Breaking News

ಶಾಸಕರಿಗೆ 50 ಕೋಟಿ ಆಫರ್ : ಸಿಎಂ ಹೇಳಿಕೆ ಸಮರ್ಥಿಸಿಕೊಂಡ ಪರಮೇಶ್ವರ್

Spread the love

ಬೆಂಗಳೂರು,ನ.14- ರಾಜ್ಯಸರ್ಕಾರವನ್ನು ಅಸ್ಥಿರಗೊಳಿಸಲು ಪ್ರತಿಯೊಬ್ಬ ಶಾಸಕರಿಗೂ 50 ಕೋಟಿ ರೂ.ಗಳ ಆಮಿಷ ಒಡ್ಡುತ್ತಿರುವುದಾಗಿ ಮುಖ್ಯಮಂತ್ರಿಯವರು ಹೇಳಿರುವುದರಲ್ಲಿ ಅರ್ಥ ಇದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಸಮರ್ಥಿಸಿ ಕೊಂಡಿದ್ದಾರೆ.

 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಮತ್ತು ಜೆಡಿಎಸ್‌‍ ಪಕ್ಷಗಳು ಸರ್ಕಾರವನ್ನು ಅಸ್ಥಿರಗೊಳಿಸಲು ಎಲ್ಲಾ ಪ್ರಯತ್ನಗಳನ್ನೂ ಸತತವಾಗಿ ನಡೆಸುತ್ತಿವೆ. ಮುಡಾ ಪ್ರಕರಣದ ಆರೋಪ ಸೇರಿದಂತೆ ಎಲ್ಲಾ ಯತ್ನಗಳೂ ಸರ್ಕಾರವನ್ನು ಅಸ್ಥಿರಗೊಳಿಸುವ ಸಲುವಾಗಿಯೇ ನಡೆಯುತ್ತಿವೆ ಎಂದರು.
ಈಗ ಶಾಸಕರಿಗೆ ಆಮಿಷವೊಡ್ಡಿ ಸರ್ಕಾರ ಪತನಗೊಳಿಸಲು ಯತ್ನಿಸುತ್ತಿದ್ದಾರೆ.

ಮಹಾರಾಷ್ಟ್ರದಲ್ಲಿ 42 ಮಂದಿ ಶಾಸಕರನ್ನು ಹಣ ಕೊಟ್ಟು ಕರೆತಂದು ಸರ್ಕಾರ ರಚಿಸಿದ್ದರು. ಇಲ್ಲಿಯೂ ಅಂತಹುದೇ ಪ್ರಯತ್ನ ಮೊದಲು ನಡೆಸಿ ಯಶಸ್ವಿಯಾಗಿದ್ದರು. ಈಗಲೂ ಅದೇ ಚಾಳಿಯನ್ನು ಮುಂದುವರೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯವರು ತಮಗಿರುವ ಮಾಹಿತಿ ಆಧರಿಸಿ ಹೇಳಿಕೆ ನೀಡಿದ್ದಾರೆ.

ಇದನ್ನೆಲ್ಲಾ ಜನ ಗಮನಿಸುತ್ತಾರೆ. ಕೆಲವೊಮೆ ತಪ್ಪು ಕಲ್ಪನೆಗಳು ಬಂದರೂ ನಾವು ಜನಸಮುದಾಯದ ನಡುವೆ ಹೋಗಿ ವಿವರಣೆ ನೀಡುತ್ತೇವೆ. ಜನ ಕಣ್ಣು ಮುಚ್ಚಿಕೊಂಡು ಎಲ್ಲವನ್ನೂ ಸ್ವೀಕರಿಸುವುದಿಲ್ಲ , ಅವರನ್ನು ತಿರಸ್ಕಾರ ಮಾಡುತ್ತಾರೆ ಎಂದರು.

ನಮಗೆ ಯಾವುದೇ ಆತಂಕ ಇಲ್ಲ. ಸರ್ಕಾರ ಅಸ್ಥಿರಗೊಳಿಸಲು ಅವಕಾಶ ನೀಡುವುದಿಲ್ಲ. ಅವರ ಪ್ರಯತ್ನವನ್ನು ವಿಫಲಗೊಳಿಸುತ್ತೇವೆ. ಬೃಹತ್‌ ಪ್ರಮಾಣದ ಜನಾದೇಶ ಇದ್ದಾಗಿಯೂ ಬಿಜೆಪಿ ನಡೆಸುತ್ತಿರುವ ಪ್ರಯತ್ನಗಳು ಆಕ್ಷೇಪಾರ್ಹ ಎಂದು ಹೇಳಿದರು. ಒಳಮೀಸಲಾತಿ ಯಾವಾಗ ಎಂಬ ಪ್ರಶ್ನೆ ಸದಾಕಾಲ ಎದುರಾಗುತ್ತಲೇ ಇದೆ. ಅದಕ್ಕೆ ತಾರ್ಕಿಕ ಅಂತ್ಯ ಎಂಬ ನಿಟ್ಟಿನಲ್ಲಿ ರಾಜ್ಯಸರ್ಕಾರ ಈಗ ನಾಗಮೋಹನದಾಸ್‌‍ ಅವರ ಸಮಿತಿಯನ್ನು ರಚನೆ ಮಾಡಿದ್ದು, ಪರಿಶಿಷ್ಟ ಜಾತಿಗಳ ವೈಜ್ಞಾನಿಕ ಹಾಗೂ ಸಮರ್ಥನೀಯ ದತ್ತಾಂಶ ಸಂಗ್ರಹಕ್ಕೆ ಮುಂದಾಗಿದೆ.

ಮೂರು ತಿಂಗಳ ಒಳಗಾಗಿ ಆಯೋಗ ತನ್ನ ವರದಿಯನ್ನು ನೀಡಲಿದೆ. ಅನಂತರ ಸರ್ಕಾರ ನಿರ್ಧಾರ ತೆಗೆದುಕೊಳ್ಳಲಿದೆ ಎಂದರು.ಶೇ.40ರಷ್ಟು ಕಮಿಷನ್‌ ಹಗರಣದ ತನಿಖೆಯನ್ನು ನಾಗಮೋಹನದಾಸ್‌‍ ಅವರ ನೇತೃತ್ವದ ಆಯೋಗಕ್ಕೆ ನೀಡಲಾಗಿದೆ. ಈಗ ಒಳಮೀಸಲಾತಿಯ ಕುರಿತಂತೆಯೂ ಸಮಿತಿ ರಚಿಸಿರುವುದರಿಂದ ನಾಗಮೋಹನ್‌ ದಾಸ್‌‍ ಅವರಿಗೆ ಕಾರ್ಯದೊತ್ತಡ ಹೆಚ್ಚಾಗಬಹುದು ಎಂಬ ಅಭಿಪ್ರಾಯ ಅನಗತ್ಯ. ಅವರ ಕೆಲಸಗಳಿಗೆ ಅಗತ್ಯವಾದ ಸಿಬ್ಬಂದಿಗಳನ್ನು ಒದಗಿಸಲಾಗುವುದು. ಇದು ಓವರ್‌ಲ್ಯಾಪ್‌ ಆಗುವುದಿಲ್ಲ ಎಂದು ಹೇಳಿದರು.


Spread the love

About Laxminews 24x7

Check Also

ಗೋಡಚಿನಮಲ್ಕಿ ನಿಸರ್ಗ ಜಲಪಾತಕ್ಕೆ ಪ್ರವಾಸಿಗರ ದಂಡು

Spread the love ಹುಕ್ಕೇರಿ : ಗೋಕಾಕ ತಾಲೂಕಿನ ಗೋಡಚಿನಮಲ್ಕಿ ನಿಸರ್ಗ ಜಲಪಾತಕ್ಕೆ ಪ್ರವಾಸಿಗರ ದಂಡು ಪಶ್ಚಿಮಘಟ್ಟ ಪ್ರದೇಶಗಳಲ್ಲಿ ಧಾರಾಕಾರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ