್ದಾರೆ. ಬಿಜೆಪಿಯ ನೇತೃತ್ವದಲ್ಲಿ ನಾವೆಲ್ಲರೂ ಸೇರಿ ಜನ ಜಾಗೃತಿ ಅಭಿಯಾನ ನಡೆಸಲು ತೀರ್ಮಾನ ಮಾಡಿದ್ದೇವೆ. ನವೆಂಬರ್ 25ರಿಂದ ಡಿಸೆಂಬರ್ 25ರ ವರೆಗೆ ಅಭಿಯಾನ ಕೈಗೊಂಡಿದ್ದೇವೆ. ಇದಕ್ಕಾಗಿ ಒಂದು ವಾರ್ ರೂಮ್ ತೆರೆಯುತ್ತಿದ್ದೇವೆ‌. ವಕ್ಪ್ ಆಸ್ತಿಯಿಂದ ಸಮಸ್ಯೆಗೆ ಒಳಗಾದವರು ಕರೆ ಮಾಡಿ ಮಾಹಿತಿ ಒದಗಿಸಬೇಕು. ಇದಕ್ಕಾಗಿ ವಾಟ್ಸಾಪ್ ನಂಬರ್ 9035675734 ಕೊಡುತ್ತಿದ್ದೇವೆ. ನಮ್ಮ ಯಾವುದೇ ನಾಯಕರ ಬಳಿಯೂ ಬಂದು ಮಾಹಿತಿ ಒದಗಿಸಬಹುದು ಎಂದು ಹೇಳಿದರು.

ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದಲ್ಲಿ ರಮೇಶ್ ಜಾರಕಿಹೊಳಿ, ಕುಮಾರ್ ಬಂಗಾರಪ್ಪ, ಬಿಪಿ ಹರೀಶ್, ಬಿ ವಿ ನಾಯಕ್ ಸೇರಿ ಎಲ್ಲರೂ ಸೇರಿ ಬೀದರ್‌ನಿಂದ ಈ ಹೋರಾಟ ಪ್ರಾರಂಭ ಮಾಡ್ತೀವಿ ಎಂದ ಲಿಂಬಾವಳಿ, ಬೀದರ್, ಗುಲ್ಬರ್ಗ, ಯಾದಗಿರಿ, ವಿಜಯಪುರ ಬಾಗಲಕೋಟೆ, ಬೆಳಗಾವಿ ಮೊದಲ ಹಂತದಲ್ಲಿ ಪ್ರವಾಸ ಮಾಡ್ತೀವಿ. 1954ರಿಂದ ರಚನೆ ಆಗಿರುವ ರಾಜ್ಯ ಪತ್ರವನ್ನು ರದ್ದು ಗೊಳಿಸಬೇಕು, ವಕ್ಪ್ ಸಂಬಂಧಿಸಿದಂತೆ ಎಲ್ಲವನ್ನೂ ರದ್ದು ಮಾಡಬೇಕು. ರೈತರು, ಮಠ ಮಂದಿರ, ದೇವಸ್ಥಾನ ಗಳು, ಉಳಿದಂತೆ ಯಾವ್ಯಾವುದು ವಕ್ಪ್ ಆಸ್ತಿ ಬರ್ತಿದೆ ಅದೆಲ್ಲವೂ ಸರ್ಕಾರ ವಾಪಸ್ಸು ಕೊಡಬೇಕು. ನಮ್ಮ ಸರ್ಕಾರ ಇದ್ದಾಗ ಅನ್ವಾರ್ ಮಾಣಪ್ಪಾಡಿ ವರದಿ ಸದನದಲ್ಲಿ ಮಂಡನೆಯಾಗಿತ್ತು. ಅದರ ಆಧಾರದಲ್ಲಿ ಕ್ರಮವನ್ನು ಕೈಗೊಳ್ಳುವಂತೆ ಮೂರು ಬೇಡಿಕೆ ಮುಂದಿಟ್ಟು ಜನ ಜಾಗೃತಿ ಮಾಡ್ತೀವಿ ಎಂದು ಹೇಳಿದರು.


Spread the love

About Laxminews 24x7

Check Also

ವಧು–ವರ ಮೆಳವಿಗಳು ಹಾಗೂ ಸಾಮೂಹಿಕ ವಿವಾಹ ಸಮಾರಂಭಗಳು ಪವಿತ್ರ ಪುಣ್ಯಕಾರ್ಯ : ಶಾಸಕ ಮಾರುತ್ತಿರಾವ್ ಮುಳೆ

Spread the love ವಧು–ವರ ಮೆಳವಿಗಳು ಹಾಗೂ ಸಾಮೂಹಿಕ ವಿವಾಹ ಸಮಾರಂಭಗಳು ಪವಿತ್ರ ಪುಣ್ಯಕಾರ್ಯ : ಶಾಸಕ ಮಾರುತ್ತಿರಾವ್ ಮುಳೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ