ಬೆಳಗಾವಿ: ‘ನಿಸ್ವಾರ್ಥ ಸೇವಾ ಮನೋಭಾವದಿಂದ ಯಾವುದೇ ಸಂಸ್ಥೆ ಬೆಳವಣಿಗೆ ಹೊಂದಲು ಸಾಧ್ಯವಾಗುತ್ತದೆ. ಇದಕ್ಕೆ ಕೆಎಲ್‌ಇ ಸಂಸ್ಥೆಯೇ ಸಾಕ್ಷಿ’ ಎಂದು ನಿರ್ದೇಶಕ ಡಾ. ಎಸ್.ಸಿ. ಧಾರವಾಡ ಹೇಳಿದರು.
ಇಲ್ಲಿನ ಕೆಎಲ್‌ಇ ಶತಮಾನೋತ್ಸವ ಚಾರಿಟಬಲ್ ಆಸ್ಪತ್ರೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕೆಎಲ್‌ಇ ಸಂಸ್ಥೆಯ 109ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೆಎಲ್‌ಇ ಹೊಮಿಯೋಪಥಿಕ್ ಕಾಲೇಜಿನ ಪ್ರಾಚಾರ್ಯ ಡಾ.ಎಂ.ಎ.ಉಡಚನಕರ ‘ಶಿಕ್ಷಣ ದಾಸೋಹದ ಉದ್ದೇಶದಿಂದ ಆರಂಭಗೊಂಡ ಕೆಎಲ್‌ಇ ಸಂಸ್ಥೆ ಇಂದು ಶಿಕ್ಷಣ, ವೈದ್ಯಕೀಯ ಶಿಕ್ಷಣ, ತಾಂತ್ರಿಕ ಶಿಕ್ಷಣ, ಕೃಷಿ ಹಾಗೂ ಸಂಶೋಧನಾ ರಂಗಗಳಲ್ಲಿ ಇಡೀ ವಿಶ್ವವೇ ನಮ್ಮತ್ತ ತಿರುಗಿನೋಡುವಂಥ ಸಾಧನೆ ಮಾಡಿದೆ’ ಎಂದು ಶ್ಲಾಘಿಸಿದರು.
ಕೆಎಲ್‌ಇ ಸೆಂಟೇನರಿ ಇನ್‌ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸ್‌ನ ಪ್ರಾಚಾರ್ಯ ಡಾ.ವಿಕ್ರಾಂತ ನೇಸರಿ ಮಾತನಾಡಿದರು. ಡಾ.ಎಂ.ಎಸ್.ಕಡ್ಡಿ, ಡಾ.ಆರ್.ಜಿ.ನೆಲವಿಗಿ ಇತರರಿದ್ದರು.