ನವದೆಹಲಿ, ನವೆಂಬರ್ 11: ಉದ್ಯೋಗಿಗಳಿಗೆ ಮಹತ್ವದ ಮಾಹಿತಿಯೊಂದಿದೆ. ಕೇಂದ್ರ ಸರ್ಕಾರ ನೌಕರರ ಭವಿಷ್ಯ ನಿಧಿ ಸಂಘಟನೆ (ಇಪಿಎಫ್‌ಒ) ನಿಯಮದಲ್ಲಿ ಬದಲಾವಣೆ ಮಾಡಲು ಮುಂದಾಗಿದೆ. ಉದ್ಯೋಗಿಗಳ ಸಾಮಾಜಿಕ ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ಈ ಬದಲಾವಣೆಗೆ ತಯಾರಿ ನಡೆಸಿದೆ.
ಈ ಕುರಿತು ಈಗಾಗಲೇ ಚರ್ಚೆಗಳು ಆರಂಭವಾಗಿವೆ. ಸದ್ಯ ರೂ. 15 ರೂ. ವೇತನ ಪಡೆಯುತ್ತಿರುವವರು ಇಪಿಎಫ್‌ಒ ವ್ಯಾಪ್ತಿಗೆ ಸೇರುತ್ತಿದ್ದಾರೆ.
ಕೇಂದ್ರ ಸರ್ಕಾರ ಇಪಿಎಫ್‌ಒಗೆ ಇರುವ ಗರಿಷ್ಠ ವೇತನ ಮಿತಿಯನ್ನು 15 ಸಾವಿರದಿಂದ 21,000 ರೂ.ಗಳಿಗೆ ಏರಿಕೆ ಮಾಡಲು ತಯಾರಿ ನಡೆಸಿದೆ. 20214ರಲ್ಲಿನ ವೇತನ ಸಮಿತಿಯ ವರದಿಯ ಬಳಿಕ ಗರಿಷ್ಠ ವೇತನ ಮಿತಿಯನ್ನು 15,000 ರೂ.ಗಳಿಗೆ ನಿಗದಿ ಮಾಡಲಾಗಿತ್ತು.
ಈ ಕುರಿತು ಈಗಾಗಲೇ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಹಣಕಾಸು ಸಚಿವಾಲಯಕ್ಕೆ ಏಪ್ರಿಲ್‌ನಲ್ಲಿಯೇ ವರದಿ ಸಲ್ಲಿಕೆ ಮಾಡಿದೆ. ಈ ಪ್ರಸ್ತಾವನೆಗೆ ಈಗ ಒಪ್ಪಿಗೆ ನೀಡುವ ಸಾಧ್ಯತೆ ಇದೆ ಎಂಬ ಮಾಹಿತಿ ಇದೆ. ಸಚಿವಾಲಯ ಅನುಮೋದನೆ ನೀಡುವುದು ಬಹುತೇಕ ಖಚಿತವಾಗಿದೆ.
ದಶಕದ ಬಳಿಕ ವೇತನ ಮಿತಿ ಹೆಚ್ಚಳ: ಸದ್ಯ ಇಪಿಎಫ್‌ಒ ವೇತನ ಮಿತಿ 15,000 ರೂ. ಇದೆ. 2014ರಲ್ಲಿ ವೇತನ ಸಮಿತಿಯ ಶಿಫಾರಸು ಆಧರಿಸಿ ಕನಿಷ್ಠ ವೇತನ ಮಿತಿಯನ್ನು 6,500 ರೂ.ಗಳಿಂದ 15,000 ರೂ.ಗಳಿಗೆ ಏರಿಕೆ ಮಾಡಲಾಗಿತ್ತು. ಈಗ ದಶಕದ ಬಳಿಕ ವೇತನ ಮಿತಿ ಮತ್ತೆ ಏರಿಕೆಯಾಗಿ 21,000 ರೂ.ಗಳಿಗೆ ಏರಿಕೆಯಾಗಲಿದೆ.
Laxmi News 24×7