Breaking News

ಕಲಘಟಗಿ: ಬಾಕಿ ₹73 ನೀಡಲು ಕಬ್ಬು ಬೆಳೆಗಾರರ ಮನವಿ

Spread the love

ಲಘಟಗಿ: ಕಬ್ಬು ಬೆಳೆಗಾರರ ಸಂಘಟನೆ ಹೋರಾಟದಿಂದ ಕಬ್ಬು ಕಟಾವು ಮತ್ತು ಸಾಗಾಣಿಕೆ ವೆಚ್ಚದಲ್ಲಿ ಕಡಿತಗೊಳಿಸಿ ಪ್ರತಿ ಟನ್‌ ಕಬ್ಬಿಗೆ ₹183 ಹಳಿಯಾಳದ ಈಐಡಿ ಶುಗರ್ ಕಾರ್ಖಾನೆಯವರು ನೀಡಲು ಒಪ್ಪಿಕೊಂಡಿದ್ದು ಬಾಕಿ ಉಳಿದ ₹73 ಕೊಡಲು ಹಾಗೂ ವಿವಿಧ ಬೇಡಿಕೆ ಈಡೇರಿಸಲು ಜಿಲ್ಲಾ ಕಬ್ಬು ಬೆಳೆಗಾರರ ಸಂಘಟನೆಯಿಂದ ಜಿಲ್ಲಾಧಿಕಾರಿ ದಿವ್ಯಪ್ರಭು ಅವರಿಗೆ ಈಚೆಗೆ ಮನವಿ ಸಲ್ಲಿಸಿದರು.

 

ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪರಶುರಾಮ ಎತ್ತಿನಗುಡ್ಡ ಮಾತನಾಡಿ, ‘ಕಳೆದ ವರ್ಷ ತಾಲ್ಲೂಕಿನ ರೈತರ ಸುಮಾರು ಆರು ಲಕ್ಷ ಟನ್ ಕಬ್ಬನ್ನು ನುರಿಸಿದ್ದು ಇದರ ಲಾಭ ರೈತರಿಗೆ ನೀಡುವುದು ಹಾಗೂ ಕಳೆದ ವರ್ಷ ಸರ್ಕಾರ ಆದೇಶ ಮಾಡಿದ ಕಬ್ಬು ಕಟಾವು ಮತ್ತು ಸಾಗಾಣಿಕೆ ವೆಚ್ಚದಲ್ಲಿ ₹256 ಮತ್ತು ಉಪ ಉತ್ಪನ್ನಗಳ ಲಾಭಾಂಶದಲ್ಲಿ ₹119ಅನ್ನು ರೈತರಿಗೆ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿದರು.

ಕಬ್ಬು ಕಟಾವು ಮಾಡುವಾಗ ರೈತರು ಲಗಾನಿ ವೆಚ್ಚ ನೀಡಬಾರದು ಹಾಗೂ ಪ್ರತಿ ಗ್ರಾಮವಾರು ಕಬ್ಬು ಬೆಳೆಗಾರರ ಆದ್ಯತಾ ಪಟ್ಟಿ ಪ್ರದರ್ಶಿಸಲು ಒತ್ತಾಯಿಸಲಾಯಿತು.

ಕಬ್ಬು ಬೆಳೆಗಾರರ ಸಂಘದ ರಾಜ್ಯ ಕಾರ್ಯದರ್ಶಿ ನಿಜಗುಣಿ ಕೆಲಗೇರಿ, ಜಿಲ್ಲಾ ಘಟಕದ ಅಧ್ಯಕ್ಷ ಮಹೇಶ ಬೆಳಗಾವಕರ, ಉಪ್ಪಾಧ್ಯಕ್ಷ ಉಳವಪ್ಪ ಬಳಿಗೆರ, ವಸಂತ ಡಾಕಪ್ಪನವರ, ಶಂಭು ಬಳಿಗೇರ, ಮಾದೇವಪ್ಪ ಇದ್ದರು.


Spread the love

About Laxminews 24x7

Check Also

ನಾಯಕತ್ವ ಬದಲಾವಣೆ ವಿಚಾರವಾಗಿ ರಾಹುಲ್​ ಗಾಂಧಿ​ ತೀರ್ಮಾನಕ್ಕೆ ನಾನು ಬದ್ಧ: ಸಿಎಂ

Spread the loveಮೈಸೂರು: “ನಾಯಕತ್ವ ಬದಲಾವಣೆ ವಿಚಾರವಾಗಿ ರಾಹುಲ್​ ಗಾಂಧಿ ಮತ್ತು ಹೈಕಮಾಂಡ್​ ತೀರ್ಮಾನ ಮಾಡಬೇಕು. ಅವರು ಏನು ತೀರ್ಮಾನ ಮಾಡುತ್ತಾರೋ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ