Breaking News

ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಸವಣೂರಿನ ದಂಡಿನಪೇಟೆಯ 500ಕ್ಕೂ ಹೆಚ್ಚು ಮತದಾರರು, ಮತದಾನ ಬಹಿಷ್ಕಾರ

Spread the love

ಹಾವೇರಿ: ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಸವಣೂರಿನ ದಂಡಿನಪೇಟೆಯ 500ಕ್ಕೂ ಹೆಚ್ಚು ಮತದಾರರು, ಮತದಾನ ಬಹಿಷ್ಕಾರ ಮಾಡಿದ್ದಾರೆ.

‘ನಮಗೆ ಮನೆಯ ಹಕ್ಕುಪತ್ರ ನೀಡಿಲ್ಲ’ ಎಂದು ಆರೋಪಿಸುತ್ತಿರುವ ದೂರುದಾರರು, ಮನೆ ಮುಂದೆ ಫಲಕ ಹಾಕಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಶಿಗ್ಗಾವಿ | ಮತದಾನ ಬಹಿಷ್ಕಾರ: ಮನೆ ಮುಂದೆ ಫಲಕ ಹಾಕಿ ಆಕ್ರೋಶ

‘ಚುನಾವಣಾ ಬಹಿಷ್ಕಾರ ಪ್ರದೇಶ’ ಎಂದು ಫಲಕ ಹಾಕಿರುವ ಮತದಾರರು, ‘ಉಳುವವನೇ ಭೂಮಿ ಒಡೆಯ ದಲಿತನ ಜಮೀನನ್ನು ಬೇರೊಬ್ಬ ವ್ಯಕ್ತಿಗೆ ಮಾಡಿಕೊಂಡ ಕಂದಾಯ ಇಲಾಖೆ. ಮೂಲ ನಿವಾಸಿಗಳಿಗೆ ಹಕ್ಕು ಪತ್ರ ನೀಡುತ್ತೇವೆ ಎಂದು ಉಪ ವಿಭಾಗಾಧಿಕಾರಿಗಳ ಸುಳ್ಳು ಭರವಸೆ’ ಎಂದು ಫಲಕ ಹಾಕಿದ್ದಾರೆ.

’80 ವರ್ಷದಿಂದ ನಾವು ಇಲ್ಲಿ ವಾಸವಿದ್ದೇವೆ. ನಮಗೆ ಮನೆ ಪಟ್ಟಾ ನೀಡಿಲ್ಲ. ದಾಖಲೆಗಳನ್ನು ಎಲ್ಲವನ್ನೂ ಅಕ್ರಮವಾಗಿ ತಿದ್ದುಪಡಿ ಮಾಡಿದ್ದಾರೆ. ನಮಗೆ ಆಗಿರುವ ಅನ್ಯಾಯವನ್ನು ಖಂಡಿಸಿ ಮತದಾನ ಬಹಿಷ್ಕಾರ ಮಾಡಿದ್ದೇವೆ’ ಎಂದು‌ ಮಾಲತೇಶ ಕುಂದಗೋಳ ಅಳಲು ತೋಡಿಕೊಂಡರು.


Spread the love

About Laxminews 24x7

Check Also

ಫಿನಾಯಿಲ್ ಮಾರಾಟ ಮಾಡುತ್ತ ಚಿನ್ನದಂಗಡಿ ದೋಚಿದ್ದ ರಾಜಸ್ಥಾನಿ ಗ್ಯಾಂಗ್

Spread the loveಬೆಂಗಳೂರು : ಫಿನಾಯಿಲ್ ಸರಬರಾಜು ಮಾಡುತ್ತ ಚಿನ್ನದಂಗಡಿ ದೋಚಿದ್ದ ಐವರು ಆರೋಪಿಗಳನ್ನ ಕೆ. ಆರ್. ಪುರಂ ಠಾಣೆ ಪೊಲೀಸರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ