ಕಾಗವಾಡ: ಪಟ್ಟಣದಲ್ಲಿ ನ್ಯಾಯಾಲಯ ಕಟ್ಟಡ ನಿರ್ಮಿಸಲು ಆಗಿನ ಎಪಿಎಂಸಿ ಸಚಿವ ಬಂಡೆಪ್ಪಾ ಕಾಶಪ್ಪನ್ನವರ ಅನುಮತಿ ನೀಡಿದ್ದರು. ಆದರೇ ಕೆರೆ ಪಕ್ಕದ ಜಾಗ ಬಫರ್ ಝೋನ್ ಎಂದು ಪರಿಗಣಿಸಿ ನ್ಯಾಯಾಲಯ ನಿರ್ಮಾಣಕ್ಕಾಗಿ ಅಡ್ಡಿ ಉಂಟಾಗಿ ಅದು ನೆನೆಗುದಿಗೆ ಬಿದ್ದಿದ್ದು,
ದಿ. 12 ರಂದು ಪಟ್ಟಣದಲ್ಲಿ ತಾಲೂಕಾ ವಕೀಲರ ಸಂಘದ ಸದಸ್ಯರು ಹಮ್ಮಿಕೊಂಡಿರುವ ಅನಿರ್ಧಿಷ್ಠಾವಧಿ ಮುಷ್ಕರ ಇಂದು ಎರಡನೇ ದಿನಕ್ಕೆ ಕಾಲಿಟ್ಟಿದ್ದು ಉಗ್ರವಾಗಿ ಹೋರಾಟ ಪ್ರಾರಂಭಿಸಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಕಾಗವಾಡ ಕ್ಷೇತ್ರದ ಬಹುಭಾಗ ಕಬ್ಬು ಬೆಳೆಯುವ ಪ್ರದೇಶವಾಗಿದ್ದು, ಇಲ್ಲಿ ಎಪಿಎಂಸಿಯ ಅವಶ್ಯಕತೆ ಅಷ್ಟೇನೂ ಇಲ್ಲಾ. ಆದ್ದರಿಂದ ಎಪಿಎಂಸಿ ಬಳಿ ಇರುವ ಹೆಚ್ಚುವರಿ ಜಾಗವನ್ನು ಸರ್ಕಾರ ನ್ಯಾಯಾಲಯ ಕಟ್ಟಡಕ್ಕೆ ನೀಡಬೇಕು.
ಇನ್ನೂ ಮುಷ್ಕರ ಇಂದು ಎರಡನೇ ದಿನಕ್ಕೆ ಕಾಲಿಟ್ಟಿದ್ದು, ತಾಲೂಕಿನ ಜುಗೂಳ, ಮಂಗಸೂಳಿ, ಉಗಾರ ಬಿಕೆ, ಕಾಗವಾಡ ಗ್ರಾಮ ಪಂಚಾಯತಿಗಳು, ಪಿಕೆಪಿಎಸ್ ಸಂಘಗಳು, ದಲಿತ ಸಂಘಟನೆಗಳು, ರೈತ ಸೇವಾ ಸೊಸೈಟಿ, ಕಾರ್ಮಿಕ ಸಂಘಟನೆಗಳು, ಕಾರ್ಯನಿರತ ಪತ್ರಕರ್ತರ ಸಂಘದಿAದ ಬೆಂಬಲ ಸೂಚಿಸಿದ್ದಾರೆ.
ಮುಷ್ಕರ ನಿರತ ವಕೀಲರ ಸಂಘದ ಅಧ್ಯಕ್ಷ ಪಿ.ಎ. ಮಾನೆ ಮಾತನಾಡಿ, ನಮಗೆ ನ್ಯಾಯ ದೊರೆಯದೇ ಇದ್ದಲ್ಲಿ ನಾಳೆಯಿಂದ ಉಗ್ರವಾಗಿ ಹೋರಾಟ ಪ್ರಾರಂಭಿಸಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಕಾಗಾವಾಡ ನ್ಯಾಯವಾಗಳ ಸಂಘ ಕಾಗವಾಡ
ಕಾಗಾವಾಡ ನ್ಯಾಯಾಲಯದ ಸ್ಥಳದ ಮಂಜೂರಾತಿಗಾಗಿ ಅನಿರ್ದಿಸ್ಟ್ ಧರಣಿ ಸತ್ಯಾಗ್ರಹಕ್ಕೆ ಐನಪುರ ಪಟ್ಟಣ ಪಂಚಾಯತ್ ಅಧ್ಯಕ್ಷರು ಸರೋಜಿನಿ ಗಾಣಿಗೇರ ಹಾಗೂ ಉಪಾಧ್ಯಕ್ಷರು ಹಾಗೂ ಸದಸ್ಯರಾದ ಪ್ರವೀಣ್ ಗಾಣಿಗೇರ ಸಂಜಯ್ ಭೀರಡಿ ಈಶ್ವರ್ ಹರಳೆ ಹಾಗೂ ಮುಖಂಡರಾದ ಸುಭಾಸ್ ಪಾಟೀಲ್ ಯಶ್ವಂತ ಪಾಟೀಲ್ ರಾಕೇಶ್ ಕಾರ್ಚಿ ಪ್ರಕಾಶ್ ಚೀನಗಿ ಹಲವರು ನ್ಯಾಯವಾದಿಗಳ ಸಂಘದ ಅಧ್ಯಕ್ಷರು ಪ್ರಕಾಶ್ ಮನೆ ಯವರಿಗೆ ಹಾಗೂ ಸಂಘಕ್ಕೆ ಬೆಂಬಲ ವ್ಯಕ್ತ ಪಡಿಸಿದರು